ಸಾರಾಂಶ
- ದಿಂಡಿನಕೊಪ್ಪ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪೌಷ್ಠಿಕ ಆಹಾರ ಸೇವನೆಯಿಂದ ರೋಗ ಮುಕ್ತವಾಗಿ ಬದುಕಬಹುದು. ನಮ್ಮ ಮನೆಗಳಲ್ಲೇ ಪೌಷ್ಟಿಕ ಆಹಾರ ತಯಾರಿಸ ಬೇಕು ಎಂದು ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ಬೆನ್ನಿ ಸಲಹೆ ನೀಡಿದರು.
ಸೋಮವಾರ ದಿಂಡಿನಕೊಪ್ಪ ಅಂಗನವಾಡಿ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಅಭಿಯಾನ ಉದ್ಘಾಟಿಸಿ ಮಾತನಾಡಿ, ಅಪೌಷ್ಠಿಕತೆ ಮುಕ್ತ ಭಾರತ ನಿರ್ಮಾಣ ನಮ್ಮಿಂದ, ನಮ್ಮ ಮನೆಗಲಿಂದಲೇ ಪ್ರಾರಂಭಿಸೋಣ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಯೋಜನೆ ಬಳಸಿಕೊಂಡು ನಮ್ಮ ಕುಟುಂಬವನ್ನು ಸದೃಡ ಕುಟುಂಭವನ್ನಾಗಿ ಮಾಡೋಣ ಎಂದರು.ಸಿಡಿಪಿಓ ಇಲಾಖೆ ಮೆಲ್ವೀಚಾರಕಿ ಸಾವಿತ್ರಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನಾವು ಸೇವಿಸುವ ಆಹಾರ ಮತ್ತು ಆರೋಗ್ಯ ಮನುಷ್ಯನ ಜೀವನದ ಅಮೂಲ್ಯ ವಿಚಾರ. ಇತ್ತೀಚಿನ ದಿನಗಳಲ್ಲಿ ಜನರು ಜಂಕ್ ಪುಡ್ ಜಾಸ್ತಿ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ನಮ್ಮ ಇಲಾಖೆಯಿಂದ ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಠಿಕ ಆಹಾರ ನೀಡುವ ಯೋಜನೆ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ ಮಾತನಾಡಿ,ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ ಸರ್ಕಾರಿ ನೌಕರರಂತೆ ಸಂಬಳ ನೀಡಬೇಕು. ಪಟ್ಟಣದ ವ್ಯಾಪ್ತಿಯ ಎಲ್ಲಾ ಅಂಗನವಾಡಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅತಿಥಿಗಳಾಗಿ ನಾಗಲಾಪುರ ಗ್ರಾಪಂ ಪಿಡಿಒ ಪ್ರೇಂ ಕುಮಾರ್, ಗ್ರಾಮದ ಹಿರಿಯರಾದ ನಾಗಭೂಷಣ್, ಗ್ರಾಪಂ ಸದಸ್ಯರಾದ ಚಿನ್ನಯ್ಯ,ರಮೇಶ್, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಪವಿತ್ರ, ನಿವೃತ್ತ ಶಿಕ್ಷಕ ರಾಜಕುಮಾರ್ ಇದ್ದರು.ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ನಮಿತ ಗರ್ಭಿಣಿ, ಬಾಣಂತಿಯರು ಅನುಸರಿಸಬೇಕಾದ ಎಚ್ಚರಿಕೆ ಬಗ್ಗೆ ಮಾಹಿತಿ ನೀಡಿದರು.ಹಿರಿಯ ಆರೋಗ್ಯ ನಿರೀಕ್ಷಿಣಾಧಿಕಾರಿ ದರ್ಶನ್ ಪೌಷ್ಠಿಕ ಆಹಾರ ಸೇವನೆ ಬಗ್ಗೆ ಸ್ಟೈಡ್ ಶೋ ಪ್ರದರ್ಶನದೊಂದಿಗೆ ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿದೇವಿ ಸ್ವಾಗತಿಸಿದರು. ಪಟ್ಟಣದ ವಿವಿಧ ಅಂಗನವಾಡಿಯ ಕಾರ್ಯಕರ್ತೆಯರಾದ ಮಂಜುಳಾ, ಪ್ರತಿಮಾ, ಗೀತಾ,ಶೃತಿ, ಹೇಮಾವತಿ, ಶೈಲಾ, ಕವಿತ, ದಿವ್ಯ, ಮಧುಮಾಲ, ಶಿವರತ್ನ,ರಮ,ಅನಿತ, ಉಷಾ, ಸೌಮ್ಯ, ಶಾಂತ, ಪೂರ್ಣಿಮ, ಆಶಾ ಕಾರ್ಯಕರ್ತೆ ವೀಣಾ, ಅಂಗನವಾಡಿ ಸಹಾಯಕಿ ರಾಧಾ ಭಾಗವಹಿಸಿದ್ದರು.ಪೌಷ್ಠಿಕ ಆಹಾರದ ಪ್ರದರ್ಶನ ಏರ್ಪಡಿಸಲಾಗಿತ್ತು.