ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುದೇಶವನ್ನು ಕಾಡುತ್ತಿರುವ ದೊಡ್ಡ ಜ್ವಲಂತ ಸಮಸ್ಯೆಗಳಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಸಾಗಾಣಿಕೆಯೂ ಒಂದಾಗಿದ್ದು, ಇದನ್ನು ನಿಯಂತ್ರಿಸಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾ.ನೂರುನ್ನಿಸಾ ತಿಳಿಸಿದ್ದಾರೆ.ನಗರದ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸೈಬರ್, ಅರ್ಥಿಕ ಮತ್ತು ಮಾದಕದ್ರವ್ಯ ಅಪರಾದ ಪೊಲೀಸ್‌ಠಾಣೆ, ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಆರ್ಚಡ್ ಮದ್ಯ ವಿರ್ಜನಾ ಮತ್ತು ಸಮಗ್ರ ಪುನರ್ವಸತಿ ಕೇಂದ್ರ ತುಮಕೂರು ವತಿಯಿಂದ ಆಯೋಜಿಸಿದ್ದ ಮಾದಕ ವಸ್ತುಗಳ ದುಬರ್ಳಕೆ ಹಾಗೂ ಅಕ್ರಮ ಸಾಗಾಟದ ವಿರುದ್ದ ಅಂತಾರಾಷ್ಟ್ರೀಯ ದಿನಾಚರಣೆ ಅಂಗವಾಗಿ ಮದ್ಯ, ಮಾದಕ ವಸ್ತುಗಳ ವಿರುದ್ದ ಜನಜಾಗೃತಿ ಮೂಡಿಸುವಲ್ಲಿ ಯುವಜನರ ಪಾತ್ರ ಎಂಬ ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಇಂದು ಪ್ರತಿಷ್ಠಿತ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡ್ರಗ್ಸ್ ಬಳಕೆಯಾಗುತ್ತಿರುವುದನ್ನು ಕಾಣಬಹುದಾಗಿದೆ.ತುಮಕೂರುಜಿಲ್ಲೆಯಲ್ಲಿ ಕಳೆದ 4 ನಾಲ್ಕು ತಿಂಗಳಲ್ಲಿ 26 ಕೆ.ಜಿ. ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಇವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾರೆ ಎಂದರು.ಸ್ನೇಹಿತರ ಒತ್ತಾಯಕ್ಕೋ, ಪ್ರತಿಷ್ಠೆಗಾಗಿ ಸಣ್ಣದಾಗಿ ಆರಂಭವಾದ ಧೂಮಪಾನ, ಮಧ್ಯಪಾನ ನಂತರ ಮಾದಕ ವಸ್ತುಗಳ ಕಡೆಗೆ ನಿಮನ್ನು ಸೆಳೆಯಬಹುದು. ಮುಂದೆ ಅದು ನಿಮ್ಮದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ, ಡಾ.ಎಚ್.ಜಿ.ಸದಾಶಿವಯ್ಯ,ಇತ್ತೀಚಿನ ದಿನಗಳಲ್ಲಿ ದೇಶದ ಬೆನ್ನೆಲುಬಾಗಿರುವ ಯುವ ಜನತೆ ಮಾದಕ ವಸ್ತುಗಳ ಬಳಕೆಯನ್ನು ಹೆಚ್ಚಾಗಿ ಮಾಡುತ್ತಿದ್ದಾರೆ.ಇದರಿಂದ ಭವಿಷ್ಯದ ಭಾರತ ಕಟ್ಟಬೇಕಾದ ಯುವಜನರು ದಾರಿ ತಪ್ಪುತಿದ್ದಾರೆ ಎಂದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಟಿ.ಪಿ.ನಿಜಲಿಂಗಪ್ಪ ವಹಿಸಿದ್ದರು.ಜಿಲ್ಲಾ ಹಿರಿಯ ನಾಗರಿಕರ ಮತ್ತು ವಿಕಲಚೇತನರ ಕಲ್ಯಾಣಾಧಿಕಾರಿ ಚಿದಾನಂದ್ ಮೂರ್ತಿ, ಆರ್ಚೆಡ್ ಮದ್ಯವರ್ಜನ ಕೇಂದ್ರದ ನಿರ್ದೇಶಕ ಡಾ.ಸದಾಶಿವಯ್ಯ, ಉಪನ್ಯಾಸಕರಾದಡಾ.ಮೇಘಾ ಸದಾಶಿವ ವಿಶೇಷ ಉಪನ್ಯಾಸ ನೀಡಿದರು. ಆರ್ಚಡ್ ಮದ್ಯ ವರ್ಜನಾಕೇಂದ್ರದ ಕಾರ್ಯದರ್ಶಿ ಮಾಲಾ ಸದಾಶಿವಯ್ಯ, ಸುಬ್ಬು ಕೃಷ್ಣ ವೈ.ಕೆ, ಮತ್ತಿತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))