ದಸರಾ ಜನೋತ್ಸವ ಕಾಫಿ ಟೇಬಲ್ ಬುಕ್ 29ರಂದು ಲೋಕಾರ್ಪಣೆ

| Published : Sep 27 2024, 01:17 AM IST

ಸಾರಾಂಶ

ದಸರಾ ಜನೋತ್ಸವದ ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಿ ಪತ್ರಕರ್ತ ಅನಿಲ್‌ ಎಚ್‌.ಟಿ. ಪ್ರಕಟಿಸಿರುವ 132 ವರ್ಣಪುಟಗಳ ಸಂಗ್ರಹಯೋಗ್ಯ ಕೖತಿಯಾಗಿರುವ ‘ಮಡಿಕೇರಿ ದಸರಾ ಜನೋತ್ಸವ’ವನ್ನು ಸೆ.೨೯ರಂದು ಸಂಜೆ 4 ಗಂಟೆಗೆ ಮಡಿಕೇರಿಯ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ ಲೋಕರ್ಪಣೆಗೊಳಿಸುವರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ದಸರಾ ಜನೋತ್ಸವ ಹಿನ್ನಲೆ ಮತ್ತು ನಾಡಹಬ್ಬದ ಮಹತ್ವ ತಿಳಿಸುವ ಮಡಿಕೇರಿ ಜನೋತ್ಸವ ದಸರಾ ಕಾಫಿ ಟೇಬಲ್ ಪುಸ್ತಕ 29ರಂದು ಮಡಿಕೇರಿಯಲ್ಲಿ ಲೋಕಾರ್ಪಣೆಯಾಗಲಿದೆ.

ದಸರಾ ಜನೋತ್ಸವದ ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಿ ಪತ್ರಕರ್ತ ಅನಿಲ್‌ ಎಚ್‌.ಟಿ. ಪ್ರಕಟಿಸಿರುವ 132 ವರ್ಣಪುಟಗಳ ಸಂಗ್ರಹಯೋಗ್ಯ ಕೖತಿಯಾಗಿರುವ ‘ಮಡಿಕೇರಿ ದಸರಾ ಜನೋತ್ಸವ’ವನ್ನು ಅಂದು ಸಂಜೆ 4 ಗಂಟೆಗೆ ಮಡಿಕೇರಿಯ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ ಲೋಕರ್ಪಣೆಗೊಳಿಸುವರು. ಮಡಿಕೇರಿ ದಸರಾಕ್ಕೆ ರೂಪುರೇಷೆ ನೀಡಿದ್ದ ದಿ. ಭೀಮ್ ಸಿಂಗ್ ಅವರ ಪುತ್ರಿ ಶಾರದಾಭಾಯಿ ಮತ್ತು ಮಂಟಪಗಳಿಗೆ ವಿನೂತನ ವಿನ್ಯಾಸ ನೀಡಿದ್ದ ನಗರದ ಹಿರಿಯ ಶಿವರಾಮ್ ಶೆಟ್ಟಿ ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್‌. ಪೊನ್ನಣ್ಣ ಸನ್ಮಾನಿಸಲಿದ್ದಾರೆ.

ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಮಾಜಿ ಸಚಿವ ಎಂ.ಸಿ. ನಾಣಯ್ಯ, ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಜಿ. ಬೋಪಯ್ಯ, ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ವೆಂಕಟರಾಜಾ, ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ‘ಶಕ್ತಿ’ ಪತ್ರಿಕೆಯ ಸಂಪಾದಕ ಜಿ ಚಿದ್ವಿಲಾಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ,

ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಬಿ ವೈ ರಾಜೇಶ್, ದಶಮಂಟಪ ಸಮಿತಿ ಅಧ್ಯಕ್ಷ ಜಗದೀಶ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಲೇಖಕ ಅನಿಲ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.