ಕಾರ್ಯಾತ್ಮಕ ವಸ್ತುಗಳು ಹಾಗೂ ಸಾಧನಗಳು ಇಂದಿನ ಎಲೆಕ್ಟ್ರಾನಿಕ್ಸ್‌ ಶಕ್ತಿ ಸಂಗ್ರಹಣೆ, ಸಂವೇದಕಗಳು, ಆರೋಗ್ಯ ತಂತ್ರಜ್ಞಾನ ಮತ್ತು ಕೈಗಾರಿಕ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಅಧ್ಯಯನ ವಿಭಾಗವು ಮಾನಸ ಗಂಗೋತ್ರಿಯ ಐನ್‌ ಸ್ಟಿನ್ ಸಭಾಂಗಣದಲ್ಲಿ ರುಸಾ 2.0 ಯೋಜನೆಯಡಿ ಸಿಬ್ಬಂದಿ ಪುನಶ್ಚೇತನ ಕಾರ್ಯಕ್ರಮವನ್ನು ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿತ್ತು.ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ ಉದ್ಘಾಟಿಸಿ ಮಾತನಾಡಿ, ಕಾರ್ಯಾತ್ಮಕ ವಸ್ತುಗಳು ಹಾಗೂ ಸಾಧನಗಳು ಇಂದಿನ ಎಲೆಕ್ಟ್ರಾನಿಕ್ಸ್‌ ಶಕ್ತಿ ಸಂಗ್ರಹಣೆ, ಸಂವೇದಕಗಳು, ಆರೋಗ್ಯ ತಂತ್ರಜ್ಞಾನ ಮತ್ತು ಕೈಗಾರಿಕ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಿದರು .ಇಂತಹ ಕಾರ್ಯಾಗಾರಗಳು ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳ ನಡುವೆ ಜ್ಞಾನ ವಿನಿಮಯಕ್ಕೆ ವೇದಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ಉಪಕರಣ ಖರೀದಿಸಲು ಮೈಸೂರು ವಿಶ್ವವಿದ್ಯಾನಿಲಯಕ್ಕೆ ನೀಡಲಾದ ಅನುದಾನದ ಕುರಿತು ಮಾತನಾಡಿದರು.ಅಧ್ಯಕ್ಷತೆವಹಿಸಿದ್ದ ಪ್ರೊ.ಎ.ಪಿ. ಜ್ಞಾನಪ್ರಕಾಶ್‌ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಯುವ ಸಂಶೋಧಕರು ಕಾರ್ಯಾತ್ಮಕ ವಸ್ತುಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದು ಕಾಲದ ಅವಶ್ಯಕತೆ. ವಿಜ್ಞಾನ ಸಂಶೋಧನೆಯಲ್ಲಿ ನವೀನ ಚಿಂತನೆ ಹಾಗೂ ಪ್ರಾಯೋಗಿಕ ಅನ್ವಯಿಕತೆಗೆ ಮಹತ್ವವಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಾಧಾರಿತ ಅಧ್ಯಯನದ ಜೊತೆಗೆ ಪ್ರಾಯೋಗಿಕ ಸಂಶೋಧನೆ ಮತ್ತು ಸಾಧನ ನಿರ್ಮಾಣದತ್ತ ಗಮನ ಹರಿಸಬೇಕು ಎಂದು ಅವರು ಕರೆ ನೀಡಿದರು.ಕಾರ್ಯಾಗಾರದಲ್ಲಿ ದೇಶದ ಪ್ರತಿಷ್ಠಿತ ಸಂಸ್ಥೆಗಳ ವಿಷಯ ತಜ್ಞರಾದ ಡಾ.ಕೆ. ಪ್ರಮೋದ, ಡಾ. ಡೇಬಾಸಿಸ್ ಘೋಶ್, ಡಾ.ಪಿ. ಮುತ್ತು ಆಸ್ಟ್ರೇಲಿಯಾದ ಡಾ.ಎಸ್.ಬಿ. ರುದ್ರಸ್ವಾಮಿ, ಡಾ.ಬಿ.ಎಸ್. ಮಧುಕರ್, ಡಾ. ಖಡ್ಕೆ ಉದಯ ಕುಮಾರ ಅವರು ಪಾಲ್ಗೊಂಡು, ನ್ಯಾನೋ ವಸ್ತುಗಳು, ಸ್ಮಾರ್ಟ್ ಮೇಟಿರಿಯಲ್ಸ್‌ ಮಲ್ಟಿ ಫಂಕ್ಷನಲ್‌ ವಸ್ತುಗಳು, ಸುಧಾರಿತ ಸಾಧನ ತಂತ್ರಜ್ಞಾನ ಮತ್ತು ಅವುಗಳ ಭವಿಷ್ಯದ ಬಳಕೆಗಳ ಕುರಿತು ಉಪನ್ಯಾಸನ್ನು ನೀಡಿದರು.ಕಾರ್ಯಾತ್ಮಕ ವಸ್ತುಗಳು ನಮ್ಮ ದಿನನಿತ್ಯದ ಜೀವನವನ್ನು ಸುಲಭ ಮತ್ತು ಉತ್ತಮಗೊಳಿಸಲು ಸಹಾಯಕಾರಿಯಾಗಿದೆ. ಇವುಗಳನ್ನು ಬಳಸಿ ಸೌರ ವಿದ್ಯುತ್ ಫಲಕಗಳು, ಬ್ಯಾಟರಿ ಮತ್ತು ವಿದ್ಯುತ್ ಉಳಿಸುವ ಸಾಧನಗಳನ್ನು ತಯಾರಿಸಲಾಗುತ್ತಿದ್ದು ಇದ್ದರಿಂದ ವಿದ್ಯುತ್ ಸಮಸ್ಯೆ ಕಡಿಮೆಯಾಗಿ ಪರಿಸರವು ಸಂರಕ್ಷಿತವಾಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಈ ವಸ್ತುಗಳ ಸಹಾಯದಿಂದ ರೋಗಗಳನ್ನು ಬೇಗ ಪತ್ತೆ ಹಚ್ಚುವ ಯಂತ್ರಗಳು ವೈದ್ಯಕೀಯ ಪರೀಕ್ಷಾ ಸಾಧನಗಳು ಮತ್ತು ಚಿಕಿತ್ಸೆಗಾಗಿ ಬಳಸುವ ಉಪಕರಣಗಳನ್ನು ಅಭಿವೃದ್ಧಿಯಾಗಿವೆ ಎಂದರು.ಮುಂದಿನ ದಿನಗಳಲ್ಲಿ ಪ್ರಾಯೋಗಿಕ ಅಧಿವೇಶನ ಮತ್ತು ತಾಂತ್ರಿಕ ಚರ್ಚೆ ನಡೆಯದೆ. ಕಾರ್ಯಕ್ರಮದಲ್ಲಿ ವಿಭಾಗದ ಅಧ್ಯಾಪಕರಾದ ಪ್ರೊ.ಎಂ.ಎಸ್. ಶ್ರೀಧರ್, ಪ್ರೊ.ಎಂ.ಎಸ್. ಚಂದ್ರಶೇಖರ್, ಪ್ರೊ.ಎಸ್. ಕೃಷ್ಣವೇಣಿ. ಪ್ರೊ.ಎಚ್.ಬಿ. ರವಿಕುಮಾರ್, ಪ್ರೊ.ಎಂ. ಮಹೇಂದ್ರ ಇದ್ದರು.ಸಂಶೋಧಕರು ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.--------------------eom/mys/dnm/