ಸಾರಾಂಶ
ಹಾವೇರಿ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ್ ಶ್ರೀಧರ್ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಮಹಾಒಕ್ಕೂಟ ನೇತೃತ್ವದಲ್ಲಿ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ತಮ್ಮ ಬೇಡಿಕೆಗಳನ್ನು ನೋಡಿದಾಗ ಹಲವಾರು ಬೇಡಿಕೆಗಳು ಆದೇಶವಾಗಿವೆ. ನಮ್ಮ ವ್ಯಾಪ್ತಿಯಲ್ಲಿ ಬರುವ ಬೇಡಿಕೆಗಳನ್ನು ಪೂರೈಸಲಾಗುವುದು. ಮೇಲಧಿಕಾರಿಗಳ ಹಾಗೂ ಸರ್ಕಾರದ ಮಟ್ಟದಲ್ಲಿ ಆಗುವ ಪರಿಹಾರ ಅಲ್ಲಿಯೇ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು, ವಿದ್ಯುತ್ ಹಾಗೂ ಸ್ವಚ್ಛತಾ ಕಾರ್ಯ ಸೇರಿದಂತೆ ಮೂಲಭೂತ ಕೆಲಸ ಮಾಡಲು ತಾವು ಸಹಕಾರ ನೀಡಬೇಕು. ಸರ್ಕಾರ ಸೂಕ್ತವಾದ ಬೇಡಿಕೆಗಳನ್ನು ಈಡೇರಿಸಲು ಮುಂದಾಗಲಿದೆ ಎಂದರು.ಸವಣೂರ-ಹಾವೇರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನಪ್ರಸಾದ ಕಟ್ಟೀಮನಿ, ಶಿಗ್ಗಾವಿ ತಾಪಂ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ. ಜೀನಗಾ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿ ಮಾತನಾಡಿದರು. ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾಒಕ್ಕೂಟದ ಪದಾಧಿಕಾರಿಗಳಾದ ಬಾಪುಗೌಡ ಕೊಪ್ಪದ, ಸತೀಶ ಜಂಗಳಿ ಹಾಗೂ ಪಿಡಿಓ ಸಂಘದ ಚಂದ್ರ ಲಮಾಣಿ ಸೇರಿದಂತೆ ವೃಂದ ಸಂಘದ ಪದಾಧಿಕಾರಿಗಳು ಮಾತನಾಡಿದರು.ಈ ಸಂದರ್ಭದಲ್ಲಿ ಕರಾಪಅ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಚನ್ನವೀರೇಶ ರೂಡಗಿ, ಕಾರ್ಯದರ್ಶಿ ಗುಡ್ಡಪ್ಪ ನಾಯ್ಕ, ಖಜಾಂಚಿ ಮೌಲಾಸಾಬ ಯಲವಿಗಿ, ದಾವಲಸಾಬ ಕಮಗಾಲ, ಸೋಮಶೇಖರ ಏರೇಶಿಮಿ, ಶಂಕರ ಕಿಚಿಡಿ, ನಾಗಯ್ಯ ಬುರಡಿಕಟ್ಟಿಮಠ, ರಮೇಶ ಹುಲಸೋಗಿ, ಬಿಲ್ ಕಲೆಕ್ಟರ್ ಸಂಘದ ಮಧು ದೇಶಿ, ಕ್ಲರ್ಕ್ ಡಾಡಾ ಎಂಟ್ರಿ ಸಂಘದ ಅಧ್ಯಕ್ಷ ಹಾಲೇಶ ಬಾರ್ಕಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಸಂಘದ ತಾಲೂಕಾಧ್ಯಕ್ಷ ಪ್ರಕಾಶ ಉದಗಟ್ಟಿ, ಖಜಾಂಚಿ ನಾಗರಾಜ ನೆಗಳೂರ, ಸರ್ಕಾರ ನೌಕರರ ಸಂಘದ ಹಾನಗಲ್ಲ ತಾಲ್ಲೂಕಾಧ್ಯಕ್ಷ ಕಲ್ಲಪ್ಪ ಚಿಕ್ಕೇರಿ, ಚಂದ್ರಕಾಂತ ಮಣ್ಣವಡ್ಡರ, ಪಿಡಿಓಗಳಾದ ಜರೀನಾಬೇಗಂ, ಗೀತಾ ಕರೆಮ್ಮನವರ, ಯೋಗೇಶ ಚಾಕರಿ, ಶಾಬಾನಾ ನದಾಫ್, ಶಿಲ್ಪಾ ಮುದ್ದಿ, ಸುನೀತಾ ಗರಡಿ ಸೇರಿದಂತೆ ಇತರರು ಇದ್ದರು.