ಸಾರಾಂಶ
ಚಿಕ್ಕಮಗಳೂರು, ಶೀಘ್ರಗತಿಯಲ್ಲಿ ಸಾರ್ವಜನಿಕರ ಕೆಲಸಗಳು ಆಗಬೇಕು ಎಂಬ ಕಾರಣಕ್ಕೆ ಹೋಬಳಿ ಮಟ್ಟದ ನಾಡ ಕಚೇರಿಗಳಲ್ಲಿಯೂ ಇ ಆಫೀಸ್ ವ್ಯವಸ್ಥೆ ಆರಂಭಿಸಲಾಗುತ್ತಿದೆ ಎಂದು ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಹೇಳಿದ್ದಾರೆ.
ತಾಲೂಕಿನ ವಸ್ತಾರೆ ಹೋಬಳಿ ನಾಡ ಕಚೇರಿಗೆ ಶುಕ್ರವಾರ ಭೇಟಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶೀಘ್ರಗತಿಯಲ್ಲಿ ಸಾರ್ವಜನಿಕರ ಕೆಲಸಗಳು ಆಗಬೇಕು ಎಂಬ ಕಾರಣಕ್ಕೆ ಹೋಬಳಿ ಮಟ್ಟದ ನಾಡ ಕಚೇರಿಗಳಲ್ಲಿಯೂ ಇ ಆಫೀಸ್ ವ್ಯವಸ್ಥೆ ಆರಂಭಿಸಲಾಗುತ್ತಿದೆ ಎಂದು ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಹೇಳಿದ್ದಾರೆ.ತಾಲೂಕಿನ ವಸ್ತಾರೆ ಹೋಬಳಿ ನಾಡ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಇ ಆಫೀಸ್ ವ್ಯವಸ್ಥೆ ಪರಿಶೀಲನೆ ನಡೆಸಿ ಮಾತನಾಡಿದರು. ಈ ಆಫೀಸ್ ವ್ಯವಸ್ಥೆಯಿಂದ ಕಾಗದ ಹಾಗೂ ಸಮಯ ಉಳಿತಾಯವಾಗಲಿದೆ ಎಂದು ಹೇಳಿದರು.
ನಾಡಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಒಂದು ದಾಖಲೆ ತಲುಪಲು ಕನಿಷ್ಠ 10 ದಿನ ಬೇಕಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಯಿಂದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕಚೇರಿಗೆ ದಾಖಲೆಗಳು ತಲುಪಲು ಮತ್ತೆ 10 ದಿನ ಹಾಗೂ ಪ್ರಧಾನ ಕಾರ್ಯದರ್ಶಿ ಎದುರು ದಾಖಲೆಗಳು ಬರಲು ಇನ್ನೂ 10 ದಿನ ಅಂದರೆ ಬರೋಬ್ಬರಿ ಒಂದು ತಿಂಗಳ ಕಾಲಾವಕಾಶ ಬೇಕಾಗಿತ್ತು. ಆದರೆ ಇ ಆಫೀಸ್ ವ್ಯವಸ್ಥೆಯಿಂದಾಗಿ ಯಾವುದೇ ದಾಖಲೆಗಳು ನಾಡಕಚೇರಿಯಿಂದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಳಿಗೆ ಕೇವಲ ಮೂರು ದಿನದಲ್ಲಿ ತಲುಪಲಿವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸಿ ದಲ್ಜಿತ್ ಕುಮಾರ್, ಎಡಿಸಿ ನಾರಾಯಣರಡ್ಡಿ ಕನಕರಡ್ಡಿ, ತಹಸೀಲ್ದಾರ್ ಡಾ. ಸುಮಂತ್ ಇದ್ದರು. 13 ಕೆಸಿಕೆಎಂ 5ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಹೋಬಳಿ ನಾಡ ಕಚೇರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಶುಕ್ರವಾರ ಭೇಟಿ ನೀಡಿ ಇ ಆಫೀಸ್ ವ್ಯವಸ್ಥೆ ಪರಿಶೀಲಿಸಿದರು. ಡಿಸಿ ಮೀನಾ ನಾಗರಾಜ್ ಇದ್ದರು.