ಹೆಣ್ಣು ಮಗು ಮನೆಯ ನಂದಾ ದೀಪ ಇದ್ದಂತೆ. ಹಾಗಾಗಿ ಪ್ರತಿಯೊಬ್ಬರು ಹೆಣ್ಣು ಮಗುವಿಗೆ ಶಿಕ್ಷಣ ಕಲಿಸಬೇಕು.

ಪೋಷಣ್ ಮಾಸಾಚರಣೆ ಹಾಗೂ ಹೆಣ್ಣು ಮಗಳನ್ನು ಉಳಿಸಿ ಹೆಣ್ಣು ಮಗಳನ್ನು ಓದಿಸಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ನರಗುಂದ

ಹೆಣ್ಣು ಮಗು ಮನೆಯ ನಂದಾ ದೀಪ ಇದ್ದಂತೆ. ಹಾಗಾಗಿ ಪ್ರತಿಯೊಬ್ಬರು ಹೆಣ್ಣು ಮಗುವಿಗೆ ಶಿಕ್ಷಣ ಕಲಿಸಬೇಕೆಂದು ತಾಲೂಕಾ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷ ಶಾರದಾ ಹಿರೇಮನಿ ಹೇಳಿದರು.

ತಾಲೂಕಿನ ಸಿದ್ದಾಪೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಪೋಷಣ್ ಮಾಸಾಚರಣೆ ಹಾಗೂ ಹೆಣ್ಣು ಮಗಳನ್ನು ಉಳಿಸಿ ಹೆಣ್ಣು ಮಗಳನ್ನು ಓದಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಿಶೋರಿಯರಿಗೆ ಸಾಕಷ್ಟು ಪೂರಕ ಪೌಷ್ಠಿಕ ಆಹಾರ, ಆರೋಗ್ಯ, ಶಿಕ್ಷಣದ ಅವಶ್ಯಕತೆ ಸಾಕಷ್ಟಿದೆ. ಹೆಣ್ಣು ಗಂಡು ಎಂದು ಬೇದಭಾವವಿಲ್ಲದೆ ಸಮಾನತೆಯಿಂದ ಸಮಾಜದ ಒಳಿತಾಗಾಗಿ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಹೇಳಿದರು. ಪೋಷಣ್ ಅಭಿಯಾನ ಕಾರ್ಯಕ್ರಮ ಸಂಯೋಜಕ ಮಂಜುನಾಥ ಗುಗ್ಗರಿ ಮಾತನಾಡಿ ಗ್ರಾಮೀಣ ಭಾಗದ ಜನರು ಪೌಷ್ಠಿಕ ಕೈ ತೋಟಗಳಿಗೆ ಒತ್ತು ನೀಡಿ ಸಾವಯುವ ಪೋಷಕಾಂಶಯುಕ್ತ ಆಹಾರ ಬೆಳಯಲು ಮುತುವರ್ಜಿವಹಿಸಬೇಕು, ಗ್ರಾಮದ ಸರ್ವತೋಮುಖ ಬೆಳವಣಿಗೆಗೆ ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ಪಾತ್ರ ಬಹುಮುಖ್ಯವಾಗಿದೆ ಎಂದರು.

ಇದೇ ಸಂದರ್ಭ ಪೌಷ್ಟಿಕ ಕೈತೋಟದ ಮಹತ್ವ ಹಾಗೂ ಸೀಮಂತ ಕಾರ್ಯಕ್ರಮ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯೆ ಪೂಜಾ ವಾಲ್ಮೀಕಿ, ಆಶಾ ಕಾರ್ಯಕರ್ತೆ ರೇಣುಕಾ ಕಡ್ಲಿಕೊಪ್ಪ, ಸುಜಾತಾ ರಾಮನಗೌಡ್ರ, ಬಸವ್ವ ದೊಡ್ಡಗೌಡ್ರ, ಸುಸಮ್ಮ ರಾಯನಗೌಡ್ರ, ಪ್ರೇಮವ್ವ ಕಡ್ಲಿಕೊಪ್ಪ, ದಿವ್ಯಾ ಮುದಕವಿಮಠ, ಸಹಾಯಕಿಯರಾದ ಬಸಮ್ಮ ತಳವಾರ, ಪವಿತ್ರಾ ಕಡ್ಲಿಕೊಪ್ಪ, ಸುಮಿತಾ ತಳವಾರ, ತಾಯಂದಿರು, ಮಕ್ಕಳು ಉಪಸ್ಥಿತರಿದ್ದರು.