ಕುಮಾರಪಟ್ಟಣ: ಪ್ರಪಂಚದ ಎಲ್ಲಾ ವರ್ಗದ ಜನರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಹಣಕಾಸಿನ ನೆರವು ಅತ್ಯವಶ್ಯ. ನಿತ್ಯ ದುಡಿದ ದುಡಿಮೆಯಿಂದ ಸಂಪಾದಿಸಿದ ಹಣದಲ್ಲಿ ತಮ್ಮ ಮನಸಾಕ್ಷಿ ಒಪ್ಪುವ ಹಾಗೆ ನಿತ್ಯ ಉಳಿತಾಯ ಮಾಡಿದಲ್ಲಿ, ಸರ್ವರೂ ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವೆಂದು ಅವರಗೊಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಇಲ್ಲಿಗೆ ಸಮೀಪದ ಕೋಡಿಯಾಲ ಹೊಸಪೇಟೆ ಗ್ರಾಮದ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯ ಪಕ್ಕದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹತ್ತಿರದ ಆರ್‌ಜೆಡಿ ಕಾಂಪ್ಲೆಕ್ಸನಲ್ಲಿ ಬಸವ ಜಯಂತಿಯ ದಿದಂದು ಲೋಕಾರ್ಪಣೆಗೊಂಡಿರುವ ಬಸವಣ್ಣ ಸೌಹಾರ್ದ ಸಹಕಾರಿ ಸಂಘ ನಿಯಮಿತದಲ್ಲಿ ಕ್ಯಾಸ್ ಕೌಂಟರ್ ಉದ್ಘಾಟನೆಗೊಳಿಸಿದ ಶ್ರೀಗಳು, ಹಣ ಉಳಿತಾಯದ ಮಹತ್ವದ ಕುರಿತು ಸರ್ವರಲ್ಲಿ ಅರಿವು ಮೂಡಿಸಿ ಉಳಿತಾಯದ ಕುರಿತು ಜಾಗೃತಿ ಮೂಡಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾವೇರಿ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಎಸ್.ಎಸ್. ರಾಮಲಿಂಗಣ್ಣನವರ ಮಾತನಾಡಿ, ಸಹಕಾರಿ ಸಂಘಗಳು ರೈತರ, ವ್ಯಾಪಾರಿಗಳ, ಶ್ರಮಿಕರ, ಕೂಲಿ ಕಾರ್ಮಿಕರ ಆರ್ಥಿಕಾಭಿವೃದ್ಧಿಗಾಗಿ ತುಂಬಾ ಸಹಕಾರಿಯಾಗಿದ್ದು, ನಿತ್ಯ ವ್ಯವಹರಿಸುವುದರಿಂದ ಸಹಕಾರಿ ಸಂಘಗಳ ಉಳಿವು-ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯು ಇದ್ದ ಸಂದರ್ಭದಲ್ಲಿಯೇ ಗದಗಿನ ಕಣಗಿನಹಾಳ ಗ್ರಾಮದ ಸಿದ್ದನಗೌಡ ಸಣ್ಣ ಹನುಮನಗೌಡ ಪಾಟೀಲ ಎಂಬುವವರು, ದೇಶದ ಮೊದಲ ಸಹಕಾರಿ ಸಂಘವನ್ನು ಸ್ಥಾಪಿಸಿ ಅಗ್ರಗಣ್ಯರೆನ್ನಿಸಿಕೊಂಡಿದ್ದಾರೆ. ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಸಹಕಾರಿ ಸಂಘಗಳು ಆಥಿಕಾಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ ಶುಭ ಹಾರೈಸಿದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ಶಿವಲಿಂಗಪ್ಪ ಕೆ.ಎಸ್. ಅವರು ಬಸವಣ್ಣ ಸೌಹಾರ್ದ ಸಹಕಾರಿ ಸಂಘ ನಿಯಮಿತವನ್ನುಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ನಿರ್ದೇಶಕ ವಿಕ್ರಮ್ ಜಿ. ಕುಲ್ಕರ್ಣಿ, ಬ್ಯಾಡಗಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಲೋಕೇಶ ಜಿ.ಬಿ., ಹಾವೇರಿ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಭಾರ್ಕಿ, ಬ್ಯಾಡಗಿ ಓಜಿಸ್ ಸೌರ್ಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷರಾದ ಮೃತ್ಯುಂಜಯ ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು. ಬಸವಣ್ಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಇಟಗಿ ನಾಗರಾಜಪ್ಪಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ರಾಜು ಜೆ. ಹೆಗ್ಗಪ್ಪನವರ, ಕೊಟ್ರೇಶ ಕೆ.ಬಿ., ಮಂಜುನಾಥ ಎಲ್., ಫಕ್ಕೀರಪ್ಪ ಬಿ.ಎಂ., ವಾಗೀಶಗೌಡ ತೌಡೂರು, ಉಮಾದೇವಿ ಎನ್.ಎಸ್., ಶಾಹೀನಾಭಾನು ಖಲೀಲ್ ಹರಿಹರ, ಪುಟ್ಟಪ್ಪ ಮೇಷನ್, ಸಂಗಮೇಶ್ ಆರ್., ಸೊಪ್ಪಿನ್, ಕೊಟ್ರೇಶ್ ಬಿ.ಜಿ., ಪ್ರದೀಪ್ ಬಿ.ಎಸ್., ಕರಬಸಪ್ಪ ಎನ್. ಡೊಗ್ಗಳ್ಳಿ, ವಾಗೀಶ್ ಎಸ್. ಗುಳೇದ್ ಉಪಸ್ಥಿತರಿದ್ದರು.ದುಡಿಮೆ ಹಣದಲ್ಲಿ ಉಳಿತಾಯದಿಂದ ಆರ್ಥಿಕ ಪ್ರಗತಿ ಸಾಧ್ಯ-ಮಹಾಸ್ವಾಮೀಜಿ
ಬಸವಣ್ಣ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಕ್ಯಾಸ್ ಕೌಂಟರ್ ಅನ್ನು ಅವರಗೊಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.