ಸಾರಾಂಶ
ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅಗತ್ಯವಾಗಿದೆ.
ಹೊಸಪೇಟೆ: ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅಗತ್ಯವಾಗಿದೆ. ಅದರಲ್ಲೂ ಮಹಿಳಾ ಶಿಕ್ಷಣಕ್ಕೂ ಒತ್ತು ನೀಡಬೇಕು. ಆಗ ಮಾತ್ರ ಸಮಾಜ ನಿರ್ದಿಷ್ಟ ಗುರಿ ತಲುಪಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ನಗರದ ಫೂಲ್‌ಬನ್ ಶಾಲೆಯ 50ನೇ ವರ್ಷದ ಸುವರ್ಣ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ದೂರದೃಷ್ಟಿಯನ್ನು ಮುಂದಿಟ್ಟುಕೊಂಡು ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣದ ಶಾಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ 50 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಸುಮಾರು 40 ಮಕ್ಕಳಿಂದ ಶುರುವಾಗಿ ಈಗ 1900 ಮಕ್ಕಳಿಗೆ ಏರಿರುವುದು ಅತ್ಯಂತ ಸಂತೋಷದಾಯಕ ವಿಷಯವಾಗಿದೆ. ಈ ಶಾಲೆಯಲ್ಲಿ ಇನ್ನಷ್ಟು ಮಕ್ಕಳು ಶಿಕ್ಷಣ ಪಡೆಯಲಿ ಎಂದರು.ಹುಡಾ ಅಧ್ಯಕ್ಷ ಎಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿರುವುದರಿಂದ ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗದೆ ತಂದೆ, ತಾಯಿಗಳ ಹೆಸರು ಅಜರಾಮರವಾಗಿಸುವಂತೆ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಯನ್ನು ಪಡೆಯಬೇಕು ಎಂದರು.
ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಬಿಇಒ ಎಂ. ಚನ್ನಬಸಪ್ಪ, ಶಾಲೆಯ ಅಧ್ಯಕ್ಷ ಸೈಯದ್ ನಾಜಿಮುದ್ದೀನ್, ಮುಖಂಡರಾದ ಶೇಕ್ಷಾವಲಿ, ಕೆ. ಮುಸ್ತಾಕ್ ಅಹಮ್ಮದ್, ಬಿಎಂಡಿ ಹನೀಫ್, ಎಂ.ಹುಸೇನಸಾಬ್, ಕೆ.ರಿಯಾಜ್ ಅಹಮ್ಮದ್, ಸಾಬೀರಹುಸೇನ್, ಕೆ. ಅಬ್ದುಲ್ ಹಕ್ ಸೇಠ್, ಕೆ.ಸೈಯದ್ ಮಹಮ್ಮದ್, ಮನ್ಸೂರ್ ಹುಸೇನ್, ಫೈರೋಜ್ ಖಾನ್, ಎಂ.ಡಿ. ಆಸಿಫ್ ಹುಸೇನ್, ಕೆಎಂಡಿ ಸಲೀಂ ಜಾಫರ್ ಮತ್ತಿತರರಿದ್ದರು.ಹೊಸಪೇಟೆಯ ಫೂಲ್‌ಬನ್ ಶಾಲೆಯ 50ನೇ ವರ್ಷದ ಸುವರ್ಣ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಚಾಲನೆ ನೀಡಿದರು.