ಜಗತ್ತಿನಲ್ಲಿ ವಿದ್ಯೆ ಬೆಲೆ ಕಟ್ಟಲಾಗದ ವಸ್ತು

| Published : Mar 23 2024, 01:13 AM IST

ಸಾರಾಂಶ

ಅಂದು ವಿದ್ಯಾರ್ಥಿಗಳಿಗೆ ಶಿಕ್ಷಕರು ಜ್ಞಾನದ ಜತೆಗೆ ಸಂಸ್ಕಾರ ಮತ್ತು ಶಿಸ್ತು ಕಲಿಸುತ್ತಿದ್ದರು. ಇಂದಿನ ವಿದ್ಯಾರ್ಥಿಗಳಿಗೆ ಸ್ವಲ್ಪ ಭಕ್ತಿ ಕಡಿಮೆ ಆಗಿದೆ ಹೊಸ ಶಿಕ್ಷಕರಿಗೆ ಗೌರವ ಕೊಡುತ್ತಿಲ್ಲ. ಈ ಶಾಲೆಯ ಮಕ್ಕಳು ದೇಶದ ಉತ್ತಮ ಪ್ರಜೆಗಳು ಆಗಲಿ

ಲಕ್ಷ್ಮೇಶ್ವರ: ಜಗತ್ತಿನಲ್ಲಿ ವಿದ್ಯೆ ಬೆಲೆ ಕಟ್ಟಲಾಗದ ವಸ್ತು, ಜ್ಞಾನಕ್ಕಿಂತ ಮಿಗಿಲಾಗಿದ್ದು ಯಾವುದು ಇಲ್ಲ ಎಂದು ಶಿರಹಟ್ಟಿ ಫಕ್ಕಿರೇಶ್ವರ ಮಠದ ಜಗದ್ಗುರು ಫಕ್ಕೀರ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಶನಿವಾರ ಪಟ್ಟಣದ ಸ್ಫೂರ್ತಿ ಶಿಕ್ಷಣ ಸಂಸ್ಥೆ ವಿವಿದೋದ್ದೇಶಗಳ ಅಭಿವೃದ್ಧಿ ಸಂಸ್ಥೆಯ ದಿ ಪಿನಿಕ್ಸ್ ಇಂಟರನ್ಯಾಷನಲ್ ಸ್ಕೂಲ್‌ನಲ್ಲಿ ನಡೆದ ಗಣ ಹೋಮ ಮತ್ತು ವಿದ್ಯಾಯಜ್ಞ ಹಾಗೂ ನೂತನ ಆಡಳಿತ ಮಂಡಳಿಯ ಅಧಿಕಾರ ಪದಗ್ರಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿ ಮಾತನಾಡಿದರು.

ಜ್ಞಾನವಿದ್ದವರು ಎಲ್ಲರಿಗಿಂತ ಶ್ರೀಮಂತರು. ಅವರಗಿಂತ ಶ್ರೀಮಂತ ಯಾರು ಇಲ್ಲ, ಸಂಸ್ಥೆ ಕಟ್ಟುವುದು ಬಹಳ ಕಷ್ಟ. ತಾಯಿ ಮಗುವನ್ನು ಬೆಳೆಸಲು ಎಷ್ಟ ಕಷ್ಟ ಪಡುತ್ತಾಳೆ ಹಾಗೇ ಶಾಲೆ ಕಟ್ಟೋದು ಬಹಳ ಕಷ್ಟ,ಇಲ್ಲಿ ತಯಾರಿ ಆಗುವ ಮಕ್ಕಳ ದೊಡ್ಡ ವ್ಯಕ್ತಿಗಳಾಗಬೇಕು. ಅಂದು ವಿದ್ಯಾರ್ಥಿಗಳಿಗೆ ಶಿಕ್ಷಕರು ಜ್ಞಾನದ ಜತೆಗೆ ಸಂಸ್ಕಾರ ಮತ್ತು ಶಿಸ್ತು ಕಲಿಸುತ್ತಿದ್ದರು. ಇಂದಿನ ವಿದ್ಯಾರ್ಥಿಗಳಿಗೆ ಸ್ವಲ್ಪ ಭಕ್ತಿ ಕಡಿಮೆ ಆಗಿದೆ ಹೊಸ ಶಿಕ್ಷಕರಿಗೆ ಗೌರವ ಕೊಡುತ್ತಿಲ್ಲ. ಈ ಶಾಲೆಯ ಮಕ್ಕಳು ದೇಶದ ಉತ್ತಮ ಪ್ರಜೆಗಳು ಆಗಲಿ. ಈ ಸಂಸ್ಥೆಯಲ್ಲಿ ಒಳ್ಳೆಯ ಶಿಕ್ಷಣ ದೊರೆಯಲಿ ಪಟ್ಟಣದಲ್ಲಿ ಒಳ್ಳೆಯ ಶಿಕ್ಷಣ ಪ್ರೇಮಿಗಳು ಇದ್ದು, ಅದೇ ರೀತಿ ಶಾಲೆಯ ನೂತನ ಪದಾಧಿಕಾರಿಗಳು ಶಾಲೆಯ ಅಭಿವೃದ್ಧಿಗೆ ಶ್ರಮ ಪಡಬೇಕು ಶಾಲೆಯನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.

ನೊಣವಿನಕೆರೆಯ ಕಾಡಶಿದ್ದೇಶ್ವರ ಸಂಸ್ಥಾನಮಠದ ಡಾ. ಕರಿವೃಷಭ ದೇಶಿಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಈ ವೇಳೆ ಕೆ.ಎ.ಬಳಿಗೇರ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮ ನಡೆಸಿಕೊಟ್ಟರು.

ಸಮಾರಂಭದಲ್ಲಿ ರಾಜಶೇಖರಯ್ಯ ಹಾಲೇವಾಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಮಲಿಕಾರ್ಜುನ ಕೊಟಗಿ, ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ರಾಜೇಂದ್ರ ಗಡಾದ, ಎಸ್.ಬಿ.ಕೊಣ್ಣೂರ, ಶಾಲೆಯ ಕಾರ್ಯದರ್ಶಿ ಶಿವಣ್ಣ ಗಾಂಜಿ, ಉಪಾಧ್ಯಕ್ಷ ರಾಜಶೇಖರಯ್ಯ ಹಾಲೇವಡಿಮಠ, ವಿಜಯಕುಮಾರ ಹತ್ತಿಕಾಳ, ಅಶೋಕ ಕೊಣ್ಣೂರ, ಚಂದ್ರಶೇಖರ ಕಗ್ಗಲಗೌಡ್ರ, ಶಿವಪ್ರಕಾಶ ಮಹಾಜನಶೆಟ್ಟರ, ಚಂದ್ರಣ್ಣ ಮಹಾಜನಶೆಟ್ಟರ, ಬಸವರಾಜ ಬೆಂಡಿಗೇರಿ, ಶಂಕರ ಕರ್ಕಿ ಇದ್ದರು. ರತ್ನಾ ಕರ್ಕಿ ನಿರೂಪಿಸಿದರು. ಶೋಭಾ ಗಾಂಜಿ ಸ್ವಾಗತಿಸಿದರು. ಕಿರಣಕುಮಾರ ನಾಲವಾಡ ವಂದಿಸಿದರು.