ಬೆಳ್ಳಂಬೆಳಗ್ಗೆ ಸರಣಿ ಅಪಘಾತ: ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಪಾರು

| Published : Oct 12 2025, 01:00 AM IST

ಬೆಳ್ಳಂಬೆಳಗ್ಗೆ ಸರಣಿ ಅಪಘಾತ: ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಪಾರು
Share this Article
  • FB
  • TW
  • Linkdin
  • Email

ಸಾರಾಂಶ

ಅಪಘಾತದಿಂದ ರಸ್ತೆಯ ಒಂದು ಭಾಗ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ ದಾಬಸ್‍ಪೇಟೆ ಕೈಗಾರಿಕೆಗೆ ಕಾರ್ಮಿಕರನ್ನು ಹೊತ್ತು ತರುವ ಖಾಸಗಿ ಬಸ್ಸು ಸುಮಾರು ಒಂದು ಕಿ.ಮೀ ದೂರದಲ್ಲಿಯೇ ವಿರುದ್ಧ ರಸ್ತೆಗೆ ತಿರುಗಿಸಿಕೊಂಡು ಬರುವಾಗ ಮೊದಲೇ ನಡೆದಿದ್ದ ಅಪಘಾತದ ಪಕ್ಕದ ರಸ್ತೆಯಲ್ಲೇ ಬೆಂಗಳೂರು ಕಡೆಗೆ ಹೋಗುತ್ತಿದ್ದ ಹಾಲಿನ ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ಹಾಗೂ ಖಾಸಗಿ ಬಸ್ಸಿನ ಮುಂಭಾಗ ಪೂರ್ಣ ಜಖಂಗೊಂಡಿದೆ.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಬೆಳ್ಳಂಬೆಳಗ್ಗೆಯೇ ಸರ್ಕಾರಿ ಬಸ್, ಲಾರಿ, ಕ್ಯಾಂಟರ್, ಖಾಸಗಿ ಬಸ್ ಗಳ ನಡುವೆ ಸರಣಿ ಅಪಘಾತವಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ- 48ರ ಹಳೆನಿಜಗಲ್ ಗೇಟ್ ಸಮೀಪ ನಡೆದಿದೆ.

ಶನಿವಾರ ಮುಂಜಾನೆ ಸುಮಾರು 5.30 ಗಂಟೆಯ ಸಮಯದಲ್ಲಿ ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಲಾರಿಯೂ ಹಳೆ ನಿಜಗಲ್ ಸಮೀಪ ತಕ್ಷಣ ಬ್ರೇಕ್ ಹಾಕಿದ ಪರಿಣಾಮ ಹಿಂದೆಯಿಂದ ಅದೇ ಮಾರ್ಗದಲ್ಲಿ ಬರುತ್ತಿದ್ದ ಶಿವಮೊಗ್ಗದಿಂದ ಬೆಂಗಳೂರಿಗೆ ಬರುತ್ತಿದ್ದ ಸರ್ಕಾರಿ ಬಸ್ ವೇಗವಾಗಿ ಬಂದು ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸಿನ ಎಡಭಾಗ ಪೂರ್ಣ ಜಖಂಗೊಂಡಿದೆ.

ವಿರುದ್ಧ ದಿಕ್ಕಿನಲ್ಲಿ ಬಂದು ಡಿಕ್ಕಿ:

ಅಪಘಾತದಿಂದ ರಸ್ತೆಯ ಒಂದು ಭಾಗ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ ದಾಬಸ್‍ಪೇಟೆ ಕೈಗಾರಿಕೆಗೆ ಕಾರ್ಮಿಕರನ್ನು ಹೊತ್ತು ತರುವ ಖಾಸಗಿ ಬಸ್ಸು ಸುಮಾರು ಒಂದು ಕಿ.ಮೀ ದೂರದಲ್ಲಿಯೇ ವಿರುದ್ಧ ರಸ್ತೆಗೆ ತಿರುಗಿಸಿಕೊಂಡು ಬರುವಾಗ ಮೊದಲೇ ನಡೆದಿದ್ದ ಅಪಘಾತದ ಪಕ್ಕದ ರಸ್ತೆಯಲ್ಲೇ ಬೆಂಗಳೂರು ಕಡೆಗೆ ಹೋಗುತ್ತಿದ್ದ ಹಾಲಿನ ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ಹಾಗೂ ಖಾಸಗಿ ಬಸ್ಸಿನ ಮುಂಭಾಗ ಪೂರ್ಣ ಜಖಂಗೊಂಡಿದೆ.

ಅಪಘಾತದಲ್ಲಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ:

ಸರ್ಕಾರಿ ಬಸ್ಸಿನಲ್ಲಿದ್ದ ಹತ್ತು ಪ್ರಯಾಣಿಕರಿಗೆ ಹಾಗೂ ಖಾಸಗಿ ಬಸ್ಸಿನಲ್ಲಿದ್ದ ಐದು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕ್ಯಾಂಟರ್ ಚಾಲಕನಿಗೆ ಕಾಲು ಮುರಿದಿದ್ದು, ಎರಡೂ ಬಸ್ಸುಗಳಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರೆಲ್ಲರೂ ಪ್ರಾಣಾಪ್ರಾಯದಿಂದ ಪಾರಾದ್ದಾರೆ, ಗಾಯಾಳುಗಳು ತುಮಕೂರು ಜಿಲ್ಲಾಸ್ಪತ್ರೆ ಹಾಗೂ ದಾಬಸ್‍ಪೇಟೆ ಪಟ್ಟಣದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ.