ವಿದ್ಯೆ ಎಲ್ಲರ ಜೀವನದ ಬೆಳಕು. ವಿದ್ಯೆಯಿಂದ ವ್ಯಕ್ತಿಯ ಹಿರಿಮೆ ಪ್ರಕಾಶಿಸುತ್ತದೆ ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಚಿತ್ತಯ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ವಿದ್ಯೆ ಎಲ್ಲರ ಜೀವನದ ಬೆಳಕು. ವಿದ್ಯೆಯಿಂದ ವ್ಯಕ್ತಿಯ ಹಿರಿಮೆ ಪ್ರಕಾಶಿಸುತ್ತದೆ ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಚಿತ್ತಯ್ಯ ತಿಳಿಸಿದರು. ತಾಲೂಕಿನ ರಂಟವಳಲು ನಿವೇದಿತಾ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಈ ಶಾಲೆ ಆಂಧ್ರದ ಗಡಿ ಭಾಗದಲ್ಲಿ ಪ್ರಾರಂಭವಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಕಲಿಕೆಯಲ್ಲಿ ಯಶಸ್ಸು ಕಾಣುತ್ತಿದೆ ಎಂದರು.

ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಅವಶ್ಯಕ , ಶಿಕ್ಷಕರು ಅವರಿಗೆ ಕಲಿಸುವ ಅಕ್ಷರ ಅಸ್ತ್ರ, ಆತ್ಮವಿಶ್ವಾಸ, ಅರಿವು, ಅಂತಃಕರಣ ಅರಳಿಸುತ್ತದೆ. ದೇಶದ ಭವಿಷ್ಯದ ಭದ್ರತೆಗೆ ಬುನಾದಿಯಾಗುತ್ತದೆ ಎಂದರು. ಸ್ಥಳೀಯ ಗ್ರಾಮದ ನಿವೃತ್ತ ಯೋಧ ಮಂಜುನಾಥ್‌ ಮಾತನಾಡಿ, ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಆಸಕ್ತಿ ವಹಿಸುತ್ತಿರುವುದು ಶ್ಲಾಘನೀಯ, ಸ್ಥಳೀಯ ಶಾಲೆಯಲ್ಲೇ ಪೋಷಕರು ಮಕ್ಕಳನ್ನು ಸೇರಿಸಿ ಓದಿಸಿದರೆ ಒಳಿತು ಎಂದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿತಾಧಿಕಾರಿ ಎಂ.ವೆಂಕಟರಾಮು , ಅಧ್ಯಕ್ಷ ಶಿವಣ್ಣ, ರೋಟರಿ ಅಧ್ಯಕ್ಷರುಗಳಾದ ಎಂ.ಶಿವಲಿಂಗಪ್ಪ. ಜಿ.ಜಯರಾಮಯ್ಯ, ಗ್ರಾಪಂ ಅಧ್ಯಕ್ಷರು ಸದಸ್ಯರು ಇದ್ದರು.