ದೇವರ ನಿರ್ಮಿತ ಆಹಾರ ಸೇವಿಸಿ

| Published : Mar 30 2024, 12:52 AM IST

ಸಾರಾಂಶ

ಮುಧೋಳ ಮಾನವ ನಿರ್ಮಿತ ಆಹಾರ ಪದಾರ್ಥ ಕಡಿಮೆ ಮಾಡಿ, ದೇವರ ನಿರ್ಮಿತ ಹಣ್ಣು - ಹಂಪಲು, ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿದರೆ ರೋಗದಿಂದ ದೂರ ಇರಬಹುದು ಎಂದು ಶಿರೂರಿನ ಬಸವಲಿಂಗ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಮಾನವ ನಿರ್ಮಿತ ಆಹಾರ ಪದಾರ್ಥ ಕಡಿಮೆ ಮಾಡಿ, ದೇವರ ನಿರ್ಮಿತ ಹಣ್ಣು - ಹಂಪಲು, ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿದರೆ ರೋಗದಿಂದ ದೂರ ಇರಬಹುದು ಎಂದು ಶಿರೂರಿನ ಬಸವಲಿಂಗ ಶ್ರೀಗಳು ಹೇಳಿದರು.

ನಗರದ ಹೊರವಲಯದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಚಿಂತನಸಿರಿ ಸಂಸ್ಥೆಯ 18ನೇ ವಾರ್ಷಿಕೋತ್ಸವ ವೈಚಾರಿಕ ಓಕಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಬ್ಬಗಳ ನೆಪದಲ್ಲಿ ಈಗಿನ ಅಧುನಿಕ ಪದ್ದತಿಯ ಆಹಾರವನ್ನು ಹೆಚ್ಚಾಗಿ ಸೇವನೆಯಿಂದ ಹಲವಾರು ರೋಗಕ್ಕೆ ಒಳಗಾಗುತ್ತಿದ್ದೇವೆ. ಹಿತ-ಮಿತವಾಗಿ ಹಿರಿಯರ ನಡೆಸಿಕೊಂಡು ಬಂದಿರುವ ಮೂರು ಹೊತ್ತಿನ ಊಟದ ನಿಯಮ ಪಾಲಿಸಿದರೆ ಆರೋಗ್ಯವಂತರಾಗಬಹುದೆಂದು ಕಿವಿಮಾತು ಹೇಳಿದರು.

ಹಾರೂಗೇರಿಯ ಸಾಹಿತಿ ವಿ.ಎಸ್. ಮಾಳಿ ಮಾತನಾಡಿ, ಭಾರತೀಯರು ನೆಲೆಸಿರುವ ವಿದೇಶಗಳಲ್ಲಿಯೂ ಹೋಳಿ ಹಬ್ಬ ಆಚರಿಸಲ್ಪಡುತ್ತದೆ. ಈ ಹೋಳಿ ಹಬ್ಬದಲ್ಲಿ ಮತ್ತು ಚುನಾವಣೆಗಳಲ್ಲಿ ಕೆಲವರು ಮದ್ಯ ಸೇವಿಸುವುದನ್ನ ಆರಂಭಿಸತ್ತಾರೆ. ಬಳಿಕ, ಅದೇ ಚಟವಾಗಿ ಮುಂದುವರಿಯುತ್ತದೆ. ಇದರಿಂದ ಮುಂದೆ ಜೀವನದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಚಿಂತನಸಿರಿ ಗೌರವಾಧ್ಯಕ್ಷ ಎಂ.ಆರ್‌.ದೇಸಾಯಿ ಮಾತನಾಡಿ, ಭಾರತಿಯ ಹಬ್ಬಗಳನ್ನು ನಮ್ಮ ವೇದಿಕೆಯಿಂದ ವಿಶಿಷ್ಟವಾಗಿ ಆಚರಿಸುವುದರ ಮೂಲಕ ಚಿಂತನ- ಮಂಥನ ನಡೆಸಲಾಗುತ್ತಿದೆ ಎಂದರು.

ಚಿಂತನಸಿರಿ ಅಧ್ಯಕ್ಷ ಡಾ.ಶಿವಾನಂದ ಕುಬಸದ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಲ್ಲಪ್ಪ ಸಬರದ, ವಕೀಲ ರಾಮಕೃಷ್ಣ ಬುದ್ನಿ, ಕಾನಿಪ ಸಂಘದ ಅಧ್ಯಕ್ಷ ಬಿ.ರತ್ನಾಕರ ಶೆಟ್ಟಿ ಸೇರಿದಂತೆ ಹಲವರು ಹಾಜರಿದ್ದರು.

ಇದೇ ವೇಳೆ ಆರೋಗ್ಯ ಪ್ರಜ್ಙೆ ಹಾಗೂ ನಮ್ಮಆಹಾರ, ನಮ್ಮ ಪರಿಸರ ಬಗ್ಗೆ ಬೆಂಗಳೂರಿನ ಶಸ್ತ್ರ ಚಿಕಿತ್ಸಕ ಡಾ.ಟಿ.ಎಚ್.ಆಂಜನಪ್ಪ, ಧಾರವಾಡದ ಆರೋಗ್ಯತಜ್ಞ ಸಂಜೀವ ಕುಲಕರ್ಣಿ ಮಾಹಿತಿ ನೀಡಿದರು.

ಬಿಜಿಎಂಐಟಿ ಕಾಲೇಜಿನ ಪ್ರಾಚಾರ್ಯ ಶ್ರವಣಕುಮಾರ ಕೆರೂರ, ಎಂ.ವಿ.ದಾಸರಡ್ಡಿ, ಸಾಹಿತಿ ಚಂದ್ರಶೇಖರ ದೇಸಾಯಿ, ಎಂ.ಜಿ.ದಾಸರ, ಅದೃಶಪ್ಪ ದೇಸಾಯಿ, ವೆಂಕಟೇಶ ಗುಡೆಪ್ಪನವರ, ವೀರೇಶ ಮಡಿವಾಳ, ಡಾ.ಸಿದ್ದಪ್ಪ ಬಿದರಿ, ಎಂ.ಬಿ.ಮುರಗೋಡ, ರುದ್ರಪ್ಪ ಜಾಡರ, ಡಾ. ಸಂಗಮೇಶ ಕಲ್ಯಾಣಿ, ರಮೇಶ ಮೂಲಿಮನಿ, ಸಿದ್ದು ದಿವಾಣ, ಶಶಿ ಬುದ್ನಿ, ರಮೇಶ ಅಣ್ಣಿಗೇರಿ, ಮಹಾದೇವ ಮಡಿವಾಳರ, ಚಂದ್ರಶೇಖರ ರೂಗಿ, ಜಯಶ್ರೀ ಕಂಬಿ ಸವಿತಾ ಅಂಗಡಿ ಇದ್ದರು. ಕಾರ್ಯಕ್ರಮದಲ್ಲಿ ಬೀಳಗಿ ಆಶುಕವಿ ಡಾ.ಸಿದ್ದಪ್ಪ ಬಿದರಿ ಅವರಿಗೆ ಕಲಾಶ್ರೀ ಪಶಸ್ತಿ ನೀಡಿ ಶ್ರೀಗಳು ಮತ್ತು ಗಣ್ಯರು ಗೌರವಿಸಿದರು.

--

ಕೋಟ್

ಹಬ್ಬಗಳ ನೆಪದಲ್ಲಿ ಈಗಿನ ಅಧುನಿಕ ಪದ್ದತಿಯ ಆಹಾರ ಹೆಚ್ಚಾಗಿ ಸೇವಿಸುವುದರಿಂದ ರೋಗಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದೇವೆ. ಹಿತ-ಮಿತ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ನಮ್ಮ ಭಾರತೀಯ ಆರೋಗ್ಯ ಪದ್ಧತಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು.

ಬಸವಲಿಂಗ ಶ್ರೀ, ಶಿರೂರು