ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಸಹಕಾರಿ ಕ್ಷೇತ್ರ ವಿಶಾಲವಾಗಿದ್ದು, ಇತ್ತೀಚಿನ ವರ್ಷದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಗ್ರಾಮೀಣ ಜನತೆಗೆ ಆರ್ಥಿಕ ಶಕ್ತಿ ದೊರಕಿಸಿಕೊಡುವಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಹಾಗೂ ಶಿಮೂಲ್ ನಿರ್ದೇಶಕ ಟಿ. ಶಿವಶಂಕರಪ್ಪ ಹೆಮ್ಮೆ ವ್ಯಕ್ತಪಡಿಸಿದರು.ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್, ಡಿಸಿಸಿ ಬ್ಯಾಂಕ್ ಶಿವಮೊಗ್ಗ, ಜಿಲ್ಲಾ ಸಹಕಾರಿ ಹಾಲು ಒಕ್ಕೂಟ(ಶಿಮೂಲ್), ಸಹಕಾರ ಇಲಾಖೆ ವತಿಯಿಂದ ನಡೆದ 71ನೇ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪರಸ್ಪರ ಸಹಕಾರ ನೀಡುವ ಮೂಲ ಉದ್ದೇಶಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಸಂಘಗಳು ರೈತರಿಗೆ ಬೆಳೆಸಾಲ ನೀಡುವುದು ಮಾತ್ರವಲ್ಲ. ವಿವಿಧ ರೀತಿಯ ಆರ್ಥಿಕ ಚಟುವಟಿಕೆಯಲ್ಲಿ ಸಹ ಸಹಕಾರ ನೀಡುತ್ತಿವೆ. ಅವರು ಸಹಕಾರಿ ಕ್ಷೇತ್ರ ವಿಶಾಲವಾಗಿದ್ದು, ಹಾಲು ಉತ್ಪಾದಕರ ಸಹಕಾರ ಸಂಘ ಗ್ರಾಮೀಣ ಭಾಗದಲ್ಲಿ ಅಗಾಧ ಆರ್ಥಿಕ ಚಟುವಟಿಕೆ ಮೂಲಕ ಕೃಷಿಕರಿಗೆ ಗ್ರಾಮೀಣ ಜನತೆಗೆ ಆರ್ಥಿಕ ಶಕ್ತಿಯನ್ನು ಕಲ್ಪಿಸಿಕೊಟ್ಟಿದೆ ಎಂದು ತಿಳಿಸಿದರು.
ಸಹಕಾರಿ ಸಂಘಗಳಲ್ಲಿ ಚುನಾವಣೆ ಸಂದರ್ಬದಲ್ಲಿ ಮಾತ್ರ ಆರೋಗ್ಯಕರ ಸ್ಪರ್ಧೆ ಇರಬೇಕು. ನಂತರದಲ್ಲಿ ಸದಸ್ಯರಿಗೆ ಪ್ರಮಾಣಿಕವಾಗಿ ಸೌಲಭ್ಯ ತಲುಪಿಸುವ ದಿಸೆಯಲ್ಲಿ ತೊಡಗಿಸಿಕೊಳ್ಳಬೇಕು. ದೇಶದ ಅಭಿವೃದ್ಧಿಗಾಗಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ ಎನ್ನುವ ಆಶಯದೊಂದಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಾಣದ ಸಂಕಲ್ಪದೊಂದಿಗೆ ಕಾರ್ಯ ನಿರ್ವಹಿಸೋಣ ಎಂದರು.ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರ ಸಂಘಗಳು ಉತ್ತಮ ಕಾರ್ಯ ನಿರ್ವಹಿಸುವ ಮೂಲಕ ಲಕ್ಷಾಂತರ ಗ್ರಾಮೀಣ ಜನರ ಅಭಿವೃದ್ಧಿಗೆ ಕಾರಣವಾಗಿವೆ. ಸಹಕಾರ ಸಂಘದ ನಿರ್ದೇಶಕರು, ಸಿಬ್ಬಂದಿಗಳು ಜನ ಸಾಮಾನ್ಯರ ಹಿತಕ್ಕಾಗಿ ಉತ್ತಮ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ತಾಲೂಕಿನ ಹಿರಿಯ ಸಹಕಾರಿ ನಿರ್ದೇಶಕರಾಗಿ ಹಿತ್ತಲ ಸೊಸೈಟಿ ಗಜೇಂದ್ರಪ್ಪ ಹುಣಸೇಕಟ್ಟೆ, ವೀರಶೈವ ಸೊಸೈಟಿಯ ಹುಲಿಗೆಮ್ಮರವರನ್ನು ಸನ್ಮಾನಿಸಲಾಯಿತು. ತಾಲೂಕಿನ ಗಾಮ, ತೊಗರ್ಸಿ, ಅಂಬಾರಗೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉತ್ತಮ ಸಹಕಾರಿ ನೌಕರರಾಗಿ ಹುಚ್ಚರಾಯಪ್ಪ ಈಸೂರು, ಪ್ರಕಾಶ್ ಅಂಬಾರಗೊಪ್ಪ, ಉಮೇಶ್ ನರಸಾಪುರ, ಸುರೇಶ್ ಮಲ್ಲೇನಹಳ್ಳಿ, ಓಂಕಾರ್ ಶಿರಾಳಕೊಪ್ಪ, ಶಿಕಾರಿಪುರ ವೀರಶೈವ ಸೊಸೈಟಿಯ ಗುರುಶಾಂಶಯ್ಯ, ಕೇಶವಮೂರ್ತಿ ಬೇಗೂರು, ಶಂಕರನಾಯ್ಕ ಮುತ್ತಗಿ ರವರನ್ನು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮರಿಯಪ್ಪ ಸಹಕಾರಿ ಧ್ವಜಾರೋಹಣ ನೆರವೇರಿಸಿದರು. ತಾ. ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ, ವಿವಿಧ ಸಹಕಾರಿ ಸಂಘದ ನಿರ್ದೇಶಕರಾದ ಚಂದ್ರಶೇಖರಗೌಡ, ಎಚ್.ಎಸ್. ರವೀಂದ್ರ, ಶಿವ ಬ್ಯಾಂಕ್ ಅಧ್ಯಕ್ಷ ಗಂಗಾಧರಪ್ಪ, ಮುಖಂಡ ನಗರದ ಮಹಾದೇವಪ್ಪ, ಸಹಕಾರಿ ಯೂನಿಯನ್ ನಿರ್ದೇಶಕ ಡಿ.ಎಸ್. ಈಶ್ವರಪ್ಪ, ಮಮತಾ ಚಂದ್ರಕುಮಾರ್, ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಎಸ್. ನಾಗಪ್ಪ, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಲ್. ರಮೇಶ್ ಸಹಿತ ಬಹುತೇಕ ಸಹಕಾರಿ ಸಂಘಗಳ ಸಿಬ್ಬಂದಿ, ನಿರ್ದೇಶಕರು ಉಪಸ್ಥಿತರಿದ್ದರು.