ಸಾರಾಂಶ
ಶಿಕ್ಷಣ ಸಂಸ್ಥೆಗಳು ಭಾರತದ ದೇಶದ ಮುಖ್ಯ ಆಸ್ತಿಯಿದ್ದಂತೆ. ಆದರೆ, ಅವುಗಳು ಇಂದು ವ್ಯಾಪಾರೀಕರಣದ ಕೇಂದ್ರಗಳಾಗುತ್ತಿವೆ. ಹಾಗೆ ಆಗಬಾರದು ಎಂದು ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು ನುಡಿದರು.
ಕನ್ನಡಪ್ರಭ ವಾರ್ತೆ ಕೊಲ್ಹಾರ
ಶಿಕ್ಷಣ ಸಂಸ್ಥೆಗಳು ಭಾರತದ ದೇಶದ ಮುಖ್ಯ ಆಸ್ತಿಯಿದ್ದಂತೆ. ಆದರೆ, ಅವುಗಳು ಇಂದು ವ್ಯಾಪಾರೀಕರಣದ ಕೇಂದ್ರಗಳಾಗುತ್ತಿವೆ. ಹಾಗೆ ಆಗಬಾರದು ಎಂದು ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು ನುಡಿದರು.ಪಟ್ಟಣದಲ್ಲಿ ಅಂಜುಮನ್ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಈ ದೇಶದಲ್ಲಿ ಮಹಾನ್ ಪುರುಷರು ಶಿಕ್ಷಣಕ್ಕಾಗಿ ಬಹಳಷ್ಟು ಹೋರಾಟ ಮಾಡಿದ್ದಾರೆ. ಆದರೆ, ಇಂದು ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣದ ತತ್ವ ಅಳವಡಿಸಿಕೊಳ್ಳದೆ. ಶಿಸ್ತು, ಕರ್ತವ್ಯ ಪ್ರಜ್ಞೆ, ದಕ್ಷತೆ ಹಾಗೂ ಆದರ್ಶಮುಖಿಯಾಗಿ ಇದ್ದರೇ ಶಿಕ್ಷಣ ಸಂಸ್ಥೆಗಳು ಹೆಮ್ಮರವಾಗಿ ಬೆಳೆಯಲು ಸಾಧ್ಯ ಎಂದರು.
ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪುರ ಮಾತನಾಡಿ, ನೌಕರಿಗಾಗಿ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವ ಬದಲು, ತಂದೆ, ತಾಯಿ, ಬಂಧುಗಳನ್ನು ಗೌರವಿಸುವಂತಹ ಶಿಕ್ಷಣವನ್ನು ಮಕ್ಕಳಿಗೆ ಕೊಡಿಸಬೇಕಾಗಿದೆ. ಮಹಮ್ಮದ್ ಪೈಗಂಬರರು ಅದನ್ನೆ ಹೇಳಿದ್ದಾರೆ. ಆ ಶಿಕ್ಷಣ ಇಂದಿನ ಮಕ್ಕಳಿಗೆ ಅವಶ್ಯಕವಾಗಿದೆ ಎಂದರು.ಕಲ್ಲಿನಾಥ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ವೇಳೆ ಶಾಲಾ ಮಕ್ಕಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಪಿ.ಕೆ.ಗಿರಗಾಂವಿ, ಇಸ್ಮಾಯಿಲಸಾಬ್ ತಹಸೀಲ್ದಾರ, ದಾದಾಸಾಬ್ ಗೂಗಿಹಾಳ, ಪಪಂ ಸದಸ್ಯ ತೌಶೀಪ್ ಗಿರಗಾಂವಿ, ಶ್ರೀಶೈಲ ಮುಳವಾಡ, ಮುಖಂಡರಾದ ದಸ್ತಗೀರ ಕಲಾದಗಿ, ಇಕ್ಬಾಲ್ ನದಾಫ, ಅನ್ವರ್ ಕಂಕರಪೀರ, ದಶರಥ ಈಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಾಸಿಂ ಗಿರಗಾಂವಿ ಕಾರ್ಯಕ್ರಮ ನಡೆಸಿಕೊಟ್ಟರು.