ಇಲ್ಲಿನ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀಲಕ್ಷ್ಮೀನಾರಾಯಣಸ್ವಾಮಿಗೆ ಜ.11 ರಂದು ಮುಕ್ಕೋಟಿ ದ್ವಾದಶಿ ಪ್ರಯುಕ್ತ ಮುಂಜಾನೆ ಸ್ವಾಮಿಗೆ ಅಭಿಷೇಕ, ಹೂವಿನ ಅಲಂಕಾರ ಹಾಗೂ ವಿಶೇಷ ಪೂಜಾ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರ್ಯ ವೈಶ್ಯ ಮಂಡಲಿ ಅಧ್ಯಕ್ಷ ಕೆ.ಎನ್.ಶ್ರೀನಿವಾಸಮೂರ್ತಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ಇಲ್ಲಿನ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀಲಕ್ಷ್ಮೀನಾರಾಯಣಸ್ವಾಮಿಗೆ ಜ.11 ರಂದು ಮುಕ್ಕೋಟಿ ದ್ವಾದಶಿ ಪ್ರಯುಕ್ತ ಮುಂಜಾನೆ ಸ್ವಾಮಿಗೆ ಅಭಿಷೇಕ, ಹೂವಿನ ಅಲಂಕಾರ ಹಾಗೂ ವಿಶೇಷ ಪೂಜಾ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರ್ಯ ವೈಶ್ಯ ಮಂಡಲಿ ಅಧ್ಯಕ್ಷ ಕೆ.ಎನ್.ಶ್ರೀನಿವಾಸಮೂರ್ತಿ ತಿಳಿಸಿದರು.ಇಲ್ಲಿನ ಕನ್ನಿಕಾಪರಮೇಶ್ವರಿ ದೇಗುಲದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅಂದು ಬೆಳಿಗ್ಗೆ 7.30ರಿಂದ 12ಗಂಟೆವರೆಗೆ ಮತ್ತು ಸಂಜೆ 4 ರಿಂದ 8ರವರೆಗೆ ಭಕ್ತಾದಿಗಳಿಗೆ ದ್ವಾರದರ್ಶನ ಏರ್ಪಡಿಸಿದೆ. ಬೆಳಿಗ್ಗೆ 6 ರಿಂದ ವಿವಿಧ ಮಹಿಳಾ ಸಂಘಟನೆಗಳಿಂದ ಭಜನೆ, ಭಕ್ತಿಗೀತೆಗಳ ಗಾಯನ ನಡೆಯಲಿದೆ. ವಾಸವಿ ಮಹಿಳಾ ಸಂಘದವರಿಂದ ಬೆಳಿಗ್ಗೆ 6ಕ್ಕೆ ಸುಪ್ರಭಾತ ಸೇವೆ ಪ್ರಾರಂಭವಾಗಲಿದೆ.ಮಹಿಳಾ ಸಮಾಜದಿಂದ ಭಜನೆ ಮತ್ತು ಮಧು ಲಹರಿ 7ರಿಂದ 8ರವರೆಗೆ, 8ರಿಂದ 9ಕ್ಕೆ ಜ್ಞಾನವರ್ದಿನಿ ಸಂಘದಿಂದ ಭಕ್ತಿಗೀತೆಗಳು, 9 ರಿಂದ 10ಕ್ಕೆ ಕನ್ನಿಕಾ ವನಿತ ವೃಂದದವರಿಂದ ಭಕ್ತಿಗೀತೆಗಳು, 10 ರಿಂದ 11ರವರೆಗೆ ವರದಾಯಿನಿ ಸೇವಾ ಟ್ರಸ್ಟ್ ನಿಂದ ಭಕ್ತಿಗೀತೆಗಳು ,11ರಿಂದ 12ರವೆರೆಗೆ ಶ್ರೀಸತ್ಯಸಾಯಿ ಸೇವಾ ಕ್ಷೇತ್ರ ಮಧುಗಿರಿ ಇವರಿಂದ ಭಜನೆ, ನಂತರ ಅಕ್ಕಮಹಾದೇವಿ ಮಹಿಳಾ ಸಮಾಜದವರಿಂದ ವಚನ ಗಾಯನ ನಡೆಯಲಿದೆ.
ಸಂಜೆ 4.45ರಿಂದ 5.30ರವರೆಗೆ ಶ್ರೀಕೌಸ್ತುಭ ಭಜನಾ ಮಂಡಳಿಯಿಂದ ಭಜನೆ, 5 .30ರಿಂದ 6.15ರವರೆಗೆ ಗೀತಾ ಪಣೀಶ್ ಸಂಗೀತ ಶಾಲಾ ಮಕ್ಕಳಿಂದ ಸಂಗೀತ , 6 ,15ರಿಂದ 7.10ರವರೆಗೆ ವೇದಿಕೆ ನಡೆಯಲಿದೆ. ನಿರಂತರವಾಗಿ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಕಡ್ಡಾಯವಾಗಿ ಹಿಂದೂ ಸಂಪ್ರದಾಯ ಉಡುಪುಗಳನ್ನು ಧರಿಸಿ ಬರುವಂತೆ ಅಧ್ಯಕ್ಷ ಶ್ರೀನಿವಾಸಮೂರ್ತಿ ಮನವಿ ಮಾಡಿದರು.ಗೋಷ್ಠಿಯಲ್ಲಿ ಉಪಾಧ್ಯಕ್ಷ ಎ.ರಮೇಶ್,ಕಾರ್ಯದರ್ಶಿ ಜಿ.ಆರ್.ವೆಂಕಟೇಶ್‌ಬಾಬು, ಖಜಾಂಚಿ ಸಿ.ಎ.ಕೆಂಚೇಶ್, ನಿರ್ದೇಶಕರುಗಳಾದ ಎಂ.ಕೆ.ನಾಗರಾಜು, ಎಂ.ಎಲ್.ಪ್ರಕಾಶ್‌ಬಾಬು, ಜಿ.ಆರ್.ಗೋವಿಂದರಾಜಗುಪ್ತ, ಡಿ.ಜಿ.ಶಂಕರನಾರಾಯಣಶಟ್ಟಿ, ,ಎಸ್.ಆರ್.ಆಂಜನೇಯಲು. ಕೆ.ಆರ್.ಬದರಿನಾರಾಯಣ, ಕೆ.ಪಿ.ಅಶ್ವತ್ಥನಾರಾಯಣ ಗುಪ್ತ, ಪಿ.ವಿ.ಮೋಹನ್, ಟಿ.ಕೆ.ಬದರಿನಾಥ್, ಸುದ್ರನ್‌ಬಾಬು, ಕಿಶೋರ್‌ಕುಮಾರ್, ಪತ್ರಕರ್ತ ಎಂ.ಎಸ್.ರಘುನಾಥ್,ಎಸ್.ಎಂ.ಕೃಷ್ಣ ,ಗೋವಿಂದರಾಜು ಇದ್ದರು.