ಮಳೆಯ ಸಿಂಚನದ ನಡುವೆ ಸಂಗೀತ ರಸದೌತಣ

| Published : Oct 05 2024, 01:30 AM IST

ಸಾರಾಂಶ

ಭಾರತೀಯ ವಿದ್ಯಾಭವನದ ಕಲಾಭಾರತಿ ತಂಡದವರು ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ದಸರಾ ಮಹೋತ್ಸವ ಅಂಗವಾಗಿ ಅರಮನೆ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಸಂಗೀತದ ರಸದೌತಣ ಉಣಬಡಿಸಲಾಯಿತು.

ಸಂಜೆ ಎಂ.ಎನ್‌. ಗಣೇಶ್‌ ಮತ್ತು ತಂಡದವರ ನಾದಸ್ವರದೊಡನೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮವು ಪ್ರೇಕ್ಷಕರನ್ನು ಮಳೆಯ ನಡುವೆಯು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.

ಶಿವಶರಣ್ಯ ಎಸ್‌. ಸ್ವಾಮಿ ಮತ್ತು ತಂಡದವರು ತತ್ವಪದ ಗಾಯನದ ಮೂಲಕ ಅನುಭಾವದ ಕದ ತಟ್ಟಿದರು. ಬಳಿಕ ಭಾರತೀಯ ವಿದ್ಯಾಭವನದ ಕಲಾಭಾರತಿ ತಂಡದವರು ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಗಾಯನವು ಉತ್ತಮ ಮತ್ತು ದಕ್ಷಿಣಗಳ ಸಮ್ಮಿಳನಕ್ಕೆ ಕಾರಣವಾಯಿತು.

ಬಳಿಕ ಕನ್ನಡ ಕಲಾಲಯ ಟ್ರಸ್ಟ್‌ನ ವಿದುಷಿ ಎಲ್‌. ಪ್ರಿಯಾಂಕಾ ಅವರು ನಡೆಸಿಕೊಟ್ಟ ನವದುರ್ಗಾ ವೈಭವ ನೃತ್ಯರೂಪಕವು ಚಾಮುಂಡೇಶ್ವರಿಯ ಅಪರಾವತಾರದಂತೆ ಗೋಚರಿಸಿತು.

ನಂತರ ಪಂಡಿತ್‌ನರಸಿಂಹಲು ವಡವಾಟಿ ಮತ್ತು ಕದ್ರಿ ರಮೇಶ್‌ ನಾಥ್‌ಅವರ ಕ್ಲಾರಿಓಯನೆಟ್‌ ಸ್ಯಾಕ್ಸೋಫೋನ್‌ಜುಗಲ್‌ಬಂಧಿಯು ಸಂಗೀತ ಪ್ರಿಯರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ದಿತು.

ರಂಗಕರ್ಮಿ ಎಚ್‌. ಜನಾರ್ಧನ್‌ಮತ್ತು ತಂಡದವರ ಜನಪದ ಸಂಭ್ರಮ ಮತ್ತು ಅಗಮ್‌ಬ್ಯಾಂಡ್‌ ನ ಹರೀಶ್‌, ಶಿವರಾಮ್‌ ಕೃಷ್ಣನ್‌ತಂಡದವರ ಕರ್ನಾಟಕ ಶಾಸ್ತ್ರೀಯ ವಾದ್ಯವು ಪ್ರೇಕ್ಷಕರನ್ನು ಹೆಚ್ಚೆದ್ದು ಕುಣಿಯುವಂತೆ ಮಾಡಿತು.