ಸಾರಾಂಶ
ಶಿಕ್ಷಣ ಉತ್ತಮ ಭವಿಷ್ಯ ರೂಪಿಸುತ್ತದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ರಾಣಿಬೆನ್ನೂರು: ಶಿಕ್ಷಣ ಉತ್ತಮ ಭವಿಷ್ಯ ರೂಪಿಸುತ್ತದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ನಗರದ ಹಲಗೇರಿ ರಸ್ತೆ ಬಿಎಜೆಎಸ್ಸೆಸ್ ಕಾಲೇಜಿನ ಕಟ್ಟಡದಲ್ಲಿ ನೂತನವಾಗಿ ಮಂಜೂರಾತಿಯಾದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಬಹಳ ವರ್ಷಗಳಿಂದ ಬಹು ಬೇಡಿಕೆಯಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯವು ಮಂಜೂರಾತಿಯಾಗಿ ಇಂದು ಲೋಕಾರ್ಪಣೆಗೊಂಡಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಈಗಾಗಲೇ ಈ ವಸತಿ ನಿಲಯ ಸೇರಿ ಒಟ್ಟು 15 ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. 1312 ವಿದ್ಯಾರ್ಥಿಗಳು ವಸತಿನಿಲಯದಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳ ಬೇಡಿಕೆಯಾಗಿರುವ ನಗರದಲ್ಲಿ ಇನ್ನೊಂದು ಅಲ್ಪಸಂಖ್ಯಾತರ ಇಲಾಖೆಯ ವಸತಿ ಶಾಲೆ ಮಂಜೂರಾತಿಗಾಗಿ ಪ್ರಯತ್ನ ಮಾಡಲಾಗುವುದು. ಇಂದು ಉದ್ಘಾಟನೆಗೊಂಡಿರುವ ವಸತಿನಿಲಯಕ್ಕೆ ಜಾಗ ನಿಗದಿಪಡಿಸಲಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು. ಕಾಲೇಜಿನ ಆಡಳಿತ ಅಧಿಕಾರಿ ಡಾ. ಆರ್.ಎಂ. ಕುಬೇರಪ್ಪ, ಪ್ರಾ. ಪ್ರಕಾಶ ಬಸಪ್ಪನವರ, ಪ್ರೊ. ರಾಜೀವ್ ಕುಬೇರಪ್ಪ, ನಗರಸಭಾ ಸದಸ್ಯ ಸಿದ್ದಪ್ಪ ಬಾಗಿಲವರ, ಬಿಸಿಎಂ ಇಲಾಖೆ ಕಲ್ಯಾಣಾಧಿಕಾರಿ ವಿ.ಎಸ್. ಹಿರೇಮಠ, ವಿಸ್ತರಣಾಧಿಕಾರಿ ಪ್ರಸಾದ ಆಲದಕಟ್ಟಿ, ಮೇಲ್ವಿಚಾರಕರಾದ ಶಾಂತಪ್ಪ ಸಾವಕಾರ, ಎಚ್.ಎಚ್. ಓಲೇಕಾರ್, ಎಸ್.ಕೆ. ಹಾವನೂರ, ವೈ.ಎ. ಕೊರವರ, ಮಂಜುನಾಥ ಎಂ.ಕೆ., ಗಣೇಶ ಕಾಯಕದ, ಯಶೋಧಮ್ಮ ಅಂತರವಳ್ಳಿ, ಮಹೇಶ ಲಮಾಣಿ, ನೀಲಪ್ಪ ಹೊನ್ನತ್ತಿ, ಜಯಪ್ಪ ಮಾವಿನತೋಪ, ನಿಂಗಪ್ಪ ಲಮಾಣಿ, ಚಂದ್ರಪ್ಪ ಪಾರಮ್ಮನವರ ಮತ್ತಿತರರು ಇದ್ದರು.