ಸಾರಾಂಶ
ಸ್ವ ಉದ್ಯೋಗದ ಜಾಗೃತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಅರಸೀಕೆರೆನಿರುದ್ಯೋಗ ಎನ್ನುವುದು ಸಮಸ್ಯೆಯಲ್ಲ, ಉದ್ಯೋಗ ಮಾಡುವವರಿಗೆ ನೂರೆಂಟು ಮಾರ್ಗಗಳಿವೆ. ಇಂದು ಶಿಕ್ಷಣ ಪಡೆದ ಮಾತ್ರಕ್ಕೆ ಎಲ್ಲರಿಗೂ ಸರ್ಕಾರಿ ಕೆಲಸ ದೊರೆಯುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಸ್ವಪ್ರತಿಭೆಯಿಂದ ಸ್ವಯಂ ಉದ್ಯೋಗ ಪ್ರಾರಂಭಿಸಿ ಇತರರಿಗೂ ಉದ್ಯೋಗ ನೀಡುವಂತಾಗಬೇಕು ಎಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹಾಸನದ ಗ್ರಾಮೀಣ ಯುವಕರ ಕೌಶಲ್ಯಾಭಿವೃದ್ಧಿ ಸಂಸ್ಥೆಯ ಪವನ್ ತಿಳಿಸಿದರು
ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಸ್ವ- ಉದ್ಯೋಗವನ್ನು ಕುರಿತು ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿ, ನಿರುದ್ಯೋಗ ಎನ್ನುವುದು ಸಮಸ್ಯೆಯಲ್ಲ, ಉದ್ಯೋಗ ಮಾಡುವವರಿಗೆ ನೂರೆಂಟು ಮಾರ್ಗಗಳಿವೆ. ಇಂದು ಶಿಕ್ಷಣ ಪಡೆದ ಮಾತ್ರಕ್ಕೆ ಎಲ್ಲರಿಗೂ ಸರ್ಕಾರಿ ಕೆಲಸ ದೊರೆಯುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಸ್ವಪ್ರತಿಭೆಯಿಂದ ಸ್ವಯಂ ಉದ್ಯೋಗ ಪ್ರಾರಂಭಿಸಿ ಇತರರಿಗೂ ಉದ್ಯೋಗ ನೀಡುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಗ್ರಾಮೀಣ ಯುವಕರ ಕೌಶಲ್ಯಾಭಿವೃದ್ಧಿ ಸಂಸ್ಥೆಯ ವತಿಯಿಂದ ಉಚಿತವಾಗಿ ನೀಡಲಾಗುತ್ತಿರುವ ವಿವಿಧ ಬಗೆಯ ತರಬೇತಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಆಸಕ್ತ ವಿದ್ಯಾರ್ಥಿಗಳು ಯಾವಾಗ ಬೇಕಿದ್ದರೂ ತರಬೇತಿ ಪಡೆಯ ಬಯಸಿದರೆ ತರಬೇತಿ ನೀಡುವುದಾಗಿ ತಿಳಿಸಿ ವಿದ್ಯಾರ್ಥಿಗಳಿಗೆ ಬದುಕಿನ ಬಗ್ಗೆ ಭರವಸೆ ಮೂಡುವಂತೆ ಪ್ರೇರಣೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಣಕಾಸು ಸಾಕ್ಷರತಾ ಸಂಯೋಜಕಿ ಕುಸುಮ ಸರ್ಕಾರ ಮತ್ತು ಬ್ಯಾಂಕುಗಳ ವತಿಯಿಂದ ಸ್ವ-ಉದ್ಯೋಗ ಮಾಡ ಬಯಸುವವರಿಗೆ ದೊರೆಯಬಹುದಾದ ಸಾಲ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿದರು. ಅಲ್ಲದೆ ಹೆಣ್ಣು ಮಕ್ಕಳು ಸ್ವ -ಉದ್ಯೋಗ ಮಾಡ ಬಯಸಿದರೆ ಪ್ರೋತ್ಸಾಹಿಸಲು ಹಲವು ಯೋಜನೆಗಳಿವೆ. ಅದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.ಸಮಾಜಶಾಸ್ತ್ರದ ಮುಖ್ಯಸ್ಥೆ ಪ್ರೊ. ಚಿತ್ರಕಲಾ ಪ್ರಾಸ್ತಾವಿಕವಾಗಿ ಮಾತನಾಡಿ, ಪದವಿಯ ನಂತರ ಸರ್ಕಾರಿ ಉದ್ಯೋಗ ದೊರೆಯದಿದ್ದರೆ ವಿದ್ಯಾರ್ಥಿಗಳು ನಿರಾಶರಾಗದೆ ಸ್ವ-ಉದ್ಯೋಗ ನಡೆಸಿ ಸಮೃದ್ಧವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಆ ನಿಟ್ಟಿನಲ್ಲಿ ಗ್ರಾಮೀಣ ಯುವಕರ ಕೌಶಲ್ಯ ಅಭಿವೃದ್ಧಿ ಸಂಸ್ಥೆ ಹಲವು ಯೋಜನೆಗಳ ಮೂಲಕ ಬಡ ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗ ಮಾಡಲು ವಿವಿಧ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಎಸ್.ನಾರಾಯಣ ವಿದ್ಯಾರ್ಥಿಗಳಿಗೆ ಸ್ವ-ಉದ್ಯೋಗ ಮಾಡಿ ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಕರೆ ನೀಡಿದರು.ಈ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಸುನಿಲ್, ಡಾ. ಹರೀಶ್ ಕುಮಾರ್, ಡಾ. ರಾಜೇಶ್ ಖನ್ನಾ, ಡಾ. ಭಾಸ್ಕರ, ಪ್ರೊ.ಉಷಾ, ಗಂಗಾ, ರತ್ನಮ್ಮ ಸೇರಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಸ್ವ -ಉದ್ಯೋಗ ಮಾಡುವುದರ ಬಗ್ಗೆ ಸರ್ವ ಮಾಹಿತಿಯನ್ನು ಪಡೆದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅರಸೀಕೆರೆಯ ಸಮಾಜಶಾಸ್ತ್ರ ವಿಭಾಗದಿಂದ ಸ್ವ- ಉದ್ಯೋಗವನ್ನು ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಹಾಸನದ ಗ್ರಾಮೀಣ ಯುವಕರ ಕೌಶಲ್ಯಾಭಿವೃದ್ಧಿ ಸಂಸ್ಥೆಯ ಪವನ್ ಮಾತನಾಡಿದರು.