ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅಗತ್ಯ: ಶಿವಾನಂದ ಪಾಟೀಲ

| Published : Oct 12 2025, 01:02 AM IST

ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅಗತ್ಯ: ಶಿವಾನಂದ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಪಾಲಕರು ಮಗುವಿನ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣ ಕೊಡಿಸಿ ಎಂದು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಪಾಲಕರು ಮಗುವಿನ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣ ಕೊಡಿಸಿ ಎಂದು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಕರೆ ನೀಡಿದರು.ಪಟ್ಟಣದ ತೆಲಗಿ ರಸ್ತೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ಸುಮಾರು 230 ಕ್ಕೂ ಹೆಚ್ಚು ದೇಶಗಳಲ್ಲಿ ಇಂಗ್ಲಿಷ್ ಭಾಷೆಯೇ ಪ್ರಧಾನ ವ್ಯವಹಾರಿಕ ಭಾಷೆಯಾಗಿದೆ. ಸರ್ಕಾರ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ 100 ಮೌಲಾನ ಆಜಾದ ಆಂಗ್ಲ ಶಾಲೆ ಸ್ಥಾಪನೆಗೆ ಮುಂದಾಗಿದೆ. ನಮ್ಮ ಕ್ಷೇತ್ರಕ್ಕೂ ಶಾಲೆ ಮಂಜೂರಾಗಿದೆ. ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರು, ಶಾಲಾ ಕಟ್ಟಡ, ಪ್ರಯೋಗಾಲಯ ಸೇರಿ ಅಗತ್ಯ ಸೌಲಭ್ಯ ಕಲ್ಪಿಸವುದು ಅಗತ್ಯವಾಗಿದೆ. ಮೌಲಾನಾ ಆಜಾದ್ ಶಾಲೆಯಲ್ಲಿ ಎಲ್.ಕೆ.ಜಿಯಿಂದ ಪಿಯುಸಿವರೆಗೆ ಶಿಕ್ಷಣ ನೀಡುತ್ತಿದ್ದು, ಇದರ ಸದುಪಯೋಗ ಪಡೆಯಬೇಕು ಎಂದರು.ಧರ್ಮಗುರು ಹಾಫೀಜಮೊಹ್ಮದಅಲಿ ಮಿಲಿ ಮೌಲಾನ ಆಜಾದ ಮಾತನಾಡಿದರು. ಬಸವೇಶ್ವರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಲೋಕನಾಥ ಅಗರವಾಲ, ಜಾಮೀಯಾ ಮಸೀದಿ ಕಮೀಟಿ ಅಧ್ಯಕ್ಷ ಡಾ.ಶಬ್ಬೀರಅಹ್ಮದ್ ನದಾಫ, ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಮಹಿಬೂಬ ನಾಯ್ಕೋಡಿ, ಮುಖಂಡರಾದ ಮತಾಬ ಬೊಮ್ಮನಹಳ್ಳಿ, ಇಲಾಹಿ ನಾಗರಾಳ, ಅಜೀಜ ಬಾಗವಾನ, ಅಲ್ತಾಫ್ ಮುದ್ದೇಬಿಹಾಳ, ಅಬ್ದುಲರಜಾಕ ಬಾಗವಾನ, ರಫೀಕ ಹೊಕ್ರಾಣಿ, ಕಮಲಸಾಬ ಕೊರಬು, ಅಬ್ದುಲಹಮೀದ ನದಾಫ, ಬುಡ್ಡೇಸಾಬ ಹುಬ್ಬಳ್ಳಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಶಾಂತ ಪೂಜಾರಿ, ತಾಲೂಕಾಧಿಕಾರಿ ಇಲಾಹಿ ನಾಗರಾಳ, ಕ್ಷೇತ್ರಸಮನ್ವಾಧಿಕಾರಿ ಸುನಿಲ ನಾಯಕ, ಕ್ಷೇತ್ರಸಂಪನ್ಮೂಲ ವ್ಯಕ್ತಿ ಎಂ.ಬಿ.ಗಬ್ಬೂರ, ಮುಖ್ಯೋಪಾಧ್ಯಾಯಿನಿ ಜಿ.ಎಸ್. ಸಾತಲಗಾಂವ ಇತರರು ಇದ್ದರು. ಮಹಮ್ಮದ ಸೋಹಿಬ ಕುರಾನ್ ಪಠಿಸಿದರು. ಅಲ್ತಾಪಹುಸೇನ ಮುದ್ದೇಬಿಹಾಳ ಸ್ವಾಗತಿಸಿದರು. ರಮಜಾನ ಹೆಬ್ಬಾಳ ನಿರೂಪಿಸಿದರು. ಮಹಿಬೂಬ ನಾಯ್ಕೋಡಿ ವಂದಿಸಿದರು.