ಕನಕಗಿರಿ: 2024ರ ಕನಕಗಿರಿ ಉತ್ಸವದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಗೌರವಿಸುವುದಕ್ಕಾಗಿ ಜಿಲ್ಲಾಡಳಿತದಿಂದ ತರಿಸಲಾಗಿದ್ದ ಸ್ಮರಣಿಕೆಗಳು ಹಾಗೂ ಹಾರಗಳಿಗೆ ಧೂಳು ಮೆತ್ತಿಕೊಂಡಿದೆ.
ಹೌದು,2024ರಲ್ಲಿ ಸಚಿವ ಶಿವರಾಜ ತಂಗಡಗಿ ಸಮ್ಮುಖದಲ್ಲಿ ಕನಕಗಿರಿ ಉತ್ಸವ ನಡೆದಿತ್ತು. ಈ ಭವ್ಯ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ,ಗಣ್ಯರಿಗೆ, ಕಲಾವಿದರಿಗೆ,ಚುನಾಯಿತ ಪ್ರತಿನಿಧಿಗಳಿಗೆ ಗೌರವಿಸಲು ಲಕ್ಷಾಂತರ ನೀಡಿ ನೆನೆಪಿನ ಕಾಣಿಕೆ ಹಾಗೂ ಗಂಧದ ಹಾರ ತಂದಿದ್ದು, ಎರಡು ವರ್ಷಗಳಿಂದ ಕನಕಾಚಲಪತಿ ದೇವಸ್ಥಾನದ ಯಾತ್ರಿ ನಿವಾಸ ಕಟ್ಟಡದಲ್ಲಿ ಕೊಳೆಯುತ್ತಿವೆ.ಉತ್ಸವ ಯಶಸ್ವಿಗೆ ಶ್ರಮಿಸಿದವರಿಗೂ ನೆನೆಪಿನ ಕಾಣಿಕೆ ನೀಡಬೇಕೆನ್ನುವ ಉದ್ದೇಶದಿಂದ ಸ್ಮರಣಿಕೆ ಉಳಿಸಿಕೊಳ್ಳಲಾಗಿತ್ತು. ಆದರೆ, ಶ್ರಮವಹಿಸಿದ ಗಣ್ಯರಿಗೆ ಸ್ಮರಣಿಕೆಗಳು ಹಂಚಿಕೆಯಾಗಿಲ್ಲ.ಉತ್ಸವ ಮುಗಿದು ಎರಡು ವರ್ಷಗಳಾದರೂ ತಲುಪಿಸಲು ಜಿಲ್ಲಾಡಳಿತ ಮುಂದಾಗಿಲ್ಲ ಎನ್ನುವ ಆರೋಪ ಇದೆ.
ಅಂತಹ ನೂರಾರು ಸ್ಮರಣಿಕೆ ಹಾಗೂ ಹಾರ ಇಲ್ಲಿನ ಯಾತ್ರಿ ನಿವಾಸದಲ್ಲಿ ಮೂಲೆ ಗುಂಪಾಗಿದ್ದು, ಯಾತ್ರಾ ನಿವಾಸದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಂದವರು ಅನಾಥವಾಗಿ ಬಿದ್ದಿರುವ ಹಾರ ಹಾಗೂ ಸ್ಮರಣಿಕೆಗಳನ್ನು ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಂದು ಸ್ಮರಣಿಕೆ ಕನಿಷ್ಠ ₹೫೦೦-೧೦೦೦ ಬೆಲೆ ಬಾಳುತ್ತಿದ್ದು, ಹಾರಗಳು ಕನಿಷ್ಠ ₹೧೦೦-೨೦೦ ಬೆಲೆಯದ್ದಾಗಿವೆ. ಸಂಬಂಧಿಸಿದವರಿಗೆ ತಲುಪಿಸಿದ್ದರೆ ಅವರಾದರೂ ಸಂತಸಪಡುತ್ತಿದ್ದರು. ಹಂಚಿಕೆ ಮಾಡಿ ಇಷ್ಟು ಉಳಿದಿದ್ದು, ಅದಕ್ಕಾಗಿ ತಹಸೀಲ್ದಾರ್ ಕಚೇರಿಯಲ್ಲಿ ಸ್ಥಳದ ಅಭಾವವಿರುವುದರಿಂದ ಯಾತ್ರಾ ನಿವಾಸದ ಕಟ್ಟಡದಲ್ಲಿ ಹಾರದ ಚೀಲ ಹರಿದಿದ್ದು, ಚೆಲ್ಲಾಪಿಲ್ಲಾಗಿವೆ.ಹಾರಗಳಾದರೂ ಬಳಕೆಯಾಗಲಿ:
ಪ್ರಸ್ತುತ ಕೆಲವೇ ದಿನಗಳಲ್ಲಿ ನಡೆಯುವ ಮತ್ತೊಂದು ಉತ್ಸವದಲ್ಲಿ ಈ ರೀತಿಯಾಗಿ ಸ್ಮರಣಿಕೆಗಳು ಮೂಲೆ ಸೇರಿ ಸಾರ್ವಜನಿಕರ ಹಣ ಪೋಲಾಗದಂತೆ ನೋಡಿಕೊಳ್ಳಬೇಕು.ಅಲ್ಲದೇ, ಉಳಿದಿರುವ ನೂರಾರು ಗಂಧದ ಹಾರ ಗೌರವ ಸನ್ಮಾನಕ್ಕಾಗಿ ಬಳಕೆ ಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಬೇಕೆನ್ನುವ ಆಗ್ರಹ ಸಾರ್ವಜನಿಕರು ಮಾಡಿದ್ದಾರೆ.
2024ರ ಉತ್ಸವದಲ್ಲಿ ಭಾಗಿಯಾಗಿದ ಗಣ್ಯರಿಗೆ, ಕಲಾವಿದರಿಗೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಸ್ಮರಣಿಕೆ ಮತ್ತು ಗಂಧದ ಹಾರಗಳೊಂದಿಗೆ ಸತ್ಕರಿಸಲಾಗಿದೆ. ಆದಾಗ್ಯೂ ನೆನೆಪಿನ ಕಾಣಿಕೆ, ಹಾರ ಉಳಿದಿವೆ. ಅವುಗಳನ್ನು ಮರು ಬಳಕೆ ಮಾಡಿಕೊಳ್ಳುವಂತೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ತಿಳಿಸಿದ್ದಾರೆ. ಅ