ಕಡೂರುಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶಿಕ್ಷಣವೇ ಅಸ್ತ್ರ. ಪೋಷಕರು ಗುಣಾತ್ಮಕ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ನೀಡುವ ಮೂಲಕ ಮಕ್ಕಳನ್ನು ಸಮಾಜಕ್ಕೆ ಆಸ್ತಿಯನ್ನಾಗಿಸಿ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲೂಕು ಮಾದಿಗ ನೌಕರರ ಸಂಘದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಕನ್ನಡಪ್ರಭ ವಾರ್ತೆ, ಕಡೂರುಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶಿಕ್ಷಣವೇ ಅಸ್ತ್ರ. ಪೋಷಕರು ಗುಣಾತ್ಮಕ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ನೀಡುವ ಮೂಲಕ ಮಕ್ಕಳನ್ನು ಸಮಾಜಕ್ಕೆ ಆಸ್ತಿಯನ್ನಾಗಿಸಿ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲೂಕಿನ ಮಲೇಶ್ವರದ ಬಾಬು ಜಗಜೀವನ್ ರಾಂ ಸಮುದಾಯ ಭವನದಲ್ಲಿ ತಾಲೂಕು ಮಾದಿಗ ನೌಕರರ ಸಂಘದಿಂದ ಏರ್ಪಡಿಸಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈ ಹಿಂದೆ ಮಾದಿಗ ಸಮಾಜದಲ್ಲಿ ಬದುಕಲು ಸಾಕಷ್ಟು ಶ್ರಮವಹಿಸಿರುವುದನ್ನು ಡಾ.ಅಂಬೇಡ್ಕರ್ ಅವರ ಮಹಾನಾಯಕ ದೃಷ್ಯರೂಪಕ ಧಾರವಾಹಿಯಿಂದ ತಿಳಿದಿದ್ದೇವೆ. ಅಂತಹ ಶೋಷಣೆಗಳ ವಿರುದ್ಧ ಹೋರಾಟ ಮಾಡಿದ ಡಾ.ಬಿ.ಆರ್. ಅಂಬೇಡ್ಕರ್ ಸಿಕ್ಕ ಅವಕಾಶದಲ್ಲಿ ತಮ್ಮ ಸಮಾಜದ ಜೊತೆ ಇತರೆ ಕೆಳ ಸಮುದಾಯಗಳನ್ನು ಉನ್ನತಿಗೆ ತರಲು ಸಂವಿಧಾನ ಗ್ರಂಥ ಬರೆದು ಎಲ್ಲರೂ ಸಮಾನವಾಗಿ ಬಾಳುವ ಅವಕಾಶ ನೀಡಿದ್ದಾರೆ ಎಂದರು.
ಕ್ಷೇತ್ರದಲ್ಲಿ ಅತಿ ಹೆಚ್ಚು ಎಡಗೈ ಮಾದಿಗ ಸಮಾಜದವರಿದ್ದು, ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲು ಸಿದ್ಧತೆ ನಡೆಸಿದ್ದು, ಈಗಾಗಲೇ ರಸ್ತೆ, ಸಮುದಾಯಭವನ, ದೇವಸ್ಥಾನ ನಿರ್ಮಾಣಕ್ಕಾಗಿ ಅನುದಾನ ಸಹ ಬಿಡುಗಡೆ ಮಾಡಿದೆ. ಮಾದಿಗ ಸಮಾಜದ ಯಾವುದೇ ಕೆಲಸಗಳಿಗೆ ಕೈಜೋಡಿಸಿ ಬಲತುಂಬುವ ಕೆಲಸ ಮಾಡಲು ಸದಾ ಸಿದ್ದನಿದ್ದೇನೆ ಎಂದರು.ನಮ್ಮ ಕಾಂಗ್ರೆಸ್ ಸರ್ಕಾರ ದಶಕಗಳಿಂದ ಸದಾಶಿವ ಆಯೋಗದ ಒಳಮೀಸಲಾತಿ ಜಾರಿಗೊಳಿಸಿ ಇತ್ತೀಚೆಗೆ ಸದನದಲ್ಲೂ ಅಂಗೀಕರಿಸಿದೆ ಶಿಕ್ಷಣ ಮತ್ತು ಉದ್ಯೋಗದ ಶೇ.6 ಬಿಲ್ ಪಾಸ್ ಮಾಡಿದೆ. ಸಮಾಜದ ಯುವ ಜನರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.
ಪ್ರಧಾನ ಉಪನ್ಯಾಸ ನೀಡಿದ ಅಧ್ಯಾಪಕ ತರೀಕೆರೆ ಶೇಖರಪ್ಪ ಪ್ರತಿಭೆ ಎನ್ನುವುದು ಸಮಾಜಕ್ಕೆ ಬೆಳಕು ನೀಡುವಂತಿರಬೇಕು. ಆ ಬೆಳಕಿನಲ್ಲಿ ಸಂಘಟನೆಯ ಅಗತ್ಯವಿರುವ ಕೆಳ ಸಮುದಾಯಗಳು ತಮ್ಮ ಬೌದ್ಧಿಕ ಸಾಮರ್ಥ್ಯ, ಅಕ್ಷರ, ಅಶನ, ವಸನಗಳನ್ನು ಗಳಿಸಿಕೊಳ್ಳುವಂತಾದಾಗ ಪ್ರತಿಭೆಗೆ ತಕ್ಕ ಬೆಲೆ ಬರುತ್ತದೆ ಎಂದರು. ನಮ್ಮ ಆಂತರಿಕ ವಂಶವಾಹಿ ಜಾತಿಯಾಗಿಸದೆ ಸಾಮರ್ಥ್ಯ ಗುರುತು ಮಾಡುವ ವೇದಿಕೆಯಾಗಿ ಬಳಸಿಕೊಳ್ಳಬೇಕು ಎಂದರು.ಮಾದಿಗ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ರಾಜಪ್ಪ ಮಾತನಾಡಿ, ಪ್ರತಿಭೆ ಯಾರ ಸ್ವತ್ತೂ ಅಲ್ಲ, ಆದರೆ ಅದನ್ನು ಗುರುತಿಸುವಿಕೆ ಮುಖ್ಯವಾಗಿದ್ದು ಪೋಷಕರು ತಮ್ಮ ಮಕ್ಕಳ ಬೆಳವಣಿಗೆಗಾಗಿ ಪ್ರೋತ್ಸಾಹಿಸುವ ಗುಣ ಬೆಳೆಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಲ್ಲೂ ಗೊಂದಲವಿದ್ದು ಸರಿಯಾದ ಮಾರ್ಗದರ್ಶನ ಮತ್ತು ಗುರಿಯ
ಅಗತ್ಯ ವಿದೆ. ಅವಕಾಶ ಹುಡುಕಿಕೊಂಡು ಹೋಗಿ ಸಾಧನೆ ಮಾಡಬೇಕು. ಮಕ್ಕಳಲ್ಲಿ ಶ್ರದ್ಧೆ, ನ್ಯಾಯ, ವಿಧೇಯ ಗುಣಗಳನ್ನು ಕಲಿಸಿ ಸೋಲನ್ನು ಗೆಲುವಿನ ಸೋಪಾನ ವಾಗಿಸಿಕೊಳ್ಳುವತ್ತ ಕೊಂಡೊಯ್ಯುವ ಮತ್ತು ಸಾಮಾಜಿಕ ಕಳಕಳಿ ಬೆಳೆಸುವವ್ಯವಸ್ಥೆ ಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ತಾಲೂಕು ಅಧ್ಯಕ್ಷ ಎಂ.ಬಿ.ಮಂಜುನಾಥ್ ಮಾತನಾಡಿ, ಇಂದು ಹೆಚ್ಚು ಬುದ್ಧಿಮತ್ತೆಯ ಸಮಾಜದಿಂದ ಸ್ಪರ್ಧಾತ್ಮಕ ಜಗತ್ತು ನಿರ್ಮಾಣವಾಗಿದ್ದು ಪರಿಶ್ರಮ, ಆತ್ಮವಿಶ್ವಾಸದಿಂದ ಬದುಕಿ, ಪೋಷಕರ ಶ್ರಮ ಅರಿತು ವಿದ್ಯಾರ್ಥಿಗಳು ಭವಿಷ್ಯದ ಚಿಂತೆ ನಡೆಸಬೇಕು. ಉತ್ತಮ ಹಾದಿ ಮೂಲಕ ಈ ನೂತನ ಸಂಘ ಇನ್ನಷ್ಟು ಉತ್ತಮ ಕಾರ್ಯ ಳನ್ನು ಆಯೋಜಿಸಿ ಸಮಾಜದ ಅಭಿವೃದ್ದಿಗಾಗಿ ಕೈಜೋಡಿಸಿ ಎಂದರು.ವಾಗಿ ಸಂಘದ ಉಪಾಧ್ಯಕ್ಷ ಬಿ.ಆರ್.ಗಂಗಪ್ಪ, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ.ಹೆಚ್.ಎಂ..ಖಜಾಂಚಿ ಮಹೇಂದ್ರ, ಗಿರೀಶ್.ಬಿ.ಹೆಚ್, ಬಳ್ಳೇಕೆರೆ ಚಂದ್ರಪ್ಪ, ಎಂ.ಆರ್..ರವಿಕುಮಾರ್, ಮಾದಯ್ಯ, ಕೆ.ಆರ್.ನಾಗರಾಜಪ್ಪ,ಬಿ.ಎಂ. ಮೈಲಾರಪ್ಪ, ಮಲ್ಲಿದೇವಿಹಳ್ಳಿ ಎಂ.ಎಸ್.ರಾಜೇಶ್, ಸಗುನಪ್ಪ, ವಿನೋದ್, ಮಾದಿಗ ಸಮಾಜದ ಅಧ್ಯಕ್ಷ ಜಗದೀಶ್, ಆರ್.ಜಿ.ಕೃಷ್ಣಸ್ವಾಮಿ, ಶೂದ್ರ ಶ್ರೀನಿವಾಸ್ ಇದ್ದರು.
26ಕೆಕೆಡಿಯು3.ಕಡೂರು ಮಲೇಶ್ವರದ ಬಾಬು ಜಗಜೀವನ್ ರಾಂ ಸಮುದಾಯ ಭವನದಲ್ಲಿ ತಾಲೂಕು ಮಾದಿಗ ನೌಕರರ ಸಂಘದಿಂದ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಾಸಕ ಕೆ.ಎಸ್.ಆನಂದ್ ಪುರಸ್ಕಾರ ಮತ್ತು ಪರಿಕರಗಳನ್ನು ನೀಡಿ ಗೌರವಿಸಿದರು.