ರಾಗಿಯಲ್ಲಿ ಆಹಾರ ಮೌಲ್ಯವರ್ಧನೆ ಮೂಲಕ ಆರ್ಥಿಕ ಸಬಲರಾಗಿ: ಎಚ್.ಎನ್. ಮಮತಾ

| Published : Aug 03 2025, 01:30 AM IST

ಸಾರಾಂಶ

ರಾಗಿ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ, ವಿವಿಧ ಸಾವಯವ ಗೊಬ್ಬರಗಳ ತಯಾರಿಕೆ ಮತ್ತು ಬಳಕೆ, ಮಹತ್ವ, ನೀರಿನ ಸಮರ್ಥ ಬಳಕೆ ಕುರಿತು ಡಾ.ಜಿ.ವಿ. ಸುಮಂತ್ ಕುಮಾರ್, ಪಿಎಂಎಫ್ಎಂಇ ಯೋಜನೆಯಡಿ ರಾಗಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ದೊರೆಯುವ ಸಾಲ ಸೌಲಭ್ಯಗಳು ಗೌರವ್ವ ಅಗಸೀಬಾಗಿಲ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಮೈಸೂರು

ರಾಗಿ ಬೆಳೆಯು ಉತ್ತಮ ಪೌಷ್ಠಿಕವಾದ ಆಹಾರ ಧಾನ್ಯ ಹಾಗೂ ಬಹು ಬೇಡಿಕೆಯ ಬೆಳೆಯಾಗಿದ್ದು, ರಾಗಿ ಬೆಳೆಯಲ್ಲಿ ಆಹಾರ ಮೌಲ್ಯವರ್ಧನೆ ಮಾಡುವುದನ್ನು ಅಳವಡಿಸಿಕೊಂಡು ರೈತ ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಎಂದು ಜಾಗೃತ ಕೋಶದ ಪ್ರಭಾರ ಜಂಟಿ ಕೃಷಿ ನಿರ್ದೇಶಕಿ ಎಚ್.ಎನ್. ಮಮತಾ ಕರೆ ನೀಡಿದರು.ಮೈಸೂರು ತಾಲೂಕಿನ ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಆಯೋಜಿಸಿದ್ದ ರಾಗಿ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ಹಾಗೂ ಮೌಲ್ಯವರ್ಧನೆ ಕುರಿತ ಮೂರು ದಿನಗಳ ಸಾಂಸ್ಥಿಕ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಗಿ ಬೆಳೆಯಲ್ಲಿ ಮೌಲ್ಯವರ್ಧಿತ ಉತ್ಪನ್ನಗಳನ್ನು ಬ್ಯಾಂಡ್ ಮಾಡಿ ಮಾರುಕಟ್ಟೆ ವಿಸ್ತರಿಸಿಕೊಳ್ಳುವಲ್ಲಿ ಗಮನಹರಿಸಬೇಕು ಎಂದರು.ಮಂಡ್ಯದ ವಿ ಹೆಲ್ಪ್ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಾಣಿ ಚಂದ್ರಶೇಖರ್ ಅವರು, ರಾಗಿಯಲ್ಲಿ ಮೌಲ್ಯವರ್ಧನೆ ಅವಶ್ಯಕತೆ, ಅವಕಾಶಗಳು, ವಿವರವಾದ ಯೋಜನೆ, ಗುಣಮಟ್ಟದ ಉತ್ಪನ್ನಗಳು, ಆಯವ್ಯಯ ಮತ್ತು ರಾಗಿಯಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ಗ್ರೇಡಿಂಗ್, ಪ್ಯಾಕಿಂಗ್, ಮಾರುಕಟ್ಟೆ ಕೌಶಲ್ಯಗಳು, ಯಶಸ್ವಿ ಉದ್ಯಮದ ಬಗ್ಗೆ ಅನುಭವ ಹಂಚಿಕೆ ಹಾಗೂ ರಾಗಿಯಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಶಿಬಿರಾರ್ಥಿಗಳೊಂದಿಗೆ ಪ್ರಾಯೋಗಿಕ ಕಲಿಕೆ ಮತ್ತು ಪ್ರಾತ್ಯಕ್ಷಿಕೆ ಕುರಿತು ಮಾಹಿತಿ ನೀಡಿದರು.ರಾಗಿಯಲ್ಲಿ ಮೌಲ್ಯವರ್ಧಿತ ಉತ್ಪನ್ನಗಳು ಕುರಿತು ಸಾವಯವ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕಿ ಡಾ. ಭಾಗೀರಥಿ ವಿವರಿಸಿದರು.ಸ್ವ ಸಹಾಯ ಸಂಘದ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ಕೃಷಿಕರಿಗೆ ಸಮರ್ಥ ಸಾಮರ್ಥ್ಯ ಅಭಿವೃದ್ಧಿ ಮತ್ತು ಸಹಕಾರ ಕೃಷಿ- ಸಮುದಾಯದ ಸಹಭಾಗಿತ್ವದಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆ ಲಿಂಕೇಜ್ ಕುರಿತು ಹಾಸನದ ಪ್ರಾಧ್ಯಾಪಕ ಡಾ. ಮಂಜುನಾಥ ಮಾಹಿತಿ ನೀಡಿದರು.ಸಸ್ಯರೋಗ ಶಾಸ್ತ್ರಜ್ಞರಾದ ಡಾ.ಆರ್.ಎನ್. ಪುಷ್ಪಾ ಅವರು, ರಾಗಿಯಲ್ಲಿ ತಳಿ ಆಯ್ಕೆ, ಸುಧಾರಿತ ಬೇಸಾಯ ಕ್ರಮಗಳು ಮತ್ತು ರಾಗಿಯಲ್ಲಿ ಸಮಗ್ರ ಕೀಟ/ ರೋಗಗಳ ನಿರ್ವಹಣೆ, ಕೀಟನಾಶಕಗಳ ಸುರಕ್ಷಿತ ಬಳಕೆ ಕುರಿತು ವಿವರಿಸಿದರು.ಸಿ.ಎಫ್.ಟಿ.ಆರ್.ಐ. ನಿಂದ ಅಭಿವೃದ್ಧಿಪಡಿಸಿರುವ ಮೌಲ್ಯವರ್ಧಿತ ತಾಂತ್ರಿಕತೆಗಳ ಬಗ್ಗೆ ಕುರಿತು ಹಿರಿಯ ತಾಂತ್ರಿಕ ಅಧಿಕಾರಿ ಡಾ.ಕೆ. ಅನಿಲ್ ಕುಮಾರ್ ತಿಳಿಸಿದರು.ರಾಗಿ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ, ವಿವಿಧ ಸಾವಯವ ಗೊಬ್ಬರಗಳ ತಯಾರಿಕೆ ಮತ್ತು ಬಳಕೆ, ಮಹತ್ವ, ನೀರಿನ ಸಮರ್ಥ ಬಳಕೆ ಕುರಿತು ಡಾ.ಜಿ.ವಿ. ಸುಮಂತ್ ಕುಮಾರ್, ಪಿಎಂಎಫ್ಎಂಇ ಯೋಜನೆಯಡಿ ರಾಗಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ದೊರೆಯುವ ಸಾಲ ಸೌಲಭ್ಯಗಳು ಗೌರವ್ವ ಅಗಸೀಬಾಗಿಲ ಮಾಹಿತಿ ನೀಡಿದರು.ಸಮಾರೋಪ ಸಮಾರಂಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಅವರು, ರೈತ ಮಹಿಳೆಯರು ರಾಗಿಯಲ್ಲಿ ಮೌಲ್ಯವರ್ಧನೆಮಾಡಿ ಯಶಸ್ವಿ ಉದ್ಯಮಿಗಳಾಗಬೇಕು ಎಂದು ಕರೆ ನೀಡಿದರು.ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ. ಮಧುಲತಾ, ಎನ್ಆರ್ ಎಲ್ಎಂ ಜಿಲ್ಲಾ ಸಂಯೋಜಕಿ ಎಸ್.ಬಿ. ಮಮತಾ, ಬಸವರಾಜು, ಕೃಷಿ ಅಧಿಕಾರಿಗಳಾದ ಜಿ.ಕೆ. ಶಿಲ್ಪಾ, ಎಚ್.ಆರ್. ರಾಜಶೇಖರ, ಎಲ್. ಮಾಲತಿ ಇದ್ದರು.