ಕನ್ನಡಪ್ರಭ ವಾರ್ತೆ ಮಧುಗಿರಿ
ಶಿಕ್ಷಣ ಎಲ್ಲ ಸಂಪತ್ತನ್ನು ತಂದು ಕೊಡುತ್ತದೆ. ಪರಿಶ್ರಮ ಸೋಲಲ್ಲ, ಕಷ್ಟಗಳು ಎಂದಿಗೂ ಶಾಶ್ವತವಲ್ಲ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ವೀರೇಶಾನಂದ ಸರಸ್ವತಿ ಮಹಾರಾಜರು ತಿಳಿಸಿದರು.ತಾಲೂಕಿನ ಕಸಬಾ ಹರಿಹರರೊಪ್ಪದ ಬಳಿಯಿರುವ ಕಾರ್ಡಿಯಲ್ ಇಂಟರ್ ನ್ಯಾಷನಲ್ ಶಾಲೆ ಮತ್ತು ಕಾರ್ಡಿಯಲ್ ಫ್ರಿ ಯೂನಿವರ್ಸಿಟಿ ಕಾಲೇಜಿನ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಉನ್ನತ ಸ್ಥಾನದಲ್ಲಿದ್ದ ಸುಧೀರ್ ಪೈ ರವರು ಗ್ರಾಮೀಣ ಭಾಗದ ಮಕ್ಕಳಿಗೆ ಉಜ್ವಲ ಶಿಕ್ಷಣ ನೀಡಲು ಇಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿರುವುದು ಈ ಭಾಗಕ್ಕೆ ವರದಾನವಾಗಿದೆ. ಶಿಕ್ಷಣ ಎಂಬುದು ಪ್ರಬಲ ಅಸ್ತ್ರವಾಗಿದ್ದು ಬದುಕುವ ಶಕ್ತಿ ನೀಡುತ್ತದೆ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸಲು ಸುಧೀರ್ ಪೈ ಮುಂದಾಗಬೇಕು ಎಂದರು. ಸಂಸ್ಥೆಯ ಅಧ್ಯಕ್ಷ ಸುಧೀರ್ ಪೈ ಕೆ.ಎಲ್ ಮಾತನಾಡಿ, ಮಧುಗಿರಿಯನ್ನು ಶಿಕ್ಷಣ ಕಾಶಿ ಮಾಡಲು ಪೂಜ್ಯರ ಆಶೀರ್ವಾದದಿಂದ ಸಂಕಲ್ಪ ಮಾಡಿದ್ದು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸಿ 2 ವರ್ಷದಲ್ಲಿ ಸಾಧನೆಯ ಪಟ್ಟಿ ಮುಂದಿಡುತ್ತೇವೆ ಮಧುಗಿರಿಯಲ್ಲಿ ಮೌಲ್ಯಯುತ ಶಿಕ್ಷಣ ನೀಡುತ್ತೇವೆ ಎಂದರು.ಅಕಾಡಮಿಕ್ ನಿರ್ದೇಶಕಿ ರಾಧಾ ಸಂಪತ್ ಮಾತನಾಡಿ 5 ಅಂಶಗಳನ್ನು ಪಾಲಿಸಿದರೆ ಮಕ್ಕಳು ಸಾಧನೆಯ ದಾರಿ ಕಾಣುತ್ತಾರೆ. ಹೆತ್ತವರು ಹೆಚ್ಚಾಗಿ ಮಕ್ಕಳೊಂದಿಗೆ ಬೆರೆಯುವುದು, ತಾತ-ಅಜ್ಜಿಯರ ಸಹವಾಸ ಮಾಡಿಸುವುದು, ಮೊಬೈಲ್ ಗೆ ನಿಷೇಧ ಹೇರುವುದು, ಹಾಗೂ ಸಂಸ್ಕಾರದ ಜೊತೆಗೆ ಬಿಡುವಿನಲ್ಲಿ ಪುಸ್ತಕ ಓದುವುದನ್ನು ರೂಡಿಸಬೇಕು ಎಂದರು.ಸಂಸ್ಥೆಯ ಪ್ರಾಂಶುಪಾಲ ಕಿರಣ್ ಸಿದ್ಧ ಮಾತನಾಡಿ ಶ್ರೀರಾಮನ ಪಾದಸ್ಪರ್ಶಕ್ಕೆ ಅಹಲ್ಯೆ ಪಾವನವಾದಂತೆ, ಮಧುಗಿರಿಯ ಗ್ರಾಮೀಣ ಮಕ್ಕಳು ಸುಧೀರ್ ಪೈ ರವರ ಈ ಸಂಸ್ಥೆ ಸ್ಥಾಪನೆಯಿಂದ ಉತ್ತಮ ಬದುಕನ್ನು ಕಟ್ಟಿಕೊಳ್ಳಲಿದ್ದಾರೆ. ಮುಂದಿನ 2 ವರ್ಷದಲ್ಲಿ ಸಂಸ್ಥೆಯ ಸಾಧನೆಯನ್ನು ರಾಜ್ಯಕ್ಕೆ ಪರಿಚಯಿಸಲಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಗಿನಿಮೈಂಡ್ಸ್ ಕಂಪನಿಯ ಸಿಇo ಶೆನ್‌ಐ ಕಟಪಾಡಿ ರಂಗನಾಥ್, ಸಿಟಿಒ ವೆಂಕಟೇಶ್ ಸಾಗರೆ ನಾಗರಾಜ್, ಸಂಸ್ಥೆಯ ಕಾರ್ಯದರ್ಶಿ ಡಾ. ರಮೇಶ್ ಪ್ರಭು, ನಿರ್ದೇಶಕರಾದ ರಮೇಶ್, ಎಂ.ಕೆ.ನಂಜುಂಡಯ್ಯ, ಪ್ರೀತಿ ಎಸ್. ಪ್‌ಐ. ರಾಮಕೃಷ್ಣ, ಪ್ರಾಂಶುಪಾಲ ರವಿಕುಮಾರ್, ಸಂಸ್ಥೆಯ ಸಿಬ್ಬಂದಿಗಳು, ಪೋಷಕರು ಜೊತೆಗಿದ್ದರು.