ಹಕ್ಕಿನಷ್ಟೇ ಕರ್ತವ್ಯ ಪಾಲನೆಯೂ ಮುಖ್ಯ: ಡಾ. ಜಿ.ಜಿ. ಹೆಗಡೆ

| Published : Jan 28 2025, 12:47 AM IST

ಸಾರಾಂಶ

ಕಮಟಾದ ಗೋರೆಯ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಕುಮಟಾ: ನಮ್ಮ ಹಕ್ಕನ್ನು ಚಲಾಯಿಸುವುದು ಮಾತ್ರವಲ್ಲ, ಕರ್ತವ್ಯವನ್ನೂ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಶಿಕ್ಷಣದ ಜತೆಗೆ ಸಂಸ್ಕಾರಗಳನ್ನು ಮೇಳೈಸಿಕೊಂಡು, ದೇಶಕ್ಕಾಗಿ ಶ್ರೇಷ್ಠ ಕೊಡುಗೆ ನೀಡಲು ಚಿಂತನಶೀಲರಾಗಿ ಎಂದು ಗೋರೆ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಅಧ್ಯಕ್ಷ ಡಾ. ಜಿ.ಜಿ. ಹೆಗಡೆ ತಿಳಿಸಿದರು.ಗೋರೆಯ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಆಡಳಿತ ಮಂಡಳಿಯ ಟ್ರಸ್ಟಿ ಡಿ.ಎನ್. ಭಟ್ಟ ಮಾತನಾಡಿದರು. ಪ್ರಾಚಾರ್ಯ ರಾಮ ಭಟ್ ಸ್ವಾಗತಿಸಿದರು. ಪೂಜಾ ಭಟ್ ನಿರೂಪಿಸಿದರು. ಕೆ.ಎಸ್. ಉಪಾಧ್ಯಾಯ ವಂದಿಸಿದರು. ಇಂದಿನಿಂದ ವಿಶಿಷ್ಟ ಲೈಂಗಿಕತೆ ಸಮುದಾಯಗಳ ಸಮಾವೇಶ: ಬಸವರಾಜ

ಕಾರವಾರ: ನಗರದ ಇಂದಿರಾಕಾಂತ ಸಭಾಭವನದಲ್ಲಿ ಜ. ೨೮, ೨೯ರಂದು ವಿಶಿಷ್ಟ ಲೈಂಗಿಕತೆ ಸಮುದಾಯಗಳ ಸಾರಥ್ಯ ಸ್ವಾಭಿಮಾನ ಹಬ್ಬ ಎಂಬ ರಾಜ್ಯಮಟ್ಟದ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಾರಥ್ಯ ಸಂಸ್ಥೆಯ ಅಧ್ಯಕ್ಷ ಬಸವರಾಜ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಥ್ಯ ಕರ್ನಾಟಕ ರಾಜ್ಯ ಮಟ್ಟದ ವಿಶಿಷ್ಟ ಲೈಂಗಿಕತೆ ಸಮುದಾಯ ಸಂಘಟನೆಗಳ ಒಕ್ಕೂಟ, ಪಯಣ ಸಂಸ್ಥೆ, ಅಂತರಂಗ ಸಂಸ್ಥೆಯ ಆಶ್ರಯದಲ್ಲಿ ನಡೆಯಲಿದೆ ಎಂದರು.ಜ. 28ರಂದು ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ. ಉದ್ಘಾಟಿಸುವರು‌. ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ., ನಗರ ಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿರುಪಾಕ್ಷಗೌಡ ಪಾಟೀಲ, ಅಂತರಂಗ ಸಂಸ್ಥೆ ಅಧ್ಯಕ್ಷ ಶ್ಯಾಮ್, ಹೋರಾಟಗಾರ, ಪಯಣ ಸಂಸ್ಥೆ ಖಜಾಂಚಿ ಕ್ರಿಸ್ಟಿರಾಜ್ ಭಾಗವಹಿಸುವರು.

ಸಮಾವೇಶದಲ್ಲಿ ಸಮುದಾಯಕ್ಕೆ ಸಂಬಂಧಿಸಿದಂತೆ ಒತ್ತಾಯದ ವಿವಾಹ, ಗುರುತಿಸುಕೊಳ್ಳುವಿಕೆ, ಸವಾಲುಗಳು ಮತ್ತು ಕಾನೂನುಗಳು ಈ ವಿಷಯಗಳ ಚರ್ಚೆ ಸಂವಾದ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಎರಡನೇ ದಿನ 29ರಂದು ನಗರದಲ್ಲಿ ಕೋಥಿ, ಡಿಡಿ, ಬೈಸೆಕ್ಯ್ಸೂವಲ್ ಜನರಿಂದ ಮೆರವಣಿಗೆ ನಡೆಯಲಿದೆ. ಬಳಿಕ ಸಾರಥ್ಯ ವಾರ್ಷಿಕ ಸಾಮಾನ್ಯ ಸದಸ್ಯರ ಸಭೆ ಆಯೋಜಿಸಲಾಗಿದೆ. ಪ್ರತಿವರ್ಷ ಒಂದೊಂದು ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಮಾಡಲಾಗುತ್ತಿದ್ದು, 13ನೇ ವರ್ಷದ ಸಮಾವೇಶವನ್ನು ಉತ್ತರ ಕನ್ನಡದಲ್ಲಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಾರಥ್ಯ ಸಂಸ್ಥೆಯ ಟೆಕ್ನಿಕಲ್ ವಿಭಾಗದ ಪ್ರಮುಖ ತ್ರಿಮೂರ್ತಿ ಕೆ. ಮಾತನಾಡಿ, ಸಾರಥ್ಯ ಒಕ್ಕೂಟವು 2010ರ ಡಿಸೆಂಬರ್‌ನಲ್ಲಿ ನೋಂದಣಿಯಾಗಿದ್ದು, ವಿಶಿಷ್ಟ ಲೈಂಗಿಕತೆ ಸಮುದಾಯ ಕೋಥಿ, ಡಿಡಿ, ಬೈಸೆಕ್ಯ್ಸೂವಲ್ ಈ ಮೂರು ವರ್ಗದ ಜನರನ್ನು ಗುರುತಿಸುವಿಕೆ, ಅಂಥವರಿಗೆ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಗೌರವ ಘನತೆ ಗೌರವದಿಂದ ಬದುಕಲು ಪೂರಕ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದರು.ಮಂಜುನಾಥ, ಕೃಷ್ಣಮೂರ್ತಿ, ಅಂತರಂಗ ಅಧ್ಯಕ್ಷ ಶ್ಯಾಮ ಇದ್ದರು.