ಸಾರಾಂಶ
‘ಎದೆ ಬದುವಿನ ಹಾಡು’ ಕವನ ಸಂಕಲನಕ್ಕೆ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ದತ್ತಿ ಪ್ರಶಸ್ತಿ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಮುಂಬೈನ ಜಗಜ್ಯೋತಿ ಕಲಾ ವೃಂದ ವತಿಯಿಂದ ನಡೆದ 37ನೇ ವಾರ್ಷಿಕ ಸಮಾರಂಭದಲ್ಲಿ ಕಳೆದ 24ನೇ ಅಖಿಲ ಭಾರತ ಮಟ್ಟದ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ 2023, ದತ್ತಿ ಪ್ರಶಸ್ತಿಗೆ ಸೋಮವಾರಪೇಟೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಕೆ ಭರತ್ ಅವರ ‘ಎದೆ ಬದುವಿನ ಹಾಡು’ ಕವನ ಸಂಕಲನದ ಹಸ್ತಪ್ರತಿ ಆಯ್ಕೆಯಾಗಿ ಪ್ರಶಸ್ತಿ ಸ್ವೀಕರಿಸಿದರು.ಪ್ರಧಾನ ಸಮಾರಂಭ ಈಚೆಗೆ ಮುಂಬೈನ ಲೇವಾ ಭವನದಲ್ಲಿ ನಡೆಯಿತು. ಪ್ರಶಸ್ತಿಯನ್ನು ಸಂಸ್ಥೆಯ ಛೇರ್‍ಮನ್ ದಿವಾಕರ್ ಟಿ. ಶೆಟ್ಟಿ ವಿತರಿಸಿ ಮಾತನಾಡಿ, ಕಳೆದ 24 ವರ್ಷಗಳಿಂದ ಕನ್ನಡ ಮಹಿಳಾ ಬರಹಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ದತ್ತಿ ನಿಧಿ ಸ್ಥಾಪಿಸಿ ಇಬ್ಬರು ಕನ್ನಡ ಬರಹಗಾರರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.ಈ ಸಂದರ್ಭ ಮುಂಬೈ ಬಂಟ್ಸ್ ಸಂಘದ ಅಧ್ಯಕ್ಷ ಆನಂದ್ ಡಿ. ಶೆಟ್ಟಿ, ಉಪಾಧ್ಯಕ್ಷ ಪ್ರಭಾಕರ್ ಆರ್. ಶೆಟ್ಟಿ, ಕನ್ನಡ ಸಂಘದ ಅಧ್ಯಕ್ಷ ಜಯಂತ್ ಎನ್. ಶೆಟ್ಟಿ, ಭಾರ್ ನಾಟ್ಯ ಸಂಸ್ಥೆಯ ಕಲಾವಿದೆ ಅಭಿನಯ ಪ್ರಕಾಶ್ ಹೆಗ್ಗಡೆ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಇದ್ದರು.