ಶಿರಾ ತಾಲೂಕಿನ ಮಾದೇನಹಳ್ಳಿ ಗ್ರಾಮದಲ್ಲಿ ನಡೆದ ಹುಯಿಲ್ ದೊರೆ ಹಾಲು ಉತ್ಪಾದಕರ ಮಹಿಳಾ ಸಂಘದ ನೂತನ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಶಿರಾ
ರಾಸುಗಳನ್ನು ಮನೆ ಮಕ್ಕಳಂತೆ ಉತ್ತಮವಾಗಿ ಪೋಷಣೆ ಮಾಡಿ, ಪ್ರಾಮಾಣಿಕತೆಯಿಂದ ಹೈನುಗಾರಿಕೆ ಮಾಡಿದರೆ ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ. ಹಾಲು ಉತ್ಪಾದಕರ ಸಂಘಗಳನ್ನು ಮಹಿಳೆಯರು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದು, ಹೆಚ್ಚು ಆಸಕ್ತಿವಹಿಸಿ, ಹಾಲು ಉತ್ಪಾದಕ ಸದಸ್ಯರೊಂದಿಗೆ ಪ್ರೀತಿ ವಿಶ್ವಾಸದಿಂದ ಕೆಲಸ ನಿರ್ವಹಿಸಿದರೆ ಸಂಘ ಹೆಚ್ಚು ಲಾಭದಾಯಕ ಎನಿಸಲಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್ .ಆರ್.ಗೌಡ ಹೇಳಿದರು.ಶಿರಾ ತಾಲೂಕಿನ ಮಾದೇನಹಳ್ಳಿ ಗ್ರಾಮದಲ್ಲಿ ನಡೆದ ಹುಯಿಲ್ ದೊರೆ ಹಾಲು ಉತ್ಪಾದಕರ ಮಹಿಳಾ ಸಂಘದ ನೂತನ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿರಾ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘ ಸ್ಥಾಪನೆ ಮಾಡಿ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ ಕ್ಷೀರಕ್ರಾಂತಿ ಮಾಡಬೇಕೆಂಬ ನಮ್ಮ ಸಂಕಲ್ಪಕ್ಕೆ ರೈತರು ಸಹಕಾರ ನೀಡಬೇಕು ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಶಿರಾ ತಾಲೂಕಿನ ಮಾದೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಅಧ್ಯಕ್ಷೆ ಟಿ.ಆರ್. ಗೀತಾಂಜಲಿ, ಉಪಾಧ್ಯಕ್ಷೆ ಬಿ.ಶಶಿಕಲಾ, ವಿಸ್ತರಣಾಧಿಕಾರಿ ಚೈತ್ರ, ಮುಖಂಡ ಮುದ್ದು ಗಣೇಶ್, ಸಮಾಲೋಚಕ ಬಾಬಾ ಫಕ್ರುದ್ದೀನ್. ಪಿ.ಎಂ, ಪ್ರವೀಣ, ಸಂಘದ ನಿರ್ದೇಶಕರಾದ ಎಂ. ಆರ್. ಕವಿತಾ, ಗೌರಮ್ಮ, ಗಾಯತ್ರಿ ದೇವಿ, ಬಿ.ಎಸ್. ಕವಿತಾ, ಸೌಭಾಗ್ಯಮ್ಮ, ಸಿದ್ದಗಂಗಮ್ಮ, ಸುಮಾ, ಪುಟ್ಟತಾಯಮ್ಮ, ಕವಿತಾ, ಲತಾ, ಗೀತಮ್ಮ, ಕಾರ್ಯದರ್ಶಿ ಕೆ. ಕೋಮಲ ಸೇರಿ ಹಲವಾರು ಮುಖಂಡರು, ಹಾಲು ಉತ್ಪಾದಕರು ಹಾಜರಿದ್ದರು.