ಶಿಕ್ಷಣ, ನೈತಿಕತೆ ಮತ್ತು ಸಾಂಸ್ಕೃತಿಕ ಜಾಗೃತಿಯ ಬಗ್ಗೆ ಇಂದಿನ ಶಿಕ್ಷಣ ಸಂಸ್ಥೆಗಳು ಒತ್ತು ನೀಡಬೇಕೆಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಶಿಕ್ಷಣ, ನೈತಿಕತೆ ಮತ್ತು ಸಾಂಸ್ಕೃತಿಕ ಜಾಗೃತಿಯ ಬಗ್ಗೆ ಇಂದಿನ ಶಿಕ್ಷಣ ಸಂಸ್ಥೆಗಳು ಒತ್ತು ನೀಡಬೇಕೆಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.ಸಮೀಪದ ಯಲ್ಲಟ್ಟಿಯಲ್ಲಿ ಜಗಜ್ಯೋತಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ಮಂಗಳವಾರ ವಿಶ್ವಭಾರತಿ ಅಂತಾರಾಷ್ಟ್ರೀಯ ಶಾಲೆ ಹಾಗೂ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಕೇವಲ ಸಾಂಪ್ರದಾಯಿಕ ಶಿಕ್ಷಣವಲ್ಲದೆ, ಜೀವನಕ್ಕೆ ಅಗತ್ಯವಾದ ಮೌಲ್ಯಗಳನ್ನು, ನೀತಿ ಕಥೆಗಳನ್ನು ತಿಳಿಸುವ ಮೂಲಕ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುವ ಶಿಕ್ಷಣದ ಅವಶ್ಯಕತೆಯಿದೆಯೆಂದರು.
ಶಾಸಕ ಸಿದ್ದು ಸವದಿ ಮಾತನಾಡಿ, ಸ್ವತಂತ್ರ ಭಾರತದಲ್ಲಿ ಎಲ್ಲರಿಗೂ ಶಿಕ್ಷಣದ ಹಕ್ಕಿದೆ. ಜಾಗತಿಕ ಮಟ್ಟದಲ್ಲಿ ಶಿಕ್ಷಣವನ್ನು ದೇಶ ಹಾಳು ಮಾಡುವ ಭಯೋತ್ಪಾದಕತೆ ಸೃಷ್ಟಿಯಾಗುತ್ತಿರುವುದು ಆತಂಕದ ಬೆಳವಣಿಗೆಯಯಾಗಿದೆ. ಕೇವಲ ಜಾಣರನ್ನು ಸೆಳೆಯಲು ಪ್ರವೇಶಾತಿ ಪರೀಕ್ಷೆಗಳು ಬೇಡ. ಸಾಮಾನ್ಯ ವಿದ್ಯಾರ್ಥಿಗಳಿಗೆ ಪೂರಕ ಶಿಕ್ಷಣದೊಂದಿಗೆ ಪ್ರತಿಭಾವಂತರನ್ನಾಗಿಸುವುದೇ ಶಿಕ್ಷಣದ ಗುರಿಯಾಗಬೇಕೆಂದರು.ಗದಗ ಶಿರುಂಜಿಯ ಬಸವ ಸಮರ್ಥ ಸಿದ್ಧೇಶ್ವರ ಶ್ರೀ, ಯಶವಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಹಣಮಂತ ನಿರಾಣಿ, ಸುನೀಲಗೌಡ ಪಾಟೀಲ, ಪ್ರಾಧಿಕಾರ ಅಧ್ಯಕ್ಷ ದಾನಪ್ಪ ಹುಲಜತ್ತಿ, ಸಿ.ಎಂ. ನ್ಯಾಮಗೌಡ, ಬಿ.ಕೆ. ಕೊಣ್ಣೂರ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಇದೇ ಸಂದರ್ಭ ಸಂಸ್ಥೆ ಅಧ್ಯಕ್ಷ ಸದಾಶಿವ ಸಂತಿ, ಸದಾಶಿವ ಗೌಡಪ್ಪನವರ, ವಸಂತ ಪಾಟೀಲ, ಭಾರತಿ ನ್ಯಾಮಗೌಡ, ಸುಜಾತಾ ಹನಗಂಡಿ, ಅಪ್ಪಜಪ್ಪ ಸಂತಿ, ಗೋಪಾಲ ಲಡ್ಡಾ, ರಾಜು ಕಡಕಭಾಂವಿ, ಮುಖ್ಯಶಿಕ್ಷಕ ಗಣೇಶ ಚಿಕ್ಕೂಡ, ಮಲ್ಲು ಭದ್ರನ್ನವರ, ಶಂಕರ ಸೊರಗಾಂವಿ, ಶಂಕರ ಜುಂಜಪ್ಪನವರ, ಮಲ್ಲಣ್ಣ ಕಕಮರಿ, ಸಚಿನ ಪಡಸಲಗಿ, ಚಂದ್ರವ್ವ ಸಂತಿ, ಲಕ್ಕವ್ವ ಸಂತಿ ಸೇರಿದಂತೆ ಅನೇಕರಿದ್ದರು.