ವಚನಾಮೃತ ಬಳಗದಿಂದ ಪರಿಸರಸ್ನೇಹಿ ಹೋಳಿ ಆಚರಣೆ

| Published : Mar 27 2024, 01:02 AM IST

ವಚನಾಮೃತ ಬಳಗದಿಂದ ಪರಿಸರಸ್ನೇಹಿ ಹೋಳಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ನಗರದ ಎಸ್.ಎಸ್. ಲೇಔಟ್ ಎ ಬ್ಲಾಕ್‌ನ 8ನೇ ಕ್ರಾಸ್‌ನಲ್ಲಿ ವಚನಾಮೃತ ಬಳಗದಿಂದ ಸೋಮವಾರ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಬಣ್ಣಗಳ ಬಳಸಿ, ಪರಿಸರಸ್ನೇಹಿ ಹೋಳಿ ಹಬ್ಬ ಆಚರಿಸಲಾಯಿತು.

ದಾವಣಗೆರೆ: ನಗರದ ಎಸ್.ಎಸ್. ಲೇಔಟ್ ಎ ಬ್ಲಾಕ್‌ನ 8ನೇ ಕ್ರಾಸ್‌ನಲ್ಲಿ ವಚನಾಮೃತ ಬಳಗದಿಂದ ಸೋಮವಾರ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಬಣ್ಣಗಳ ಬಳಸಿ, ಪರಿಸರಸ್ನೇಹಿ ಹೋಳಿ ಹಬ್ಬ ಆಚರಿಸಲಾಯಿತು.

ಬಳಗದ ಅಧ್ಯಕ್ಷೆ ಸೌಮ್ಯ ಸತೀಶ್ ಧಾರವಾಡ ಮಾತನಾಡಿ, 15 ವರ್ಷಗಳಿಂದ ನಮ್ಮ ಬಳಗದಿಂದ ನೈಸರ್ಗಿಕ ವಸ್ತುಗಳನ್ನು ಬಳಸಿ ಬಣ್ಣ ತಯಾರಿಸಿ, ಹೋಳಿ ಆಚರಿಸುತ್ತಿದ್ದೇವೆ. ವಿವಿಧ ಹಣ್ಣು, ತರಕಾರಿ ಹಾಗೂ ದಾಸವಾಳದ ಎಲೆ, ಕರಿಬೇವು, ತುಳಸಿ, ಮೆಹಂದಿ ಸೊಪ್ಪು ಇವೆಲ್ಲದರ ಮಿಶ್ರಣ ಉಪಯೋಗಿಸಿ ಬಣ್ಣವಾಗಿ ತಯಾರಿಸಿದ್ದೇವೆ. ನೈಸರ್ಗಿಕವಾಗಿ ಪರಿಸರಕ್ಕೆ ಹಾಗೂ ತ್ವಚೆಗೆ ಯಾವುದೇ ರೀತಿಯ ತೊಂದರೆ ಉಂಟಾಗದ ರೀತಿಯಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದರು.

ಹೋಳಿ ಕಾರ್ಯಕ್ರಮದಲ್ಲಿ ಬಳಗದ ಸುಮಾ ಪ್ರಸಾದ್, ದೀಪ, ಜ್ಯೋತಿ, ಸುಮಾ, ಸರಿತಾ, ಕವಿತಾ, ಸುರೇಖಾ, ತನುಜ, ಸುಜಾತಾ, ಮಧು, ಮಂಗಳ, ಶಾಂತ, ಸುಮಾ ಬೇತೂರು, ಸಾವಿತ್ರ, ಶ್ರೇಯ, ಶಿಲ್ಪ, ವಿಜಯ, ಸರೋಜಾ ಹಾಗೂ ಪದಾಧಿಕಾರಿಗಳು, ಪುಟ್ಟ ಪುಟ್ಟ ಮಕ್ಕಳು, ಸ್ನೇಹಿತರು ಭಾಗವಹಿಸಿದ್ದರು.

- - - -25ಕೆಡಿವಿಜಿ39, 40ಃ:

ದಾವಣಗೆರೆಯ ವಚನಾಮೃತ ಬಳಗದಿಂದ ನೈಸರ್ಗಿಕ, ಪರಿಸರ ಸ್ನೇಹಿ ಹೋಳಿ ಹಬ್ಬ ಆಚರಿಸಲಾಯಿತು.