ಕಳೆದ ೨೦ ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಪುತ್ತೂರಿನ ದ್ವಾರಕಾ ಕಾರ್ಪೊರೇಶನ್ ಸಂಸ್ಥೆಯ ವತಿಯಿಂದ ಉಪ್ಪಿನಂಗಡಿ ಸಮೀಪದ ಕೆಮ್ಮಾರದಲ್ಲಿ ವಿನೂತನ ಕಲ್ಪನೆಯೊಂದಿಗೆ ನಿರ್ಮಾಣಗೊಂಡ ಉಜ್ಜೀವನ ಎಂಬ ಹೆಸರಿನ ಹಿರಿಯ ನಾಗರಿಕರ ಬಡಾವಣೆಯು ೨೧ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.

ಪುತ್ತೂರು: ಕಳೆದ ೨೦ ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಪುತ್ತೂರಿನ ದ್ವಾರಕಾ ಕಾರ್ಪೊರೇಶನ್ ಸಂಸ್ಥೆಯ ವತಿಯಿಂದ ಉಪ್ಪಿನಂಗಡಿ ಸಮೀಪದ ಕೆಮ್ಮಾರದಲ್ಲಿ ವಿನೂತನ ಕಲ್ಪನೆಯೊಂದಿಗೆ ನಿರ್ಮಾಣಗೊಂಡ ಉಜ್ಜೀವನ ಎಂಬ ಹೆಸರಿನ ಹಿರಿಯ ನಾಗರಿಕರ ಬಡಾವಣೆಯು ೨೧ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕೆಮ್ಮಾರ ಎಂಬಲ್ಲಿ ಸುಮಾರು ೨೦ ಎಕರೆ ವಿಶಾಲ ಜಾಗದಲ್ಲಿ ಉಜ್ಜೀವನ ಹಿರಿಯ ನಾಗರಿಕರ ಬಡಾವಣೆ ನಿರ್ಮಾಣಗೊಂಡಿದೆ. ಹಿರಿಯ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ಈ ಸುಂದರ ಬಡಾವಣೆ ನಿರ್ಮಿಸಲಾಗಿದೆ. ಇದರಲ್ಲಿ ಸುಮಾರು ೨೦೦ರಷ್ಟು ಮನೆಗಳನ್ನು ನಿರ್ಮಿಸಲು ಅವಕಾಶವಿದೆ. ಈಗಾಗಲೇ ಶೇ.೪೦ರಷ್ಟು ನಿವೇಶನಗಳು ಬುಕ್ ಆಗಿವೆ.೨೧ರಂದು ಸಂಜೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಬಡಾವಣೆ ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ದ್ವಾರಕಾ ನೆಸ್ಟ್ ವಾಣಿಜ್ಯ ಸಮುಚ್ಚಯ ಉದ್ಘಾಟಿಸಲಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ದ್ವಾರಕಾ ರಿಫ್ರೆಶ್‌ಮೆಂಟ್ ಲೋಕಾರ್ಪಣೆ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ದ್ವಾರಕಾ ಮಾರ್ಟ್ ಲೋಕಾರ್ಪಣೆ ಮಾಡಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.ಈ ಬಡಾವಣೆಯಲ್ಲಿ ಹಿರಿಯ ನಾಗರಿಕರಿಗೆ ಬೇಕಾದ ರೀತಿಯಲ್ಲಿ ಮನೆ ಕಟ್ಟಿ ಕೊಡಲಾಗುತ್ತದೆ. ಜತೆಗೆ ಫಿಸಿಯೊಥೆರಪಿ, ನ್ಯಾಚರೋಪಥಿ ಕ್ಲಿನಿಕ್, ಮೆಡಿಕಲ್, ರೆಸ್ಟೋರೆಂಟ್, ಸೂಪರ್ ಮಾರ್ಕೆಟ್, ಅತಿಥಿ ಕೊಠಡಿ, ಲೈಬ್ರೆರಿ, ಒಳಾಂಗಣ, ಹೊರಾಂಗಣ ಕ್ರೀಡಾ ಅಂಕಣಗಳು, ವಾಕಿಂಗ್ ಪಥ, ಧ್ಯಾನ ಮಂದಿರ, ಉದ್ಯಾನ, ಗೋಶಾಲೆ, ದಿನಪೂರ್ತಿ ನೀರು ಪೂರೈಕೆ, ತ್ಯಾಜ್ಯ ನಿರ್ವಹಣೆ, ಸ್ವಯಂ ಚಾಲಿತ ಬೀದಿ ದೀಪಗಳು, ಆವರಣಗೋಡೆ ಭದ್ರತೆ, ಕ್ಯಾಂಪಸ್ ವಾಹನ, ಕೇರ್ ಟೇಕರ್ಸ್, ಸಿ.ಸಿ. ಕ್ಯಾಮರಾ ಕಣ್ಗಾವಲು ಇರುತ್ತದೆ. ಇಲ್ಲಿ ಹಿರಿಯ ನಾಗರಿಕರು ಸ್ವಚ್ಛ, ಸಮೃದ್ಧ, ಸಂಭ್ರಮದಿಂದ ಬದುಕು ಕಳೆಯಬಹುದಾಗಿದೆ ಎಂದರು.ಬಡಾವಣೆಯಲ್ಲಿ ೧,೨ ಮತ್ತು ೩ ಬಿಎಚ್‌ಕೆ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಈಗ ಬುಕ್ ಮಾಡುವವರಿಗೆ ಶೇ.೧೦ ರಿಯಾಯಿತಿ ಇದೆ. ಉದ್ಘಾಟನೆ ದಿನ ಬುಕ್ ಮಾಡುವವರಿಗೆ ವಿಶೇಷ ಕೊಡುಗೆ ನೀಡಲಾಗುವುದು. ಈಗಾಗಲೇ ಶೇ.೪೦ ನಿವೇಶನಗಳು ಬುಕ್ ಆಗಿವೆ. ಇಲ್ಲಿ ಒಟ್ಟು ೨೦೦ರಷ್ಟು ಮನೆಗಳನ್ನು ನಿರ್ಮಿಸಲು ಅವಕಾಶವಿದೆ. ದ್ವಾರಕಾ ಕಾರ್ಪೋರೇಶನ್ ಸಂಸ್ಥೆಯ ಅಡಿಯಲ್ಲಿ ೧೦ಕ್ಕಿಂತಲೂ ಅಧಿಕ ಸಂಸ್ಥೆಗಳಿವೆ. ಮಯೂರ, ಶ್ರೀರಾಮ, ಗೋಕುಲ, ಮಾನಸ, ತುಳಸಿ, ಶೇಷಾದ್ರಿ, ಗೋಮತಿ, ಶಿವೋಹಂ, ನಂದಿಲ, ಹರಿಹರ, ಜಲ ಬಡಾವಣೆಗಳನ್ನು ನಿರ್ಮಿಸಿ ಅಭಿವೃದ್ಧಿಪಡಿಸಲಾಗುತ್ತಿದೆ. ಉಜ್ಜೀವನ ಹಿರಿಯ ನಾಗರಿಕರ ಬಡಾವಣೆ ಇದಕ್ಕೆ ಸೇರ್ಪಡೆಯಾಗಿದೆ ಎಂದು ವಿವರಿಸಿದರು.ಒಂದೇ ವಠಾರದಲ್ಲಿ ಹಿರಿಯ ಜೀವಗಳು ಅಕ್ಕಪಕ್ಕದಲ್ಲಿ ಮನೆ ಮಾಡಿಕೊಂಡು ವಾಸವಿರಲು ಅನುಕೂಲವಾಗುವಂತೆ ಈ ಬಡಾವಣೆ ನಿರ್ಮಿಸಲಾಗಿದೆ ಎಂದು ತಿಳಿಸಿದರು. ದ್ವಾರಕಾ ಕಾರ್ಪೋರೇಶನ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಮೃತ ಕೃಷ್ಣ, ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಗಣರಾಜ್ ಕುಂಬಳೆ, ದ್ವಾರಕಾ ಕಾರ್ಪೋರೇಶನ್ ಸಂಸ್ಥೆಯ ಆಪರೇಶನಲ್ ಹೆಡ್ ದುರ್ಗಾ ಗಣೇಶ್, ಸಂಸ್ಥೆಯ ನಿರ್ದೇಶಕಿ ಅಮೃತಾ ಶ್ಯಾನ್‌ಭಾಗ್ ಇದ್ದರು.