ಪತಂಜಲಿ ಯೋಗಾ ಭವನದಲ್ಲಿ ಭಾನುವಾರ ರಥಸಪ್ತಮಿ ಪ್ರಯುಕ್ತ ಆಯೋಜಿಸಿದ್ದ ೧೦೮ ಸೂರ್ಯ ನಮಸ್ಕಾರ ಮಾಡಿದ ನಂತರ ಮಾತನಾಡಿದರು. ಪೌರಾಣಿಕ ನಂಬಿಕೆಗಳ ಪ್ರಕಾರ, ಈ ದಿನ ಭಗವಾನ್ ಸೂರ್ಯದೇವನು ಜನ್ಮದಿನವೆಂದು ಹಾಗೂ ಸೂರ್ಯನು ತನ್ನ ದೈವಿಕ ಬೆಳಕಿನಿಂದ ಇಡೀ ವಿಶ್ವವನ್ನು ಬೆಳಗಿಸುತ್ತಾರೆ ಎಂಬ ನಂಬಿಕೆ ಇದೆ. ರಥಸಪ್ತಮಿಯಂದು ಸೂರ್ಯ ನಮಸ್ಕಾರ ಮಾಡುವ ಮೂಲಕ ಸೂರ್ಯದೇವನಿಗೆ ವಂದಿಸುತ್ತೇವೆ ಎಂದು ತಿಳಿಸಿ, ಸೂರ್ಯ ಕಿರಣಗಳ ಮನುಷ್ಯನ ದೇಹನ ಮೇಲಿನ ಪ್ರಬಾವ ಹಾಗೂ ಉಪಯೋಗಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಹೊಳೆನರಸೀಪುರ: ಸೂರ್ಯನ ಮುಂಜಾನೆಯ ಕಿರಣಗಳಲ್ಲಿ ಔಷಧಿ ಗುಣಗಳಿದ್ದು, ಇದರ ಸ್ಪರ್ಶದಿಂದ ಹಲವಾರು ಪ್ರಯೋಜನಗಳನ್ನು ಅನುಭವಿಸಿದ್ದೇವೆ. ಅದೇ ರೀತಿ ಸೂರ್ಯ ನಮಸ್ಕಾರದಿಂದ ದೇಹದ ಸರ್ವಾಂಗದಲ್ಲಿಯೂ ಚೈತನ್ಯ, ಜ್ಞಾನ ಮತ್ತು ಆರೋಗ್ಯ ವೃದ್ಧಿಸುತ್ತದೆ ಎಂದು ಯೋಗಾ ಗುರು ಗಣೇಶ್ ಪ್ರಸಾದ್ ತಿಳಿಸಿದರು.

ಪಟ್ಟಣದ ಪತಂಜಲಿ ಯೋಗಾ ಭವನದಲ್ಲಿ ಭಾನುವಾರ ರಥಸಪ್ತಮಿ ಪ್ರಯುಕ್ತ ಆಯೋಜಿಸಿದ್ದ ೧೦೮ ಸೂರ್ಯ ನಮಸ್ಕಾರ ಮಾಡಿದ ನಂತರ ಮಾತನಾಡಿದರು. ಪೌರಾಣಿಕ ನಂಬಿಕೆಗಳ ಪ್ರಕಾರ, ಈ ದಿನ ಭಗವಾನ್ ಸೂರ್ಯದೇವನು ಜನ್ಮದಿನವೆಂದು ಹಾಗೂ ಸೂರ್ಯನು ತನ್ನ ದೈವಿಕ ಬೆಳಕಿನಿಂದ ಇಡೀ ವಿಶ್ವವನ್ನು ಬೆಳಗಿಸುತ್ತಾರೆ ಎಂಬ ನಂಬಿಕೆ ಇದೆ. ರಥಸಪ್ತಮಿಯಂದು ಸೂರ್ಯ ನಮಸ್ಕಾರ ಮಾಡುವ ಮೂಲಕ ಸೂರ್ಯದೇವನಿಗೆ ವಂದಿಸುತ್ತೇವೆ ಎಂದು ತಿಳಿಸಿ, ಸೂರ್ಯ ಕಿರಣಗಳ ಮನುಷ್ಯನ ದೇಹನ ಮೇಲಿನ ಪ್ರಬಾವ ಹಾಗೂ ಉಪಯೋಗಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಪತಂಜಲಿ ಯೋಗಾಕೂಟದ ಹಿರಿಯರಾದ ಸತ್ಯನಾರಾಯಣಶೆಟ್ಟಿ, ಕರುಣಾಕರ್, ದಿನೇಶ್ ಎಂ.ಪಿ., ವಾಸುದೇವಮೂರ್ತಿ, ಎಚ್.ಕೆ. ನರಸಿಂಹ, ಮಂಜುನಾಥ್, ನಾರಾಯಣಪ್ಪ, ದರ್ಶನ್, ದೇವರಾಜು, ಕೃಷ್ಣಮೂರ್ತಿ, ಅಧಿಶೇಷ, ಪ್ರಕಾಶ್, ಚಂದ್ರಮತಿ, ರೂಪ ಮಂಜುನಾಥ್, ಸುಜಾತ, ಪ್ರತಿಮಾ, ಬೃಂದ, ಧನಲಕ್ಷ್ಮಿ, ನೇತ್ರಾವತಿ, ರೂಪ, ಹಾಗೂ ಇತರರು ಭಾಗವಹಿಸಿದ್ದರು.