ಸಾರಾಂಶ
ಹಾವೇರಿ: ಸಮಾಜದಲ್ಲಿ ಸ್ವಾವಲಂಬಿಯಾಗಿ ಉನ್ನತಿ ಸಾಧಿಸಬೇಕಾದರೆ ಮಹಿಳೆಯು ಅತ್ಯಗತ್ಯವಾಗಿ ಶಿಕ್ಷಣ ಪಡೆಯಲೇಬೇಕಿದೆ ಎಂದು ಪಿಎಸ್ಐ ಭಾರತಿ ಕುರಿ ಅಭಿಪ್ರಾಯಪಟ್ಟರು.ನಗರದ ಶ್ರೀಕೃಷ್ಣ ಕಲ್ಯಾಣಮಂಟಪದಲ್ಲಿ ಶುಕ್ರವಾರ ಬಜ್ ಇಂಡಿಯಾ ಟ್ರಸ್ಟ್ ಹಾವೇರಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಬಜ್ ಹಬ್ಬ ಮಹಿಳಾ ಸಬಲೀಕರಣ ಮತ್ತು ಯಶಸ್ಸಿನ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸ್ವಾವಲಂಬಿ ಮತ್ತು ಸ್ವತಂತ್ರವಾಗಿ ಜೀವನವನ್ನು ನಡೆಸಿಕೊಂಡು ಹೋಗುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾದರೆ ಆರ್ಥಿಕವಾಗಿಯೂ ಸಬಲಳಾಗಬೇಕಿದೆ ಎಂದರು.ಅಧ್ಯಕ್ಷತೆಯನ್ನು ವಹಿಸಿದ್ದ ಬಜ್ ಸಂಸ್ಥೆಯ ವ್ಯವಸ್ಥಾಪಕ ವೆಂಕಟೇಶ್ ಜಿ.ಎಸ್. ಮಾತನಾಡಿ, ಬಜ್ ಇಂಡಿಯಾ ಸಂಸ್ಥೆಯು ರಾಜ್ಯದ ಹದಿಮೂರು ಜಿಲ್ಲೆಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸ್ವಯಂಶಕ್ತಿ ತರಬೇತಿ ನೀಡಿದೆ. ಅದರಲ್ಲಿ 18 ಸಾವಿರ ಗೆಳತಿಯರು ಸ್ವಯಂಪ್ರೇರಿತರಾಗಿ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಲ್ಪಾ ಸಿದ್ದಪ್ಪನವರ ಮತ್ತು ಹಾವೇರಿ ಚೈತನ್ಯ ರೂರಲ್ ಡೆವಲೆಪ್ಮೆಂಟ್ ಮುಖ್ಯಸ್ಥ ಎಸ್.ಎಚ್. ಮಜೀದ್ ಮಾತನಾಡಿ, ಸಂಸ್ಥೆಯು ಫೈನಾನ್ಸ್ ರೀತಿಯಲ್ಲಿ ಯಾವುದೇ ಹಣಕಾಸು ನೀಡದೇ ಆರ್ಥಿಕ ಮಿತವ್ಯಯ ಸಾಧಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯವನ್ನು ಒದಗಿಸುತ್ತಿರುವುದು ಶ್ಲಾಘನೀಯ ಎಂದರು.ನಿರುಪಮ ನಾಯ್ಕ, ಸೌಮ್ಯ ಗಿರೀಶ ಹೊಳಲ, ಪುಷ್ಪಾವತಿ ಹಿರೇಮಠ, ಕುಸುಮಾ ಎಂ.ಕೆ. ಅವರು ಸಂಸ್ಥೆಯ ಜತೆಗಿನ ತಮ್ಮ ಒಡನಾಟದ ಅನುಭವವನ್ನು ಹಂಚಿಕೊಂಡರು.ಕಾರ್ಯಕ್ರಮ ವ್ಯವಸ್ಥಾಪಕ ಚನ್ನಬಸವ ಗಡ್ಡಿಮಠ, ವಲಯ ವ್ಯವಸ್ಥಾಪಕ ನಿರಂಜನಕುಮಾರ ಟಿ., ರೇಣುಕಾ ಕಹಾರ, ಮಾರುತಿ ಇದ್ದರು. ನೇತ್ರಾ ಧರಿಯಪ್ಪನವರ ನಿರ್ವಹಿಸಿದರು. ಚಂದ್ರು ಹಡಪದ ವಂದಿಸಿದರು.ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ
ರಾಣಿಬೆನ್ನೂರು: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಆದರ್ಶ ಶಿಕ್ಷಕ ಜ್ಞಾನದ ಖಣಿಯಾಗಿರಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಹಾಗೂ ಚಿತ್ರದುರ್ಗದ ಬಾಪೂಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಎಂ. ವೀರೇಶ ತಿಳಿಸಿದರು.ನಗರದ ಬಿಎಜೆಎಸ್‌ಎಸ್ ಬಿಇಡಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಜ್ಞಾನ ಮತ್ತು ಕೌಶಲ್ಯ ಶಿಕ್ಷಕರ ಎರಡು ಕಣ್ಣುಗಳಿದ್ದಂತೆ. ಶಿಕ್ಷಕ ನಿರಂತರ ವಿದ್ಯಾರ್ಥಿಯಾಗಿರಬೇಕು. ಕೀಳರಿಮೆ ಹಾಗೂ ಉದಾಸೀನ ಮನೋಭಾವ ಶಿಕ್ಷಕರಿಗೆ ಸಲ್ಲದು ಎಂದರು.ಪ್ರೊ. ಎಚ್.ಎ. ಭಿಕ್ಷಾವರ್ತಿಮಠ, ಆಡಳಿತ ಮಂಡಳಿಯ ಸದಸ್ಯ ಶಿವಪ್ಪ ಜಡೇದ ಮಾತನಾಡಿದರು. ಪ್ರಾ. ಡಾ. ಎಂ.ಎಂ. ಮೃತ್ಯುಂಜಯ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ರತ್ನವ್ವ ಮುದೇನೂರ, ನಂದಾ ಎಸ್.ಕೆ., ಉಷಾ, ಆರ್ಶಿಯಾ ಬಾನು ಹಾಗೂ ಕಾವೇರಿ ಬಾರ್ಕಿ ಅವರನ್ನು ಸನ್ಮಾನಿಸಲಾಯಿತು. ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರೊ. ಶಿವಕುಮಾರ ಬಿಸಲಳ್ಳಿ ಪ್ರತಿಜ್ಞಾವಿಧಿ ಬೋಧಿಸಿದರು.
ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಪ್ರೊ. ಪರಶುರಾಮ ಪವಾರ, ಪೂಜಾ ಹುಲ್ಲತ್ತಿ, ಗೌರಿ ಜಿ.ಡಿ., ಅಕ್ಷತಾ ಗಾಳಿ, ಭಾರತಿ, ರುಕ್ಮಿಣಿ ಹಾಗೂ ಕಾಲೇಜಿನ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳು ಇದ್ದರು.