ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಪವರ್ ಸ್ಟಾರ್ ಪುನೀತ್ ರಾಜಕುಮಾರ್ ನೆನಪಿನಲ್ಲಿ ದಸರಾ ಸಾಂಸ್ಕೃತಿಕ ಮತ್ತು ಮಹಿಳಾ ಮತ್ತು ಮಕ್ಕಳ ಸಮಿತಿ ವತಿಯಿಂದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಗಂಧದಗುಡಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.600ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿ ಪರಿಸರ ಚಿತ್ರಗಳನ್ನು ಬಿಡಿಸಿದರು. 8 ರಿಂದ 12 ವರ್ಷದ ವಯೋಮಾನದಲ್ಲಿ ಪ್ರಥಮ ಸ್ಥಾನ ಕಮಲಾಕರ್, ದ್ವಿತೀಯಾ ಸ್ಥಾನ ಅದಿತಿ, ತೃತೀಯ ಸ್ಥಾನ ಸ್ನೇಹಾರ್ಚನಾ, 12 ರಿಂದ 8 ವರ್ಷದ ವಯೋಮಾನದಲ್ಲಿ ಪ್ರಥಮ ಚೇತನ್, ದ್ವಿತೀಯ ವಿಷ್ಣುಪ್ರಸಾದ, ತ್ರಿಷಾ ತೃತೀಯ ಸ್ಥಾನ ಪಡೆದಿದ್ದಾರೆ.18 ವರ್ಷದ ಮೇಲ್ಪಟ್ಟವರಲ್ಲಿ ಮಧುಸೂದನ್, ಸಾನಿಕಾ, ಮಧುಸೂದನ್ ಪ್ರಶಸ್ತಿ ಪಡೆದುಕೊಂಡರು.600ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಯಿತು. ಈ ವೇಳೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಮಾತನಾಡಿ, ಪುನೀತ್ ರಾಜಕುಮಾರ್ ಅವರ ಒಂದೊಂದು ಚಿತ್ರವು ಯುವ ಪೀಳಿಗೆಗೆ ಉತ್ತಮ ಸಂದೇಶ ನೀಡಿವೆ. ಹಲವಾರು ಬ್ರಾಂಡಿಂಗ್ ರಾಯಭಾರಿಯಾಗಿ ಮತ್ತು ಸರ್ಕಾರಿ ಜಾಹೀರಾತು, ಖಾಸಗಿ ವಾಹಿನಿಯ ನಿರೂಪಕರಾಗಿ ಬರುವ ಸಂಭಾವನೆಯನ್ನು ಅನಾಥಶ್ರಮ, ವೃದ್ದಾಶ್ರಮಗಳಿಗೆ ಕೊಡುಗೆ ನೀಡಿ ಹಲವಾರು ಮಂದಿಗೆ ಆಸರೆಯಾಗಿದ್ದಾಗಿ ಅವರು ತಿಳಿಸಿದರು.ನಂತರ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮಾತಾನಾಡಿ, ಪುನೀತ್ ರಾಜಕುಮಾರ್ ಅವರ ತಂದೆ ರಾಜಣ್ಣ ಅವರಿಂದ ಪ್ರೇರೆಪಿತರಾಗಿ ಪ್ರೇಮದ ಕಾಣಿಕೆ ಬಾಲ್ಯದ ದಿನದಲ್ಲೇ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದರು. ಪುನೀತ್ ಅವರ ನೆನಪಿನಲ್ಲಿ ವಸ್ತುಪ್ರದರ್ಶನದಲ್ಲಿ ಯಾವುದಾದರು ವೃತ್ತಕ್ಕೆ ನಾಮಕರಣ ಮಾಡಲಿ ಎಂದರು.ಕೆ.ಆರ್. ಬ್ಯಾಂಕ್ ನಿರ್ದೇಶಕ ಶಿವಪ್ರಕಾಶ್, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಘುರಾಜೇ ಅರಸ್, ಮಹಿಳಾ ಮತ್ತು ಮಕ್ಕಳ ಸಮಿತಿ ಅಧ್ಯಕ್ಷೆ ಶಾರದಾ ಸಂಪತ್, ನಿರೂಪಕ ಅಜಯ್ ಶಾಸ್ತ್ರಿ, ರತನ್ ಚಿಕು, ದೀಕ್ಷಿತ್, ರಂಗಸ್ವಾಮಿ, ಗುರುರಾಜ್, ಪದ್ಮನಾಭ್, ಜಗದೀಶ್, ನಾಗರತ್ನ, ಲತಾ, ಗಿರೀಶ್, ಸಚಿನ್ ನಾಯಕ, ನಾಗೇಶ್ ಇದ್ದರು.