ಮಕ್ಕಳ ತರಗತಿಗೆ ಅನುಗುಣವಾಗಿ ಶಿಕ್ಷಣದ ಜ್ಞಾನ ಬೆಳವಣಿಗೆ-ಕ್ಷೇತ್ರ ಶಿಕ್ಷಣಾಧಿಕಾರಿ ಅಂಬಿಗೇರ

| Published : Jan 03 2025, 12:30 AM IST

ಮಕ್ಕಳ ತರಗತಿಗೆ ಅನುಗುಣವಾಗಿ ಶಿಕ್ಷಣದ ಜ್ಞಾನ ಬೆಳವಣಿಗೆ-ಕ್ಷೇತ್ರ ಶಿಕ್ಷಣಾಧಿಕಾರಿ ಅಂಬಿಗೇರ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ತರಗತಿಗೆ ಅನುಗುಣವಾಗಿ ಶಿಕ್ಷಣದ ಜ್ಞಾನ ಬೆಳವಣಿಗೆ ಪೂರಕ ವಸ್ತು ಪ್ರದರ್ಶನ ಕಾರ್ಯಕ್ರಮ ಆಯೋಜಿಸಿ ಶಿಕ್ಷಣ ಸಂಸ್ಥೆ ಮಾಡಿದ್ದು ಒಳ್ಳೆಯ ಬೆಳವಣಿಗೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.

ಶಿಗ್ಗಾಂವಿ: ಮಕ್ಕಳ ತರಗತಿಗೆ ಅನುಗುಣವಾಗಿ ಶಿಕ್ಷಣದ ಜ್ಞಾನ ಬೆಳವಣಿಗೆ ಪೂರಕ ವಸ್ತು ಪ್ರದರ್ಶನ ಕಾರ್ಯಕ್ರಮ ಆಯೋಜಿಸಿ ಶಿಕ್ಷಣ ಸಂಸ್ಥೆ ಮಾಡಿದ್ದು ಒಳ್ಳೆಯ ಬೆಳವಣಿಗೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿರುವ ಪಿನಿಕ್ಸ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಅಂಗವಾಗಿ ಎಲ್.ಕೆ.ಜಿಯಿಂದ ವಿಜ್ಞಾನದವರೆಗೂ ಆಯೋಜಿಸಿದ್ದ ಪಠ್ಯಕ್ರಮ ಅನುಗುಣವಾದ ವಸ್ತು ಪ್ರದರ್ಶನ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬ ಮಕ್ಕಳ ಜ್ಞಾನ ಬೆಳವಣಿಗೆಯಲ್ಲಿ ಸಾಮರ್ಥ್ಯಕ್ಕೆ ಅನುಗುಣ ವ್ಯತ್ಯಾಸವಿರುತ್ತದೆ.

ಚಿಕ್ಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿ ಶಿಕ್ಷಕರು ಪಾಲಕರೂ ತಯಾರಿ ಮಾಡಬೇಕು. ಪಾಲಕರು ತಮ್ಮ ಮಕ್ಕಳನ್ನು ಕೇವಲ ನಿರಂತರ ಶಾಲೆಗೆ ಕಳುಹಿಸುವುದು ರೂಢಿಗತವಾಗಿ ಬಂದಿದೆ. ಮಕ್ಕಳು ಶಾಲೆಯಿಂದ ಮರಳಿದಾಗ ಶಿಕ್ಷಣ ಇಲಾಖೆಯ ಕಾರ್ಯಕ್ರಮಕ್ಕೆ ಜವಾಬ್ದಾರಿಯುತ ಕೆಲಸ ನಿರ್ವಹಿಸಿ ಮಕ್ಕಳ ಓದು. ಅಭ್ಯಾಸ ಅಧ್ಯಯನದ ಬಗ್ಗೆ ನಿಗಾವಹಿಸಬೇಕು ಎಂದರು,ಭವಿಷ್ಯದ ಶಿಕ್ಷಣದ ಪೂರಕ ವಾತಾವರಣ ನೀಡಬೇಕು, ಜ್ಞಾನ ಬೆಳವಣಿಗೆ ಉತ್ತೇಜಿಸಬೇಕು. ಇಲಾಖೆ ಅಧಿಕಾರಿಯಾಗಿ ನನ್ನ ಜವಾಬ್ದಾರಿಯಷ್ಟೇ ಅಲ್ಲ ಎಲ್ಲ ಮಕ್ಕಳ ಪಾಲಕರ ಜವಾಬ್ದಾರಿಯೂ ಅಡಗಿದೆ. ಪಾಲಕರು ಮಕ್ಕಳ ಶಿಕ್ಷಣ ಬೆಳವಣಿಗೆಗೆ ಸಂಸ್ಕಾರಯುತ ಮೌಲ್ಯ ಕೆಲಸ ನಿರ್ವಹಿಸಬೇಕೆಂದರು. ಮಗುವಿನ ಲಾಲನೆ ಪೋಷಣೆ ಬದುಕು ಕೊಡುವುದಷ್ಟೇ ಅಲ್ಲ ಅವರ ಭವಿಷ್ಯವನ್ನೂ ಬೆಳಗುವಂತಾಗಬೇಕು. ಮಿದುಳು ಸಾಮರ್ಥ್ಯಕ್ಕೆ ಅನುಗುಣವಾಗಿ ಬೆಳವಣಿಗೆ ಆಗುತ್ತದೆ. ಪಾಲಕರೂ ಕೂಡಾ ವೇಳೆಯನ್ನು ಶಿಕ್ಷಣಕ್ಕಾಗಿ ತ್ಯಾಗಮಾಡಬೇಕು. ಮನೆಯಲ್ಲಿ ಓದುವಾಗ ಟಿ.ವಿ ಮತ್ತು ಮೊಬೈಲ ಬಳಕೆಯಿಂದ ಪಾಲಕರು ತಂದೆ ತಾಯಿಯರು ದೂರವಿಡಬೇಕು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ, ಮೃತುಂಜಯ ತಿರ್ಲಾಪೂರ ಮಾತನಾಡಿ. ಎಲ್.ಕೆ.ಜಿಯಿಂದ ಪಿಯು ಶಿಕ್ಷಣ ಹಾಗೂ ವೃತ್ತಿಪರ ತರಬೇತಿ ಕಾರ್ಯಕ್ರಮ ನೀಡಲಾಗುತ್ತಿದೆ. ಕಾರಣಕ್ಕೆ ಮಕ್ಕಳ ಜ್ಞಾನ ಬೆಳವಣಿಗೆಯನ್ನು ಸೀಮಿತಗೊಳಿಸದೆ ತರಗತಿ ಪಠ್ಯಕ್ರಮಕ್ಕೆ ಅನುಗುಣವಾಗಿ ಮಕ್ಕಳ ಆಸಕ್ತಿಗೆ ಅನುಗುಣವಾಗಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ವಿಜ್ಞಾನ. ಸಾಮಾಜಿಕ, ಹಾಗೂ ಸಾಮಾನ್ಯ ಜ್ಞಾನದ ಪರಿಕರಗಳು. ಭಾತಶಾಸ್ತ್ರ, ಜೀವವಿಜ್ಞಾನ, ಮಾನವನ ಅಂಗಾಗ ರಚನೆಯಂತಹ ಪ್ರಾತ್ಯಕ್ಷೆತೆ ಇದರಲ್ಲಿ ಸೇರಿವೆ. ಪಾಲಕರು ಸಂಸ್ಥೆಯ ಬೆಳವಣಿಗೆ ಜೊತೆಗೆ ಮಕ್ಕಳ ಶಿಕ್ಷಣ ಬೆಳವಣಿಗೆಯನ್ನೂ ಆಶಿಸುತ್ತಾರೆ. ಪಾಲಕರ ಆಸೆಗೆ ತಕ್ಕಂತೆ ಶಿಕ್ಷಣ ಪೂರಕವಾಗಿ ನೀಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ನರಹರಿ ಕಟ್ಟಿ. ಕಾರ್ಯದರ್ಶಿ ಡಾ. ರಾಣಿ ತಿರ್ಲಾಪೂರ ಸಂಸ್ಥೆಯ ಪ್ರಿನ್ಸಿಪಾಲ ಶ್ರೀನಿವಾಸ್ ಮಡ್ಡಿ, ಉಪನ್ಯಾಸಕರು ಮಕ್ಕಳ ಪಾಲಕರು ಇದ್ದರು.