ರಾಣಿಬೆನ್ನೂರು: ಸಾಧನೆ ಹಾದಿ ಸುಗಮವಲ್ಲ, ಛಲವಿದ್ದವರು ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯ ಎಂದು ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಹೇಳಿದರು.ನಗರದ ಹುಣಸಿಕಟ್ಟಿ ರಸ್ತೆಯ ಜೇಸಿವಾಣಿ ಅರಮನೆಯಲ್ಲಿ ಭಾನುವಾರ ಕಾಕಿ ಜನಸೇವಾ ಸಂಸ್ಥೆ ಹಾಗೂ ಕುರುಹಿನಶೆಟ್ಟಿ ಸಮಾಜ ಸೇವಾ ಸಂಘದ ವತಿಯಿಂದ ನೇಕಾರ ಕುರುಹಿನಶೆಟ್ಟಿ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸ್ವಯಂಪ್ರೇರಿತ ರಕ್ತದಾನ ಶಿಬಿರ, ದೇಹದಾನ ಅರಿವು ಕಾರ್ಯಕ್ರಮ ಹಾಗೂ ಕಾಕಿ ಶ್ರೀನಿವಾಸ ಲೇಔಟ್ ಸದಸ್ಯರಿಗೆ ಸೈಟು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದುಡ್ಡು ಸಂಪಾದಿಸುವವರನ್ನು ಶ್ರೀಮಂತರೆನ್ನಲು ಸಾಧ್ಯವಿಲ್ಲ. ವಿದ್ಯಾ ಸಂಪಾದನೆಯೇ ಬಹುದೊಡ್ಡ ಶ್ರೀಮಂತಿಕೆಯಾಗಿದೆ. ಜ್ಞಾನವುಳ್ಳವರಿಗೆ ಯಾವತ್ತೂ ಬಡತನ ಬರುವುದೇ ಇಲ್ಲ. ಸಾಧನೆ ಹಾದಿಯಲ್ಲಿ ಸಾಗುವುದರಿಂದ ಮನುಷ್ಯನ ಬದುಕು ಶ್ರೇಷ್ಠ ಎನಿಸಿಕೊಳ್ಳುತ್ತದೆ ಎಂದರು. ಐಎಎಸ್, ಐಪಿಎಸ್, ಸಾಹಿತಿ ಏನಾದರೂ ಆಗಲು ಸಾಧ್ಯವಾಗುತ್ತದೆ. ಜೀವನದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಭಾ ಪುರಸ್ಕಾರ ಮಕ್ಕಳಲ್ಲಿ ಉತ್ತೇಜನ ನೀಡಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಹಾಗೂ ಸಮಾಜದ ವತಿಯಿಂದ ೨ನೇ ವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಾರಿ ೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪುರಸ್ಕಾರ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ಸಹ ಓದಿನಲ್ಲಿ ಶಿಸ್ತು, ಸಂಯಮ ಹಾಗೂ ಶ್ರದ್ಧೆ ಇಟ್ಟುಕೊಂಡು ಮುನ್ನಡೆಬೇಕು. ದೇಶ ಹಾಗೂ ಊರಿಗೆ ಉತ್ತಮ ಹೆಸರು ತರಬೇಕು ಎಂದರು.ನಿವೃತ್ತ ಪ್ರಾಚಾರ್ಯ ಶಿವಾನಂದ ಬಗಾದಿ ಮಾತನಾಡಿದರು. ಕಾಕಿ ಜನಸೇವಾ ಸಂಸ್ಥೆ ಕಾರ್ಯದರ್ಶಿ ರೂಪಾ ಕಾಕಿ, ಕುರುಹಿನಶೆಟ್ಟಿ ಸಮಾಜ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಖಜಾಂಚಿ ಹನುಮಂತಪ್ಪ ಕಾಕಿ, ಸದಸ್ಯರಾದ ಲಕ್ಷಣ ಕನಕಿ, ಶ್ರೀಧರ ಅಮಾಸಿ, ವೆಂಕಟೇಶ ಕಾಕಿ, ಸಿದ್ದಪ್ಪ ಬೂದನೂರ, ಬೋಜಪ್ಪ ಕನಕೇರಿ, ಮುಖಂಡರಾದ ನಾಗರಾಜ ಅಡ್ಮನಿ, ಪ್ರಕಾಶ ಗಚ್ಚನಮಠ, ನಿತ್ಯಾನಂದ ಕುಂದಪುರ, ಮಲ್ಲಿಕಾರ್ಜುನ ಸಾವಕ್ಕಣ್ಣನವರ, ಕೊಟ್ರೇಶಪ್ಪ ಎಮ್ಮಿ, ಮಾಲತೇಶ ಗಡಾದ, ನಾಗರಾಜ ಕಾಕಿ, ಬಸವರಾಜ ಶ್ಯಾವಿ, ಪ್ರಭು ಎಳೆಹೊಳೆ, ಗಣೇಶ ಕನಕಿ, ಶ್ರೀನಿವಾಸ ಸುರಹೊನ್ನೆ, ರಾಜು ಬೂದನೂರ, ಪ್ರವೀಣ ಸುರಹೊನ್ನೆ ಮತ್ತಿತರರಿದ್ದರು.