ಭದ್ರಗಿರಿ ಶ್ರೀ ವೀರವಿಠ್ಠಲ ದೇವಳದಲ್ಲಿ ದುರ್ಗಾ ನಮಸ್ಕಾರ ಸಂಪನ್ನ

| Published : Oct 07 2024, 01:33 AM IST

ಭದ್ರಗಿರಿ ಶ್ರೀ ವೀರವಿಠ್ಠಲ ದೇವಳದಲ್ಲಿ ದುರ್ಗಾ ನಮಸ್ಕಾರ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಪಂಡರಾಪುರ ಖ್ಯಾತಿಯ ಇಲ್ಲಿನ ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ನವರಾತ್ರಿಯಂದು ವರ್ಷಂಪ್ರತಿ ಜರುಗುವ ಶ್ರೀ ದುರ್ಗಾ ನಮಸ್ಕಾರ ಕಾರ್ಯಕ್ರಮ ಶನಿವಾರ ಸಾಯಂಕಾಲ ವೇದಮೂರ್ತಿಗಳಾದ ಕಲ್ಯಾಣಪುರ ರಾಮಚಂದ್ರ ಅವಧಾನಿ, ಕಾರ್ಕಳ ಜಯದೇವ ಪುರಾಣಿಕ್, ಕೃಷ್ಣಾನಂದ ಶರ್ಮ ಇವರ ನೇತೃತ್ವದಲ್ಲಿ ವೈಭವದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ದಕ್ಷಿಣ ಪಂಡರಾಪುರ ಖ್ಯಾತಿಯ ಇಲ್ಲಿನ ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ನವರಾತ್ರಿಯಂದು ವರ್ಷಂಪ್ರತಿ ಜರುಗುವ ಶ್ರೀ ದುರ್ಗಾ ನಮಸ್ಕಾರ ಕಾರ್ಯಕ್ರಮ ಶನಿವಾರ ಸಾಯಂಕಾಲ ವೇದಮೂರ್ತಿಗಳಾದ ಕಲ್ಯಾಣಪುರ ರಾಮಚಂದ್ರ ಅವಧಾನಿ, ಕಾರ್ಕಳ ಜಯದೇವ ಪುರಾಣಿಕ್, ಕೃಷ್ಣಾನಂದ ಶರ್ಮ ಇವರ ನೇತೃತ್ವದಲ್ಲಿ ವೈಭವದಿಂದ ನಡೆಯಿತು.ದಿನವಿಡೀ ಉಪವಾಸವಿದ್ದು ವ್ರತ ಹಿಡಿದ ದೇವಳದ ಭಕ್ತಾದಿಗಳು ದುರ್ಗಾ ಸಪ್ತಶತಿಯ ಮಂತ್ರದೊಂದಿಗೆ ಪುಷ್ಪಾಂಜಲಿ ಸಲ್ಲಿಸಿ 108 ಪ್ರದಕ್ಷಿಣಾ ಸಹಿತ ನಮಸ್ಕಾರಗಳನ್ನು ಹಾಕಿದರು. ಮಹಾಪೂಜೆಯ ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭ ದೇವಾಲಯದ ಆಡಳಿತೆ ಮೊಕ್ತೇಸರ ಭದ್ರಗಿರಿ ಪಾಂಡುರಂಗ ಆಚಾರ್ಯ, ಗೌರವಾಧ್ಯಕ್ಷ ನಾಗರಮಠ ಮಂಜುನಾಥ ನಾಯಕ್, ವಿಶ್ವಸ್ಥ ಮಂಡಳಿ ಸದಸ್ಯರಾದ ಭದ್ರಗಿರಿ ವಿಠ್ಠಲದಾಸ ಆಚಾರ್ಯ, ಪ್ರಭಾಕರ ಭಟ್, ಗಣೇಶ ಪೈ ಪರ್ಕಳ, ಗಿರಿಧರ ರಾವ್, ಕೆ. ಸಿ. ಪ್ರಭು, ಭದ್ರಗಿರಿ ರಘುವೀರ ಆಚಾರ್ಯ, ಭಾಸ್ಕರ ಶೆಣೈ, ಸುರೇಶ ಶೆಣೈ, ಉದಯ ಪಡಿಯಾರ್, ಭದ್ರಗಿರಿ ವೀರವಿಠ್ಠಲ ಭಜನಾ ಮಂಡಳಿಯ ಸದಸ್ಯರಾದ ಕೆ. ಪಿ. ಕಿಣಿ, ಅರ್ಚಕರಾದ ಸದಾನಂದ ಆಚಾರ್ಯ ಹಾಗೂ ವೆಂಕಟೇಶ ಶೆಣೈ, ಸುಭಾಷ ಭಟ್, ಸುಧೀರ ಭಟ್, ರಾಜಾರಾಮ ಪೈ, ಚಂದ್ರಕಾಂತ ಗಡಿಯಾರ್, ದಿನೇಶ ನಾಯಕ್, ಶ್ರೀನಿವಾಸ ಪೈ, ದಿನೇಶ ಪಡಿಯಾರ್, ರವಿಚಂದ್ರ ಶೆಣೈ, ಮಹೇಶ ಆಚಾರ್ಯ, ರಾಧಾ ಜಿ. ಪೈ , ಆಶಾ ಆಚಾರ್ಯ ಮತ್ತು ನೂರಾರು ಮಂದಿ ಭಜಕರು ಉಪಸ್ಥಿತರಿದ್ದರು