ಜೇನು ಕೃಷಿ ಮಾಡಿ ಹೆಚ್ಚಿನ ಆದಾಯ ಗಳಿಸಿ: ವೈದ್ಯ ಸುನೀಲ್ ಚೇತನ

| Published : Sep 23 2025, 01:05 AM IST

ಸಾರಾಂಶ

ಮಾವಳ್ಳಿ ರೈತರ ಉತ್ಪಾದಕ ಕಂಪನಿ ಮತ್ತು ಖಾದಿ ಗ್ರಾಮೋದ್ಯೋಗ ಆಯೋಗದ ಸಹಯೋಗದಲ್ಲಿ ಇಲ್ಲಿನ ಕೊಪ್ಪ ಪಂಚಾಯತ್ ನ ಬೇಳೂರಿನ ಅಣ್ಣಪ್ಪ ಮರಾಠಿ ಅವರ ಮನೆ ಆವರಣದಲ್ಲಿ ಜೇನು ಕೃಷಿ ಮಾಹಿತಿ ಕಾರ್ಯಾಗಾರವನ್ನು ವೈದ್ಯ ಸುನಿಲ್ ಚೇತನ್ ಉದ್ಘಾಟಿಸಿದರು.

ಕೊಪ್ಪದ ಬೇಳೂರಿನಲ್ಲಿ ಜೇನು ಕೃಷಿ ಕಾರ್ಯಾಗಾರ ಯಶಸ್ವಿ

ಕನ್ನಡಪ್ರಭ ವಾರ್ತೆ ಭಟ್ಕಳ

ಮಾವಳ್ಳಿ ರೈತರ ಉತ್ಪಾದಕ ಕಂಪನಿ ಮತ್ತು ಖಾದಿ ಗ್ರಾಮೋದ್ಯೋಗ ಆಯೋಗದ ಸಹಯೋಗದಲ್ಲಿ ಇಲ್ಲಿನ ಕೊಪ್ಪ ಪಂಚಾಯತ್ ನ ಬೇಳೂರಿನ ಅಣ್ಣಪ್ಪ ಮರಾಠಿ ಅವರ ಮನೆ ಆವರಣದಲ್ಲಿ ಜೇನು ಕೃಷಿ ಮಾಹಿತಿ ಕಾರ್ಯಾಗಾರವನ್ನು ವೈದ್ಯ ಸುನಿಲ್ ಚೇತನ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಔಷಧೀಯ ಗುಣ ಹೊಂದಿರುವ ಪರಿಶುದ್ಧ ಜೇನು ಕರಾವಳಿ ಪ್ರದೇಶಗಳಲ್ಲಿ ಸಿಗುವುದು ಅತ್ಯಂತ ವಿಶೇಷ. ಈ ಭಾಗದ ರೈತರು ಸರ್ಕಾರದ ವಿವಿಧ ಯೋಜನೆ ಬಳಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಜೇನು ಕೃಷಿಯಲ್ಲಿ ತೊಡಗಿಸಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೂ ಕೊಡುಗೆ ನೀಡಲಿ ಎಂದರು.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಹಾಯಕ ನಿರ್ದೇಶಕ ರಾಮದಾಸ್ ದೊಮ್ಲೆವಾಲ ಮಾತನಾಡಿ, ಜೇನು ಕೃಷಿಗೆ ಇರುವ ಅವಕಾಶಗಳು ಮತ್ತು ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಜೇನು ಕೃಷಿ ತರಬೇತು ಅನಂತಕುಮಾರ್ ಹೆಗಡೆ ಜೇನುಕೃಷಿಯ ಕುರಿತು ಸವಿಸ್ತಾರ ವಾಗಿ ಮಾಹಿತಿ ನೀಡಿದರು. ಖಾದಿ ಮಂಡಳಿಯ ಬಿ.ಕೆ. ಚೌಹಾಣ್, ನಾಯಕ ತೋಟಗಾರಿಕೆ ಇಲಾಖೆಯ ನಿರ್ದೇಶಕ ಶ್ರವಣಕುಮಾರ್, ಪತ್ರಕರ್ತ ಹಾಗೂ ಮಾವಳ್ಳಿ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ವಿಷ್ಣು ದೇವಡಿಗ ಮಾತನಾಡಿದರು. ಅಧ್ಯಕ್ಷತೆಯನ್ನು ಮಾವಳ್ಳಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ವಿಷ್ಣು ಮೂರ್ತಿ ಹೆಗಡೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಯ್ಕಿಣಿ ಗ್ರಾಪಂ ಸದಸ್ಯ ರುಕ್ಮ ಮರಾಠಿ, ಕಲ್ಕಿಣಿ ಕಿಸಾನ್ ಸಂಘದ ಗ್ರಾಮ ಸಮಿತಿಯ ಅಧ್ಯಕ್ಷ ಜನಾರ್ಧನ ದೇವಾಡಿಗ, ಕೃಷಿಕ ಅಣ್ಣಪ್ಪ ಮರಾಠಿ ಮುಂತಾದವರಿದ್ದರು. ಖಾದಿ ಮಂಡಳಿಯ ಉತ್ತರ ಕನ್ನಡ ಜಿಲ್ಲೆಯ ಅಧಿಕಾರಿ ಎನ್ಎಸ್ ನಾಗನಗೌಡ ಪ್ರಾಸ್ತಾವಿಕ ಮಾತನಾಡಿದರು. ಸೀತಾ ಮರಾಠಿ ಪ್ರಾರ್ಥಿಸಿದರು. ಸ್ಕೋಡ್ವೆಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ ನಿರೂಪಿಸಿದರು. ಶ್ರೀಕಾಂತ್ ಹೆಗಡೆ ವoದಿಸಿದರು. ಕಾರ್ಯಕ್ರಮದಲ್ಲಿ ಮಾವಳ್ಳಿ ರೈತ ಉತ್ಪಾದಕರ ಸಂಸ್ಥೆಯ ನಿರ್ದೇಶಕ ನಾರಾಯಣ ಭಟ್, ಗಣಪತಿ ಮರಾಠಿ, ಕೃಷಿಕ ಸಮಾಜದ ಅಧ್ಯಕ್ಷ ಶ್ರೀಧರ್ ಹೆಬ್ಬಾರ ಹಾಗೂ ನೂರಕ್ಕೂ ಹೆಚ್ಚು ರೈತರು ಪಾಲ್ಗೊಂಡು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.