ಯಲಬುರ್ಗಾ: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳ್ಳಬೇಕಾದರೆ ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಿಸಬೇಕು ಎಂದು ಜಿಪಂ ಮಾಜಿ ಸದಸ್ಯ ಹಾಗೂ ಹಿರಿಯ ವಕೀಲ ಸಿ.ಎಚ್. ಪಾಟೀಲ್ ಸಲಹೆ ನೀಡಿದರು.

ತಾಲೂಕಿನ ಕರಮುಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಹಾಗೂ ಸರಸ್ವತಿ ಪೂಜಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ತಾಯಿ ಭಾಷೆಯ ಬಗ್ಗೆ ಅಭಿಮಾನ ಹೊಂದಬೇಕು. ಸಾಂಸ್ಕೃತಿಕ ಚಟುವಟಿಕೆ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ಸುಪ್ತ ಪ್ರತಿಭೆ ಹೊರಹಾಕಲು ಕಲೆಯು ಮಹತ್ತರ ಸ್ಥಾನ ಹೊಂದಿದೆ. ಮಕ್ಕಳ ಆಸಕ್ತಿಯನ್ನು ಗುರುತಿಸಿ ಶಿಕ್ಷಣ ಕೊಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆ ದಿಶೆಯಲ್ಲಿ ಕಾರ್ಯನ್ಮೋಖರಾಗುವುದರಿಂದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಡಾ. ಮಂಜುನಾಥ ಕುಕನೂರು, ಗಂಗಪ್ಪ ಹವಳಿ, ಫೈಜಾ ಅಮೀನ್ ಅತ್ತಾರ ಇನ್ನಿತರರು ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಇಮಾಮ್‌ಸಾಬ್ ಗುಳೇದಗುಡ್ಡ, ಜಿಪಂ ಮಾಜಿ ಸದಸ್ಯೆ ಶಕುಂತಲಾ ಪಾಟೀಲ, ಜಿಪಂ ಜಂಟಿ ನಿರ್ದೇಶಕ ಅಮೀನ್ ಅತ್ತಾರ್, ಕಳಕಪ್ಪ ಕುರಿ, ಶಿವಪುತ್ರಪ್ಪ ಮಲಿಗೋಡದ, ರಾಜಶೇಖರ ನಿಂಗೋಜಿ, ಗೌಡಪ್ಪ ಬಲಕುಂದಿ, ಲಿಂಗರಾಜ ಉಳ್ಳಾಗಡ್ದಿ, ಶರಣಪ್ಪ ಕುರಿ, ವೀರಣ್ಣ ವಾಲಿ, ಪರಸಪ್ಪ ಲಮಾಣಿ, ಕಳಕಮ್ಮ ನಿಂಗೋಜಿ, ವೀರಣ್ಣ ಅರಳಿ, ಅಮೀನ್ ಅತ್ತಾರ, ರಾಮಣ್ಣ ಮಾನಶೆಟ್ಟಿ, ಜಗದೀಶ ಅಂಗಡಿ, ಯಮನೂರಪ್ಪ ಹಾದಿಮನಿ ಇದ್ದರು.