ಸಾರಾಂಶ
ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಅಜ್ಞಾನದಿಂದಾಗಿ ಪಾಲಕರು ಮಕ್ಕಳಿಗೆ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸುವ, ಶಿಕ್ಷಣವನ್ನೇ ಕೊಡದಿರುವ ಮೌಢ್ಯತೆಯಿಂದ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದು ಎಸ್ಡಿಎಂಸಿ ಅಧ್ಯಕ್ಷ ಕಲೀಲ್ ಕೊತ್ತಲ ಹೇಳಿದರು.
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಅಜ್ಞಾನದಿಂದಾಗಿ ಪಾಲಕರು ಮಕ್ಕಳಿಗೆ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸುವ, ಶಿಕ್ಷಣವನ್ನೇ ಕೊಡದಿರುವ ಮೌಢ್ಯತೆಯಿಂದ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಶಿಕ್ಷಣದಿಂದ ಮಾತ್ರ ವ್ಯಕ್ತಿ ಸಮಾಜದಲ್ಲಿ ಉತ್ತಮ ನಾಗರಿಕನಾಗಲು ಸಾಧ್ಯವೆಂದು ಎಸ್ಡಿಎಂಸಿ ಅಧ್ಯಕ್ಷ ಕಲೀಲ್ ಕೊತ್ತಲ ಹೇಳಿದರು.ಗುರುವಾರ ಪಟ್ಟಣದ ಸರ್ಕಾರಿ ಉರ್ದು ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ನಂ.2ರ ವಾರ್ಷಿಕ ಸ್ನೇಹಸಮ್ಮೇಳನ ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದವರು ಇಂದು ಉನ್ನತವಾದ ಸ್ಥಾನದಲ್ಲಿ ಇದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತಾಗ ಮಾತ್ರ ಸಮಾಜದ ಅಭಿವೃದ್ಧಿ ಹೊಂದುತ್ತದೆ. ಗ್ರಾಮೀಣ ಭಾಗದಲ್ಲಿನ ಬಡತನದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪ್ರತಿಯೊಬ್ಬ ಪಾಲಕರೂ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಬೇಕು. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಯಬೇಕಿದೆ. ಶಿಕ್ಷಕರು, ತಂದೆ, ತಾಯಿ ಹಾಗೂ ಹಿರಿಯರ ಮೇಲೆ ಪೂಜ್ಯ ಭಾವನೆ ಮೂಡುವಂತೆ ಹಾಗೂ ಅವರನ್ನು ಗೌರವಿಸುವಂತಾಗಬೇಕಿದೆ. ಅಂದಾಗ ಮಾತ್ರ ವಿದ್ಯಾರ್ಥಿ ದೇಶದ ಉತ್ತಮ ಪ್ರಜೆಯನ್ನಾಗಿ ರೂಪಿಸಲು ಸಾಧ್ಯವಾಗುತ್ತದೆ ಎಂದರು.
ವಕೀಲ ಕೆ.ಆರ್. ರಾಯಚೂರ, ಮುಖ್ಯ ಶಿಕ್ಷಕ ಸೈಯದ್ ಮಕಾಂದಾರ, ಸುರೇಶ ಭಟ್ಟರ, ಹರಿಜನ ಕಲೆಗಾರ, ನಾಸೀರ್ ಕೊತ್ತಲ, ಎಂ.ಎಂ. ಮಕಾಂದಾರ, ಮಹಿಬೂಬ ಹಣಗಿ, ರಾಜಮಹಮದ್ ಕುದರಿ, ರಫೀಕ್ ಸೂಳೀಬಾವಿ, ರಫೀಕ್ ಯಾಳಗಿ, ಕಾಶೀಮ್ ಜಮಾದಾರ, ಸೇರಿದಂತೆ ಸಮಾಜದ ಹಿರಿಯರು, ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.