ಸಿದ್ಧಲಿಂಗ ಸ್ವಾಮೀಜಿಗಳಿಂದ ದಸರಾ ಶಮೀ ಪೂಜೆ

| Published : Sep 10 2025, 01:03 AM IST

ಸಿದ್ಧಲಿಂಗ ಸ್ವಾಮೀಜಿಗಳಿಂದ ದಸರಾ ಶಮೀ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರು ದಸರಾ ಸಮಿತಿ ಈ ತಿಂಗಳ 22ರಿಂದ 11 ದಿನಗಳ ಕಾಲ ನಗರದಲ್ಲಿ 35ನೇ ವರ್ಷದದಸರಾ ಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕೊನೆಯ ದಿನದ ಶಮೀಪೂಜೆಯನ್ನು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ನೆರವೇರಿಸುವರು.

ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ದಸರಾ ಸಮಿತಿ ಈ ತಿಂಗಳ 22ರಿಂದ 11 ದಿನಗಳ ಕಾಲ ನಗರದಲ್ಲಿ 35ನೇ ವರ್ಷದದಸರಾ ಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕೊನೆಯ ದಿನದ ಶಮೀಪೂಜೆಯನ್ನು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ನೆರವೇರಿಸುವರು.ಈ ಸಂಬಂಧ ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಆಚರಣಾ ಸಮಿತಿ ಕಾರ್ಯಾಧ್ಯಕ್ಷ ಡಾ.ಜೆ.ಲಕ್ಷ್ಮೀಕಾಂತ್, ಖಜಾಂಚಿ ಜಿ.ಎಸ್.ಬಸವರಾಜು, ಸಂಚಾಲಕ ಗೋವಿಂದರಾವ್, ಕಾರ್ಯದರ್ಶಿ ಕೆ.ಶಂಕರ್ ಉಪ್ಪಾರಹಳ್ಳಿ ಅವರು ಸಿದ್ಧಗಂಗಾ ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಗಳನ್ನು ಭೇಟಿ ಮಾಡಿ, ಶ್ರೀಗಳನ್ನು ಆಹ್ವಾನಿಸಿದರು. ಶಮೀಪೂಜೆ ನೆರವೇರಿಸಲು ಸ್ವಾಮೀಜಿಗಳು ಸಮ್ಮತಿಸಿದರು.ಈ ತಿಂಗಳ 22 ರಿಂದ ತುಮಕೂರು ದಸರಾ ಸಮಿತಿಯ ಕಾರ್ಯಕ್ರಮಗಳು ಆರಂಭವಾಗಲಿವೆ.ಅಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಪೂಜೆ, ದುರ್ಗಾ ಹೋಮ, ಭೂಮಿ ಪೂಜೆ, ಧ್ವಜ ಪೂಜೆ ಹಮ್ಮಿಕೊಳ್ಳಲಾಗಿದೆ. 23 ರಂದು ಪಾವಗಡದ ರಾಮಕೃಷ್ಣ ಸೇವಾಶ್ರಮದ ಡಾ.ಜಪಾನಂದ ಸ್ವಾಮೀಜಿ ದಸರಾ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ಅಂದಿನಿಂದ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಭಜನೆ, ರಂಗಗೀತೆ, ಜಾನಪದ ನೃತ್ಯ ವೈಭವ, ಯೋಗ ಸಂಭ್ರಮ, ನೃತ್ಯ ಸ್ಪರ್ಧೆ, ರಾಷ್ಟ್ರದೇವೋಭವ, ಗೀತ ವೈಭವ, ರಂಗವಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.ಸ್ಪರ್ಧೆಗಳ ಮೊದಲ ಮೂರು ಸ್ಥಾನಗಳ ವಿಜೇತರಿಗೆ ನಗದು ಬಹುಮಾನ ವಿತರಿಸಲಾಗುತ್ತದೆ.ಅಕ್ಟೋಬರ್ 2 ರಂದು ಸಂಜೆ 4.30ಕ್ಕೆ ಸಿದ್ಧಲಿಂಗ ಸ್ವಾಮೀಜಿಯವರು ಶಮೀಪೂಜೆ ನೆರವೇರಿಸುವರು.ಪ್ರತಿದಿನದ ಕಾರ್ಯಕ್ರಮಗಳಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಅತಿಥಿಗಳಾಗಿ ಭಾಗವಹಿಸುವರು.