ಸಾರಾಂಶ
ರಾಮನಗರ: ಆಷಾಢಮಾಸ ಮುಗಿದ ಮೇಲೆ ಪ್ರತಿ ವಾರ್ಡಿನಲ್ಲಿ ಹಂತ ಹಂತವಾಗಿ ಸ್ವತ್ತಿನ ಮಾಲೀಕರಿಗೆ ಇ-ಖಾತೆ ನೀಡಲು ಸಂಕಲ್ಪ ಮಾಡಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಸುಮಾರು 180 ಸ್ವತ್ತಿನ ಮಾಲೀಕರಿಗೆ ಇ-ಖಾತಾ ವಿತರಿಸಿ ಮಾತನಾಡಿದ ಅವರು, ನಗರಸಭೆಯ 31 ವಾರ್ಡುಗಳಲ್ಲಿಯೂ ಮನೆ ಮನೆಗೆ ಭೇಟಿ ಮಾಡಿ ಯಾರು ಇ-ಖಾತೆ ಮಾಡಿಸಿಕೊಂಡಿಲ್ಲವೋ ಅವರಿಗೆ ಮಾಹಿತಿ ನೀಡಿ ಪ್ರತಿ ಎರಡು ಮೂರು ವಾರ್ಡ್‌ನ್ನು ಜೊತೆಗೂಡಿಸಿ ನಿಗದಿತ ಸ್ಥಳ ಗುರುತಿಸಿ ಅಲ್ಲೇ ಇ-ಖಾತೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.ಪ್ರಾರಂಭದಲ್ಲಿ 1 ಮತ್ತು 2ನೇ ವಾರ್ಡಿನಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ. ನಂತರ ಎರಡು-ಮೂರು ವಾರ್ಡುಗಳನ್ನು ಸೇರಿಸಿ ಹಂತಹಂತವಾಗಿ ಇ-ಖಾತೆ ವಿತರಣೆ ನಡೆಯಲಿದೆ. ಯಾರು ದಾಖಲಾತಿ ಸರಿಯಾಗಿ ನೀಡುತ್ತಾರೋ ಅಂತವರಿಗೆ ಇ-ಖಾತೆ ನೀಡಲಾಗುವುದು ಎಂದು ಹೇಳಿದರು.
ಕಳೆದ ಆರು ತಿಂಗಳಿಂದ ನಗರಸಭೆಯಿಂದ ಸುಮಾರು 2500ಕ್ಕೂ ಹೆಚ್ಚು ಇ-ಖಾತೆ ವಿತರಣೆ ಮಾಡಲಾಗಿದೆ. ಸಾರ್ವಜನಿಕರಿಗೆ ಇ ಆಸ್ತಿ ದಾಖಲಾತಿ ಸಕಾಲಕ್ಕೆ ಒದಗಿಸಿಕೊಡಬೇಕು ಎಂಬ ತೀರ್ಮಾನ ಮಾಡಿದ ಮೇಲೆ ಇ ಖಾತಾ ಅಭಿಯಾನ ಪ್ರಾರಂಭಿಸಿ ಸಿಬ್ಬಂದಿ ಕೊರತೆ ಇದ್ದರೂ ಜನರಿಗೆ ಇ ಖಾತಾಗಳನ್ನು ವಿತರಿಸಿದ್ದೇವೆ ಎಂದು ಕೆ.ಶೇಷಾದ್ರಿ ತಿಳಿಸಿದರು.ಮುಂದಿನ ಮಂಗಳವಾರ ಬನ್ನಿಮಹಾಂಕಾಳಿ ಕರಗ ಮತ್ತು ಜು.15ರಂದು ಚಾಮುಂಡೇಶ್ವರಿ ಕರಗೋತ್ಸವ ನಡೆಯುತ್ತವೆ. ಲಕ್ಷಾಂತರ ಜನರು ಕರಗ ಹಬ್ಬಕ್ಕೆ ನಗರಕ್ಕೆ ಬರುತ್ತಾರೆ. ಗ್ಯಾಸ್ ಸಂಪರ್ಕ ಮತ್ತು ಚರಂಡಿ, ಕುಡಿಯುವ ನೀರಿನ ಪೈಪ್ ಅಳವಡಿಕೆ ಕಾಮಗಾರಿಗೆ ರಸ್ತೆಗಳು ಹಾಳಾಗಿದ್ದವು. ಕರಗ ಧಾರಕರ ಸಂಚಾರಕ್ಕೆ ತೊಂದರೆಯಾಗದಂತೆ ಪ್ರಮುಖ ರಸ್ತೆಗಳಿಗೆ ಡಾಂಬರ್ ಮತ್ತು ಸಿಂಮೆಂಟ್ ರಸ್ತೆ ಮಾಡಲಾಗಿದೆ. ಕೆಲವು ರಸ್ತೆಗಳಿಗೆ ತಾತ್ಕಾಲಿಕವಾಗಿ ಗುಂಡಿ ಮುಚ್ಚಿ ಸಾರ್ವಜನಿಕರ ಒಡಾಟಕ್ಕೆ ನಗರಸಭೆ ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿಸಿದರು.ಹಸಿ ಕಸ-ಒಣ ಕಸ ಬೇರ್ಪಡಿಸಿ ಕೊಡಿ:
ನಗರಸಭೆ ಆಟೋಗಳ ಮೂಲಕ ಮನೆ ಮನೆ ಕಸ ಸಂಗ್ರಹ ಮಾಡುತ್ತಿದೆ. ಬಿಡದಿ ಕೆಪಿಸಿಎಲ್‌ಗೆ ಸುಮಾರು 2 ಟನ್ ಒಣ ಕಸ ಕಳುಹಿಸಲಾಗುತ್ತಿದೆ. ಜನರು ಹಸಿ ಕಸ ಒಣ ಕಸ ವಿಂಗಡಣೆ ಮಾಡದ ಕಾರಣ ಸಮಸ್ಯೆಯಾಗುತ್ತಿದೆ. ಮನೆಯಲ್ಲೇ ಹಸಿ ಕಸ, ಒಣ ಕಸ ವಿಂಗಡಣೆ ಮಾಡಿ ನೀಡಿದರೆ ಒಣ ಕಸ ಸಾಗಿಸಲು ಅನುಕೂಲ ಆಗುತ್ತದೆ. ಜನರು ಹಸಿಕಸ ಒಣಕಸ ವಿಂಗಡಣೆಗೆ ಗಮನನೀಡಿ ನಗರಸಭೆಗೆ ಉತ್ತಮ ಸಹಕಾರ ನೀಡಬೇಕು ಎಂದು ಶೇಷಾದ್ರಿ ನಾಗರೀಕರಲ್ಲಿ ಮನವಿ ಮಾಡಿದರು.ನಗರಸಭಾ ಉಪಾಧ್ಯಕ್ಷೆ ಆಯಿಷಾಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷಾ, ಸದಸ್ಯರಾದ ನರಸಿಂಹ, ಪಾರ್ವತಮ್ಮ, ವಿಜಯಕುಮಾರಿ, ಗಿರಿಜಮ್ಮ ಗುರುವೇಗೌಡ, ನಾಗಮ್ಮ ಇತರರಿದ್ದರು.
ಬಾಕ್ಸ್................11ರಿಂದ ವಿದ್ಯುತ್ ಚಿತಾಗಾರ ಕಾರ್ಯಾರಂಭ:
ರಾಮನಗರದ ಎಪಿಎ₹ಸಿ ಮಾರುಕಟ್ಟೆ ಎದುರಿನ ಸಾರ್ವಜನಿಕ ಸ್ಮಶಾನದಲ್ಲಿ ನಿರ್ಮಾಣ ಮಾಡಲಾಗಿರುವ ವಿದ್ಯುತ್ ಚಿತಾಗಾರ ಜುಲೈ 11ರಂದು ಕಾರ್ಯಾರಂಭಕ್ಕೆ ಚಾಲನೆ ನೀಡಲಾಗುವುದು. ಈ ಚಿತಾಗಾರ ಬೆಳಗ್ಗೆ 9ರಿಂದ ಸಂಜೆ 7 ಗಂಟೆವರೆಗೆ ಕಾರ್ಯನಿರ್ವಹಣೆ ಮಾಡಲಿದ್ದು, ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆವರೆಗೆ ನೋಂದಣಿ ಮಾಡಿಸಲು ಸಮಯಾವಕಾಶ ನಿಗದಿ ಪಡಿಸಲಾಗಿದೆ. ಅಂತ್ಯ ಸಂಸ್ಕಾರಕ್ಕೆ 3 ಸಾವಿರ ರು. ದರ ನಿಗದಿ ಪಡಿಸಲಾಗಿದೆ. ಸಾರ್ವಜನಿಕರು ಈ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಬೇಕಾದರೆ 2 ಗಂಟೆ ಮುಂಚಿತವಾಗಿ ನಗರಸಭೆ ಕಚೇರಿಯ ಆರೋಗ್ಯ ಶಾಖೆ ಅಧಿಕಾರಿಗಳ (ಮೊ:9972593228) ಗಮನಕ್ಕೆ ತರಬೇಕು ಎಂದು ನಗರಸಭೆ ಅಧ್ಯಕ್ಷ ಶೇಷಾದ್ರಿ ತಿಳಿಸಿದರು.4ಕೆಆರ್ ಎಂಎನ್ 4.ಜೆಪಿಜಿ
ರಾಮನಗರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿರವರು ಸ್ವತ್ತಿನ ಮಾಲೀಕರಿಗೆ ಇ-ಖಾತೆ ವಿತರಿಸಿದರು.