ಸಾರಾಂಶ
ಇಳಕಲ್ಲ: ನಗರದ ವಿಜಯ ಮಹಾಂತೇಶ್ವರ ಶಿಕ್ಷಣ ಸಂಸ್ಥೆಯ ಶಾಲೆಗಳ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ವಿಜಯ ಮಹಾಂತೇಶ್ವರ ಆರ್ಯುವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ನಂದರಾಜ ಬಾವುರ ಮಾತನಾಡಿ, ವಿದ್ಯಾರ್ಥಿಗಳಿಗೆ ನಯವಿನಯ ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನದ ಜೊತೆಗೆ ಸಂಸ್ಕಾರ, ಸಂಸ್ಕೃತಿ ಕಲಿಯಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳನ್ನು ಗೌರವಿಸಿ ಸತ್ಕರಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಇಳಕಲ್ಲ: ವಿದ್ಯಾರ್ಥಿಗಳಿಗೆ ನಯವಿನಯ ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನದ ಜೊತೆಗೆ ಸಂಸ್ಕಾರ, ಸಂಸ್ಕೃತಿ ಕಲಿಯಬೇಕು ಎಂದು ನಗರದ ವಿಜಯ ಮಹಾಂತೇಶ್ವರ ಆರ್ಯುವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ನಂದರಾಜ ಬಾವುರ ತಿಳಿಸಿದರು.
ಇಳಕಲ್ಲಿನ ವಿಜಯ ಮಹಾಂತೇಶ್ವರ ಶಿಕ್ಷಣ ಸಂಸ್ಥೆಯ ಶಾಲೆಗಳ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ತಾವು ಕಲಿತ ಶಾಲೆಯಲ್ಲಿ ಮುಖ್ಯ ಅತಿಥಿಯಾಗಿ ಸನ್ಮಾನ ಪಡೆಯುತ್ತಿರುವುದು ನಿಜಕ್ಕೂ ಸಂತಸದ ವಿಷಯ ಎಂದು ತಿಳಿಸಿದರು. ಜಿ.ಕೆ. ಮಲಗೊಂಡ ಪಿಯು ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಅನೀಲ ಗೌಡರ ಮಾತನಾಡಿ, ನಾನು ಸಹ ಇದೇ ಶಾಲೆಯಲ್ಲಿ ಓದಿದ್ದು, ವಿದ್ಯಾರ್ಥಿ ಜೀವನ, ಕಲಿಸಿದ ಶಿಕ್ಷಕರ ಬಗ್ಗೆ ಮೆಲುಕು ಹಾಕಿ, ವಿದ್ಯಾರ್ಥಿ ಜೀವನ ಸುಂದರ ಸಮಯ. ಅದರ ಸದುಪಯೋಗ ಮಾಡಿಕೊಳ್ಳಬೇಕು. ಓದುವುದು ನಮ್ಮ ದಿನನಿತ್ಯದ ಹವ್ಯಾಸವಾಗಬೇಕು. ನಯ, ವಿನಯ ಹಾಗೂ ಸತತ ಓದು ನಿಮ್ಮಗುರಿಯ ಕಡೆಗೆ ಕರೆದುಕೊಂಡು ಹೋಗುವುದು ಎಂದು ಹೇಳಿದರು.ಮುಖ್ಯ ಅತಿಥಿಗಳನ್ನು ಗೌರವಿಸಿ ಸತ್ಕರಿಸಲಾಯಿತು.ಪ್ರೌಢ ವಿಭಾಗದ ಚೇರ್ಮನ್ ಶರಣಪ್ಪ ಅಕ್ಕಿ ಮಾತನಾಡಿದರು. ಸಂಸ್ಥೆಯ ಕಾರ್ಯಾಧ್ಯಕ್ಷ ಗುರಣ್ಣ ಮರಟದ, ಕಾರ್ಯದರ್ಶಿ ಎಸ್. ಆರ್, ಕಂಪ್ಲಿ ಹಾಗೂ ಸಂಸ್ಥೆಯ ಎಲ್ಲ ಸದಸ್ಯರು ಮತ್ತು ಎಲ್ಲಾ ವಿಭಾಗದ ಮುಖ್ಯಶಿಕ್ಷಕರು ಉಪಸ್ಥಿತರಿದ್ದರು.
ತನುಶ್ರೀ ಕಠಾರೆ ಹಾಗೂ ಶಿವಾನಿ ಕಠಾರೆ ವಚನ ಪ್ರಾರ್ಥಿಸಿದರು. ಕೃತಿಕಾ ದಾನಿ ಹಾಗೂ ಸಂಗಡಿಗರು ವಚನ ನೃತ್ಯ ಮಾಡಿದರು. ಶ್ರೇಯಾ ಸಿಂಗ್ ಹಾಗೂ ವಿರುಪಾಕ್ಷಿ ಸಿಂಗಶೆಟ್ಟಿ ಸ್ವಾಗತಿಸಿದರು. ಶ್ವೇತಾ ಕಾಂಬ್ಳೆ ಹಾಗೂ ದಿಯಾ ಚವ್ಹಾಣ ಪರಿಚಯಿಸಿದರು. ಸಪ್ತಮಿ ಕುಂಬಾರ, ರಾಧಿಕಾ ಕೊಂಗತಿ, ಸಂಗಮೇಶ ಹವಾಲ್ದಾರ ಮತ್ತು ನೇತ್ರಾ ಗೌಡರ ಬಹುಮಾನ ವಿತರಣೆ ನಡೆಸಿಕೊಟ್ಟರು. ಶ್ರೇಯಾ ಅಲೆಗಾವಿ ವಂದಿಸಿದಳು. ನಿವೇದಿತಾ ಬೆಳಗಲ್ ಹಾಗೂ ಭಾಗ್ಯ ಎತ್ತಿನಮನಿ ನಿರೂಪಿಸಿದರು.