ಡಾ.ಬಾಲಗಂಗಾಧರ ಶ್ರೀಗಳಿಂದ ಧರ್ಮ ಬೋಧನೆ ಜತೆ ಶೈಕ್ಷಣಿಕ ಸೇವೆ: ಮಹೇಶ್‌

| Published : Jan 21 2024, 01:32 AM IST

ಸಾರಾಂಶ

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿ 40 ವರ್ಷದಲ್ಲೇ ಯಾವ ಮನುಷ್ಯನೂ ಮಾಡಲಾಗದ ಮಹತ್ತರವಾದ ಸಾಧನೆ ಮಾಡಿ ಎಲ್ಲರಿಗೂ ದಾರಿ ದೀಪವಾಗಿದ್ದವರು ಬಾಲಗಂಗಾಧರನಾಥ ಶ್ರೀಗಳು ಎಂದು ಎ.ಎನ್.ಮಹೇಶ್ ಪ್ರತಿಪಾದಿಸಿದರು.

- ಬಿಜಿಎಸ್‌ 79ನೇ ಜಯಂತ್ಯೋತ್ಸವ, 11ನೇ ವರ್ಷದ ಪುಣ್ಯಸ್ಮರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ಧರ್ಮ ಬೋಧನೆಯ ಜೊತೆಗೆ ರಾಜ್ಯಾದ್ಯಂತ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಮೂಲಕ ಮಕ್ಕಳಿಗೆ ಶಿಕ್ಷಣ ತಲುಪಿಸುವಂತ ಮಹತ್ತರವಾದ ಕೆಲಸವನ್ನು ಭೈರವೈಕ್ಯ ಜಗದ್ಗುರು ಬಾಲಗಂಗಾಧರನಾಥ ಸ್ವಾಮೀಜಿಯವರು ಮಾಡಿದ್ದಾರೆ ಎಂದು ಸ್ಕೌಟ್ ಮತ್ತು ಗೈಡ್ಸ್ ನ ರಾಜ್ಯ ಉಪಾಧ್ಯಕ್ಷ ಎ.ಎನ್.ಮಹೇಶ್ ಅವರು ಹೇಳಿದರು.

ನಗರದ ಹೌಸಿಂಗ್ ಬೋರ್ಡ್ ನಲ್ಲಿರುವ ಬಿಜಿಎಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪದ್ಮಭೂಷಣ ಪುರಸ್ಕೃತ ಪರಮಪೂಜ್ಯ ಜಗದ್ಗುರು ಶ್ರೀ ಡಾ.ಬಾಲಗಂಗಾಧರ ನಾಥ ಸ್ವಾಮೀಜಿಯವರ 79ನೇ ಜಯಂತ್ಯೋತ್ಸವ ಹಾಗೂ 11ನೇ ವರ್ಷದ ಪುಣ್ಯಸ್ಮರಣಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅತ್ಯಂತ ಕಡಿಮೆ ದಿನಗಳ ಜೀವಿತಾವಧಿಯಲ್ಲಿಯೇ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಸ್ವಾಮೀಜಿಗಳು ತಮ್ಮ ದಿವ್ಯದೃಷ್ಟಿ ಯ ಮೂಲಕ ಕಾಲೇಜು ಅಭಿವೃದ್ಧಿ ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನೂ ಕೂಡ ಸ್ವತಃ ಗಮನಿಸುತ್ತಿದ್ದರು ಎಂದರು. ಬಿಜಿಎಸ್ ಪ್ರೌಡಶಾಲಾ ವಿಭಾಗದ ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ಆದಿಚುಂಚನಗಿರಿ ಮಠದ ಫೀಠಾಧ್ಯಕ್ಷರಾಗಿ 40 ವರ್ಷದಲ್ಲೇ ಯಾವ ಮನುಷ್ಯನೂ ಮಾಡಲಾಗದ ಮಹತ್ತರವಾದ ಸಾಧನೆ ಮಾಡಿ ಎಲ್ಲರಿಗೂ ದಾರಿ ದೀಪವಾಗಿದ್ದವರು ಶ್ರೀಗಳು. ಒಂದು ಶಾಲೆಯಿಂದ ಆರಂಭವಾದ ಟ್ರಸ್ಟ್ ಇಂದು ದೇಶದಾದ್ಯಂತ 563 ಶಿಕ್ಷಣ ಸಂಸ್ಥೆಗಳು ನಡೆಸುತ್ತಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಸಿಂಧು ಬುಕ್ಸ್ ಡಿಸ್ಟ್ರಿಬ್ಯೂಟರ್ಸ್‌ನ ಎನ್.ಸಿ.ಶಿವಸ್ವಾಮಿ, ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಜೆ.ಜಿ. ಸುರೇಂದ್ರ, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.