ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಸಹಜವಾಗಿ ಟಿಕೆಟ್ ವಂಚಿತರು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ಅಸಮಾಧಾನವನ್ನು ಹೋಗಲಾಡಿಸಲು ಈಗಾಗಲೇ ನಮ್ಮ ನಾಯಕರು ಮುಂದಾಗಿದ್ದಾರೆ ಎಂದು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರಿಗೆ ಪಕ್ಷದಲ್ಲಿ ಜವಬ್ದಾರಿಯುತ ಸ್ಥಾನ ಇದೆ. ಅವರು ಕೂಡ ತಮ್ಮ ವೇದನೆ ಹೇಳಿಕೊಂಡಿದ್ದಾರೆ. ಅದನ್ನೂ ಕೂಡ ನಮ್ಮ ನಾಯಕರು ಸರಿಪಡಿಸುತ್ತಾರೆ ಎಂದರು. ನಳಿನ್ ಕುಮಾರ್ ಕಟೀಲ್ ಹಾಗೂ ಪ್ರತಾಪ್ ಸಿಂಹ ಹೇಳಿಕೆ ನಮಗೆ ಖುಷಿ ಕೊಟ್ಟಿದೆ. ಮೂರನೇ ಬಾರಿಗೆ ಕಮಲ ಅರಳಬೇಕು, ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಗುರಿ ನಮ್ಮದು ಎಂದು ಹೇಳಿದರು.ಬಿಜೆಪಿಯಲ್ಲಿ ಒಕ್ಕಲಿಗರಿಗೆ ಸ್ಥಾನ ಇಲ್ಲ ಎಂದು ಕೆಲವರು ಆರೋಪ ಮಾಡುತ್ತಾರೆ. ಆದರೆ ಅದು ಸುಳ್ಳು. ಬಿಜೆಪಿ ಬಗ್ಗೆ ಆರೋಪ ಮಾಡುವ ದೊಡ್ಡದೊಂದು ಫ್ಯಾಕ್ಟರಿಯೇ ಇದೆ. ಅದರ ಕೆಲಸ ಕೇವಲ ಹುಸಿ ಆರೋಪಗಳನ್ನು ಮಾಡುವುದಾಗಿದೆ ಎಂದರು.ಈಶ್ವರ ಅಸಮಾಧಾನ ವಿಚಾರದ ಬಗ್ಗೆ ಮಾತನಾಡಿದ ಅವರು, 28 ಕ್ಷೇತ್ರದಲ್ಲಿ 25 ಕ್ಷೇತ್ರದಲ್ಲಿ ಬಿಜೆಪಿ ನಿಲ್ಲಬೇಕು ಅಂತ ಹೊಂದಾಣಿಕೆಯಾಗಿದೆ. ಅದರ ಪೈಕಿ 20 ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದೆ. ಆಕಾಂಕ್ಷಿಗಳ ಸಂಖ್ಯೆ ಬಿಜೆಪಿಯಲ್ಲಿ ಸಹಜವಾಗಿ ಜಾಸ್ತಿ ಇದೆ ಎಂದರು. ಬಿಜೆಪಿಯಲ್ಲಿ ಗೌಡರಿಗೆ ಸ್ಥಾನ ಇಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಬಗ್ಗೆ ಪ್ರತಿಭಾರಿಯೂ ಆರೋಪ ಮಾಡುತ್ತಲೆ ಇರುತ್ತಾರೆ. ಬಿಜೆಪಿ ಬಗ್ಗೆ ಆರೋಪ ಮಾಡುವ ದೊಡ್ಡದೊಂದು ಫ್ಯಾಕ್ಟರಿಯೇ ಇದೆ.ಅವರ ಕೆಲಸವೇ ಬಿಜೆಪಿಯನ್ನ ಆರೋಪಿಸುವುದು. ಬಿಜೆಪಿ ಸರ್ವವ್ಯಾಪಿ ಪಕ್ಷ, ಯಾರನ್ನ ಕಡೆಗಣಿಸೋದಿಲ್ಲ ಎಲ್ಲರನ್ನ ಸಮಾನಾವಾಗಿ ನೋಡುತ್ತಾರೆ. ಆ ಸಮುದಾಯ ಈ ಸಮುದಾಯದ ಪರ ಅಂತ ಬಿಜೆಪಿಯಲ್ಲಿ ಇಲ್ಲಾ ಎಂದು ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))