ಸಾರಾಂಶ
ರಾಮನಗರ: ನಗರದ ಹೊರ ವಲಯದ ಜಾನಪದ ಲೋಕದಲ್ಲಿ ನವರಾತ್ರಿ ದಸರಾ ಹಬ್ಬದ ಅಂಗವಾಗಿ ದಸರಾ ಬೊಂಬೆಗಳ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಆಯೋಜಿಸಿರುವ ದಸರಾ ಬೊಂಬೆಗಳ ಪ್ರದರ್ಶನ ಇಂದಿನಿಂದ ಒಂದು ತಿಂಗಳ ಕಾಲ ಇರಲಿದೆ.
ರಾಮನಗರ: ನಗರದ ಹೊರ ವಲಯದ ಜಾನಪದ ಲೋಕದಲ್ಲಿ ನವರಾತ್ರಿ ದಸರಾ ಹಬ್ಬದ ಅಂಗವಾಗಿ ದಸರಾ ಬೊಂಬೆಗಳ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಆಯೋಜಿಸಿರುವ ದಸರಾ ಬೊಂಬೆಗಳ ಪ್ರದರ್ಶನ ಇಂದಿನಿಂದ ಒಂದು ತಿಂಗಳ ಕಾಲ ಇರಲಿದೆ.
ಜಾನಪದ ಪರಿಷತ್ ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ಜಾನಪದ ಲೋಕದಲ್ಲಿ ಕಳೆದ 27 ವರ್ಷಗಳಿಂದಲೂ ಗೊಂಬೆ ಕೂರಿಸುವ ರೂಢಿ ಇದೆ. ಇದರ ಅಂಗವಾಗಿ ನವರಾತ್ರಿಯ 9 ದಿನಗಳಲ್ಲದೇ ಒಂದು ತಿಂಗಳ ಕಾಲ ಬೊಂಬೆ ಪ್ರದರ್ಶನ ಜಾನಪದ ಲೋಕದಲ್ಲಿ ಇರಲಿದೆ ಎಂದು ಹೇಳಿದರು.ಈ ಪ್ರದರ್ಶನದಲ್ಲಿ ವಿಶ್ವದ ವಿವಿಧ ದೇಶಗಳ ವೇಷ; ಭೂಷಣದ ಆಕೃತಿಗಳು ಕಾಣಸಿಗಲಿವೆ. ಇಲ್ಲಿ ಪಟ್ಟದ ಗೊಂಬೆಗಳು, ಶಿವ , ಪಾರ್ವತಿ, ವಿಷ್ಣು, ಲಕ್ಷ್ಮಿ, ಸರಸ್ವತಿ, ಗೋವರ್ಧನ ಗಿರಿ ಎತ್ತಿದ ಕೃಷ್ಣ, ವಿಷ್ಣು ಪರಿವಾರ, ರಾವಣನ ದರ್ಬಾರ್, ದೇವಸ್ಥಾನದ ಮುಂದೆ ಕುಣಿತ ಮೆರೆತಗಳ ಉತ್ಸವ, ಮೈಸೂರು ಅರಮನೆಗಳು... ಹೀಗೆ ಹತ್ತು ಹಲವು ವಿಶೇಷ ಬೊಂಬೆಗಳು ಅನಾವರಣಗೊಳ್ಳಲಿವೆ ಎಂದು ತಿಳಿಸಿದರು.ಅ.12ರಂದು ಬನ್ನಿಪೂಜೆ: ವಿಜಯದಶಮತಿಯಂದು ಬನ್ನಿ ಪೂಜೆ ಆಚರಿಸಲಾಗುತ್ತಿದೆ. ಈ ಬನ್ನಿ ಎಲೆಯನ್ನು ಕಿರಿಯರು, ಹಿರಿಯರು ಪರಸ್ಪರ ಹಂಚಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಜಾನಪದ ಕಾಲೋದಲ್ಲಿ ಅ.12ರಂದು ಆರತಿ ಮತ್ತು ದೇವರುಗಳ ಮೆವರಣಿಗೆಯೊಂದಿಗೆ ಬನ್ನಿಮರದ ಪೂಜಾ ಕಾರ್ಯಕ್ರಮ ನೆರವೇರಲಿವೆ ಎಂದು ಹೇಳಿದರು.ಜಾನಪದ ಲೋಕವು ಗ್ರಾಮೀಣ ಪರಿಸರವನ್ನು ಪ್ರತಿಬಿಂಬಿಸುವ ವಸ್ತು ಸಂಗ್ರಹಾಲಯಗಲು. ಕನ್ನಡ ನಾಡಿನ ಜಾನಪದ ಕಲೆ, ಸಂಸ್ಕೃತಿ, ನೃತ್ಯ ಹಾಗೂ ಗ್ರಾಮೀಣ ಜೀವನ ಶೈಲಿಗಳನ್ನು ಬಿಂಬಿಸುವ ಜಾನಪದರ ಸಾಂಸ್ಕೃತಿಕ ಲೋಕ. ಇದಕ್ಕೆ ಯುನೆಸ್ಕೊದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಆಂತರಿಕ ಸಮಿತೆಗ ಸಲಹೆಗಳನ್ನು ನೀಡಲು ಪರಿಷತ್ ಮಾನ್ಯತೆ ಪಡೆದಿದೆ. ಇದು ಸಾಂಸ್ಕೃತಿಕ ಪರಂಪರೆಯ ಜಾನಗತಿಕ ಸಂವಾದಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಉತ್ತೇಜಿಸುತ್ತದೆ. ಇದರಿಂದ ಪರಿಷತ್ತು ಅಂತರರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ಸಮುದಾಯದಲ್ಲಿ ತನ್ನ ಪಾತ್ರವನ್ನು ಹೆಚ್ಚಿಸಿಕೊಡಿದೆ. ಕೇಂದ್ರ ಸರ್ಕಾರ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹೆಚ್ಚಿನ ಅನುದಾನ ಪಡೆಯಲು ಸಹಕಾರಿಯಾಗಲಿದೆ.- ಪ್ರೊ.ಹಿ.ಚಿ. ಬೋರಲಿಂಗಯ್ಯ ,ಕಾರ್ಯಾಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು