ಮಹಾಲಿಂಗಪುರ : ಸಮೀಪದ ಬೆಳಗಲಿ ಪಟ್ಟಣದ ಬಸವೇಶ್ವರ ಹೋಟೆಲ್ ನಲ್ಲಿ ಮಂಗಳವಾರ ಬೆಳಗ್ಗೆ ಸಿಲಿಂಡರ್ ಸೋರಿಕೆಯಿಂದ ಅಗ್ನಿ ದುರಂತ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸಮೀಪದ ಬೆಳಗಲಿ ಪಟ್ಟಣದ ಬಸವೇಶ್ವರ ಹೋಟೆಲ್ ನಲ್ಲಿ ಮಂಗಳವಾರ ಬೆಳಗ್ಗೆ ಸಿಲಿಂಡರ್ ಸೋರಿಕೆಯಿಂದ ಅಗ್ನಿ ದುರಂತ ಸಂಭವಿಸಿದೆ.

ಸಿಲಿಂಡರ್ ಸೋರಿಕೆ ತಡೆಯಲು ಆಗಮಿಸಿದ ರಾಜಸ್ಥಾನಿ ಶಿವಾ ಚಾ ಅಂಗಡಿಯ ಸುರೇಂದ್ರನ್‌ ದೇಹದ ಮುಂಭಾಗ ಬೆಂಕಿಯಿಂದ ಹಾನಿಯಾಗಿದೆ. ಹೋಟೆಲ್ ಮಾಲಕಿ ದ್ರಾಕ್ಷಾಯಿಣಿ ಒಂಟಗೋಡಿ, ಅಡುಗೆ ಸಹಾಯಕಿ ಕಲ್ಲವ್ವ ಕೊಣ್ಣೂರ ಈ ಮೂವರು ಬೆಂಕಿ ದುರಂತಕ್ಕೆ ಗಾಯಗೊಂಡು ಪಟ್ಟಣದ ರೀತಿ ಆಸ್ಪತ್ರೆಗೆ ದಾಖಲಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀ ಮಹಾಲಿಂಗೇಶ್ವರ ಪೆಟ್ರೋಲ್ ಬಂಕ್ ಸಿಬ್ಬಂದಿ ಶ್ರೀಶೈಲ ಪಾಲಭಾವಿ ಮಿನಿ ಅಗ್ನಿ ನಂದಕ ತೆಗೆದುಕೊಂಡು ಸ್ಥಳಕ್ಕೆ ಧಾವಿಸಿ ಪಟ್ಟಣದ ನಾಗರಿಕರ ಜೊತೆ ಬೆಂಕಿ ನಂದಿಸಲು ಪ್ರಯತ್ನಿಸಿದರು. ಈ ವೇಳೆ ಮುಧೋಳದ ಅಗ್ನಿಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಂಭವಿಸಬಹುದಾಗಿದ್ದ ಅಪಾರ ಹಾನಿ ತಡೆದರು. ಹೋಟೆಲ್ ಮಾಲೀಕ ಮಹಾಲಿಂಗಪ್ಪ ಒಂಟಿಗೋಡಿ ಬೆಳಗಲಿ ಗ್ರಾಮ ದೇವತೆಯ ಜಾತ್ರೆಯ ನಿಮಿತ್ತ ಸುಮಾರು ಒಂದುವರೆ ಲಕ್ಷ ದಾಸ್ತಾನುವನ್ನು ಖರೀದಿಸಿದ್ದ. ಈ ಅಗ್ನಿ ಅವಗಡದಲ್ಲಿ ಎಲ್ಲಾ ದಾಸ್ತಾನು ಮತ್ತು ದಿನನಿತ್ಯ ಬಳಕೆಯ ಹೋಟೆಲ್ ಸಾಮಗ್ರಿಗಳು ಸಂಪೂರ್ಣ ಅಗ್ನಿಯ ಜ್ವಾಲೆಗೆ ತುತ್ತಾಗಿ ಹಾಳಾಗಿದ್ದು, ಸಂಪೂರ್ಣ ಹೋಟೆಲ್ ಸುಟ್ಟು ಭಸ್ಮವಾಗಿದೆ. ಮಿಕ್ಸರ್, ೩ಪ್ರೀಜ್ ಗಳು, ಕುಕ್ಕರ್, ಕುರ್ಚಿಗಳು ಕೂಡ ನಾಶಗೊಂಡಿವೆ.