ಜಾನಪದ ಲೋಕದಲ್ಲಿ ದಸರಾ ಬನ್ನಿ ಪೂಜೆ ಸಂಪನ್ನ

| Published : Oct 06 2025, 01:00 AM IST

ಸಾರಾಂಶ

ರಾಮನಗರ: ನಗರದ ಜಾನಪದ ಲೋಕದಲ್ಲಿ ದಸರಾ ಪ್ರಯುಕ್ತ ಬನ್ನಿ ಮುಡಿಯುವ ಕಾರ್ಯಕ್ರಮ ಸಂಪನ್ನಗೊಂಡಿತು.

ರಾಮನಗರ: ನಗರದ ಜಾನಪದ ಲೋಕದಲ್ಲಿ ದಸರಾ ಪ್ರಯುಕ್ತ ಬನ್ನಿ ಮುಡಿಯುವ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಹಿ.ಚಿ.ಬೋರಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳನ್ನು ಕರೆಸಿ ನಮ್ಮ ಕಾರ್ಯಕ್ರಮಗಳನ್ನು ಪರಿಚಯಿಸುವುದರಿಂದ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪಕಾರ್ಯದರ್ಶಿ ಎಚ್.ಕೆ.ಸುರೇಶ್ ಬಾಬು ಮಾತನಾಡಿ, ನಾಗೇಗೌಡರು ಕಟ್ಟಿರುವ ಜಾನಪದ ಲೋಕ ತುಂಬಾ ಆಕರ್ಷಕವಾಗಿದೆ. ಮೊದಲ ಬಾರಿಗೆ ದಸರಾ ಹಬ್ಬದ ಈ ಸಂದರ್ಭದಲ್ಲಿ ಜಾನಪದ ಲೋಕ ನೋಡಿ ಸಂತೋಷವಾಗಿದೆ. ಜಾನಪದ ಲೋಕ ಕಣ್ತುಂಬಾ ನೋಡಬಹುದಾದ ಪ್ರವಾಸಿ ಸ್ಥಳ ಮತ್ತು ಜಾನಪದೀಯ ವಸ್ತುಸಂಗ್ರಹಾಲಯ ವಿಶಿಷ್ಟವಾಗಿದ್ದು ನಮ್ಮ ಪೂರ್ವಜರನ್ನು ನೆನಪಿಸುತ್ತವೆ ಎಂದರು. ಬೆಂಗಳೂರು ನಗರ ಜಿಲ್ಲಾ ಸಹಾಯಕ ನಿರ್ದೇಶಕರಾದ ಆರ್.ಚಂದ್ರಶೇಖರ್ ಬನ್ನಿ ಪೂಜೆಯನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕಲಾಶಾಲೆ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ಪೂಜೆ ಕುಣಿತ, ಪಟಾ ಕುಣಿತ, ಕಂಸಾಳೆ ಕುಣಿತದಿಂದ ಪ್ರವಾಸಿಗರನ್ನು ಆಕರ್ಷಿಸಿದರು.5ಕೆಆರ್ ಎಂಎನ್ 14.ಜೆಪಿಜಿ

ರಾಮನಗರದ ಜಾನಪದ ಲೋಕದಲ್ಲಿ ದಸರಾ ಪ್ರಯುಕ್ತ ಹಮ್ಮಿಕೊಂಡಿದ್ದ ಜಾನಪದ ಕಲಾ ಪ್ರದರ್ಶನಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಚಾಲನೆ ನೀಡಿದರು. ಕಲಾಶಾಲೆ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ಪೂಜೆ ಕುಣಿತ, ಪಟಾ ಕುಣಿತ, ಕಂಸಾಳೆ ಕುಣಿತದಿಂದ ಪ್ರವಾಸಿಗರನ್ನು ಆಕರ್ಷಿಸಿದರು.