ಹೈನುಗಾರಿಕೆ ಅಭಿವೃದ್ಧಿಯಿಂದ ಆರ್ಥಿಕ ಪ್ರಗತಿ ಸಾಧ್ಯ

| Published : Feb 12 2025, 12:30 AM IST

ಸಾರಾಂಶ

ದೇಶದಲ್ಲಿ ಹಾಲಿನ ಉತ್ಪಾದನೆ ಪ್ರಥಮ ಸ್ಥಾನದಲ್ಲಿದೆ. ಹಾಲಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ರೈತರು ತಮ್ಮ ಕೃಷಿ ಜೊತೆಗೆ ಹೈನುಗಾರಿಕೆ ಅಭಿವೃದ್ಧಿಪಡಿಸಿಕೊಂಡಲ್ಲಿ ಆರ್ಥಿಕವಾಗಿ ಮುಂದೆ ಬರಲು ಸಹಕಾರಿಯಾಗಲಿದೆ ಎಂದು ನಲ್ಲೂರು ಗ್ರಾಮದ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ರಘು ಹೇಳಿದ್ದಾರೆ.

- ಜಯಂತಿ ನಗರ ಗ್ರಾಮದ ತರಬೇತಿ ಕಾರ್ಯಾಗಾರದಲ್ಲಿ ವೈದ್ಯಾಧಿಕಾರಿ ರಘು - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ದೇಶದಲ್ಲಿ ಹಾಲಿನ ಉತ್ಪಾದನೆ ಪ್ರಥಮ ಸ್ಥಾನದಲ್ಲಿದೆ. ಹಾಲಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ರೈತರು ತಮ್ಮ ಕೃಷಿ ಜೊತೆಗೆ ಹೈನುಗಾರಿಕೆ ಅಭಿವೃದ್ಧಿಪಡಿಸಿಕೊಂಡಲ್ಲಿ ಆರ್ಥಿಕವಾಗಿ ಮುಂದೆ ಬರಲು ಸಹಕಾರಿಯಾಗಲಿದೆ ಎಂದು ನಲ್ಲೂರು ಗ್ರಾಮದ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ರಘು ಹೇಳಿದರು.

ತಾಲೂಕಿನ ಜಯಂತಿ ನಗರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೃಷಿ ಕ್ಷೇತ್ರದ ವಿಸ್ತರಣಾ ಕಾರ್ಯಕ್ರಮ ಅಂಗವಾಗಿ ಆಧುನಿಕವಾಗಿ ಹೈನುಗಾರಿಕೆ ಆರಂಭಿಸಲುವ ಕುರಿತು ನಡೆದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ಹೈನುಗಾರಿಕೆ ಕುರಿತು ಮಾತನಾಡಿದರು.

ರೈತರು ಹಸು, ಎಮ್ಮೆಗಳನ್ನು ತರುವಾಗ ಯಾವ ತಳಿ ತರಬೇಕು ಮತ್ತು ಯಾವ ಯಾವ ತಳಿ ಹಸು, ಎಮ್ಮೆಗಳಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿರುತ್ತದೆ ಎಂಬ ಬಗ್ಗೆ ಮಾಹಿತಿ ಇರಬೇಕು. ಸಾಮಾನ್ಯ ಹಸು ಸಾಕಾಣಿಕೆಯಿಂದ ಹಿಡಿದು ಹೈಟೆಕ್‌ನಲ್ಲಿ ಹೇಗೆ ಜಾನುವಾರು ಸಾಕಾಣಿಕೆ ಮಾಡಬಹುದು ಎಂಬ ಬಗ್ಗೆ ಮಾಹಿತಿ ಪಡೆದು ಮುಂದುವರಿಯಬೇಕು ಎಂದರು.

ಸಮಾರಂಭದ ಉದ್ಘಾಟನೆಯನ್ನು ಗ್ರಾಮದ ಪ್ರಗತಿಪರ ರೈತ ವಿಜಯ ನಾಯ್ಕ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಪ್ರಗತಿಬಂಧು ಸಂಘದ ಕಾರ್ಯದರ್ಶಿ ಚಂದ್ರಕಲಾ ರುದ್ರೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೃಷಿ ಅಧಿಕಾರಿ ಹನುಮಂತಪ್ಪ, ರೈತ ಮುಖಂಡ ಶ್ರೀಕಾಂತ್, ಸೇವಾ ಪ್ರತಿನಿಧಿಗಳಾದ ಕವಿತಾ, ಭಾಗ್ಯಮ್ಮ ಉಪಸ್ಥಿತರಿದ್ದರು.

- - - -11ಕೆಸಿಎನ್ಜಿ2.ಜೆಪಿಜಿ:

ಚನ್ನಗಿರಿ ತಾಲೂಕಿನ ಜಯಂತಿ ನಗರ ಗ್ರಾಮದಲ್ಲಿ ಆಧುನಿಕ ಹೈನುಗಾರಿಕೆ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.