ಸೂಲಿಬೆಲೆ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆಯನ್ನು ಸಂಪಾದನೆ ಮಾಡಬೇಕು. ಅದು ಯಾರು ಕದಿಯಾಗದ ಆಸ್ತಿ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ವಿಜ್ಞಾನ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಹೇಳಿದರು.

ಸೂಲಿಬೆಲೆ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆಯನ್ನು ಸಂಪಾದನೆ ಮಾಡಬೇಕು. ಅದು ಯಾರು ಕದಿಯಾಗದ ಆಸ್ತಿ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ವಿಜ್ಞಾನ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಹೇಳಿದರು.

ಸೂಲಿಬೆಲೆ ವಿವೇಕಾನಂದ ಪ್ರೌಢಶಾಲೆಯಲ್ಲಿ ಪರಿಷತ್‌ ಹಮ್ಮಿಕೊಂಡಿದ್ದ ಲೇಖನ ಸಾಮಾಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನೇಕರಲ್ಲಿ ಮಾನಸಿಕ ಸ್ಥಿತಿ ಕುಗ್ಗುತ್ತಿದೆ. ಕೇವಲ ಸಂಪಾದನೆಯ ಓಟದಲ್ಲಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮೌಢ್ಯಗಳನ್ನು ನಂಬಿಸುತ್ತಿರುವುದು ವಿಷಾದನೀಯ ಎಂದು ಹೇಳಿದರು.

ಕೆಂಪೇಗೌಡ ಸಂಘದ ನಿರ್ದೇಶಕ ಡಾ.ಆಂಜಿನಪ್ಪ ಮಾತನಾಡಿ, ಇಂದು ಆರೋಗ್ಯದ ಬಗ್ಗೆ ಅನೇಕ ಊಹಾ ಪೋಹಗಳು ಹರಿದಾಡುತ್ತಿವೆ. ಅನೇಕರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಜನಸಾಮಾನ್ಯರು ಯೂಟ್ಯೂಬ್‌ಗಳಲ್ಲಿ ಬರುವ ವಿಚಾರಗಳನ್ನೆಲ್ಲಾ ಸತ್ಯ ಎಂದು ನಂಬಿ ಮೋಸ ಹೋಗಬಾರದು ಎಂದು ಎಚ್ಚರಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಆರ್.ಉಮೇಶ್ ಮಾತನಾಡಿ, ಸುಮಾರು ೧೬ ವರ್ಷಗಳಿಂದ ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ನೋಟ್‌ಬುಕ್, ಲೇಖನ ಸಾಮಗ್ರಿ ಪರಿಕರಗಳನ್ನು ನೀಡುತ್ತಿದ್ದು ಪೋಷಕರು ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು. ದಾನಿಗಳು, ಸಂಘ ಸಂಸ್ಥೆಗಳು, ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು, ನುರಿತ ಶಿಕ್ಷಕರಿಂದ ಸರ್ಕಾರಿ ಶಾಲೆಯಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

ಇದೇ ವೇಳೆ ಸೂಲಿಬೆಲೆ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಸಂಸ್ಥೆಯಿಂದ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

ಶಾಲಾ ಅಧ್ಯಕ್ಷ ರವಿಕುಮಾರ್, ಮುಖ್ಯಶಿಕ್ಷಕ ಡಿ.ಲಕ್ಷ್ಮೀನಾರಾಯಣ್‌, ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣ್ ಸಿಂಗ್, ಜೇನುಗೂಡು ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್, ನಿರ್ದೇಶಕ ಬಿ.ಶ್ರೀನಿವಾಸ್, ರಾಜಸ್ವ ನೀರಿಕ್ಷಕ ನ್ಯಾನಮೂರ್ತಿ, ಮೊರಾರ್ಜಿ ದೇಸಾಯಿ ಶಾಲೆ ಪ್ರಾಂಶುಪಾಲ ವೆಂಕಟೇಶ್, ಪತ್ರಕರ್ತರ ಸಂಘದ ರಾಜ್ಯ ಸದಸ್ಯ ವಿ.ಮಂಜುನಾಥ್, ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್, ಸಂಘಟನೆಯ ಪದ್ಮಾವತಿ, ಜಯಲಕ್ಷ್ಮೀ, ಸುನೀತಾಉಮೇಶ್, ರಾಜೇಶ್ವರಿ ಇತರರಿದ್ದರು.

(ಫೋಟೋ ಕ್ಯಾಪ್ಷನ್‌)

ಸೂಲಿಬೆಲೆ ವಿವೇಕಾನಂದ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ವಿಜ್ಞಾನ ಪರಿಷತ್ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್ ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪಾಧ್ಯಕ್ಷ ಡಾ.ಆಂಜಿನಪ್ಪ, ಶಾಲಾ ಅಧ್ಯಕ್ಷ ರವಿಕುಮಾರ್, ಜಿಲ್ಲಾಧ್ಯಕ್ಷ ಉಮೇಶ್ ಇತರರಿದ್ದರು.