ಏಕ್ ಶಾಮ್ ಲತಾಜಿ ಕೆ ನಾಮ್ ಸಂಗೀತ ಕಾರ್ಯಕ್ರಮ

| Published : Oct 06 2024, 01:25 AM IST

ಏಕ್ ಶಾಮ್ ಲತಾಜಿ ಕೆ ನಾಮ್ ಸಂಗೀತ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

Ek Sham Lataji Ke Naam Music Show

-ಗಾನಕೋಗಿಲೆ ಲತಾ ಅವರ 95ನೇ ಜನ್ಮ ದಿನ ಸಂಭ್ರಮ

-----

ಕನ್ನಡಪ್ರಭ ವಾರ್ತೆ ಬೀದರ್

ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ, ಭಾರತರತ್ನ ಲತಾ ಮಂಗೇಶ್ಕರ್ ಅವರ 95ನೇ ಜನ್ಮ ದಿನಾಚರಣೆಯನ್ನು ಸಂಗೀತ ಕಲಾ ಮಂಡಳದಿಂದ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆಯಿತು.

"ಏಕ್ ಶಾಮ್ ಲತಾಜಿ ಕೆ ನಾಮ್ " ಸಂಗೀತ ಸಂಜೆ ಕೇಳುಗರ ಮನ ತಣಿಸಿತು. ಸ್ಥಳೀಯ ಕಲಾವಿದರಾದ ಆಬೀದ್ ಅಲಿ ಖಾನ್, ಮಹೇಶ್ವರಿ ಪಾಂಚಾಳ, ಗುರುದೇವ, ಪ್ರಿಯಾಂಕಾ ಗುರುದೇವ, ಶಿವಾನಿ ಸ್ವಾಮಿ ಅವರು ಲತಾ ಮಂಗೇಶ್ಕರ್ ಅವರ ಹಿಟ್ ಹಾಡುಗಳಲ್ಲದೆ ಕಿಶೋರ್‌ಕುಮಾರ್, ಮಹ್ಮದ್ ರಫಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಮುಂತಾದ ಹಾಡುಗಳನ್ನು ಹಾಡಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡವು.

ತಹಸೀಲ್ದಾರ್ ಡಿ.ಜಿ.ಮಹತ್ ಉದ್ಘಾಟಿಸಿ ಮಾತನಾಡಿ, ಸಂಗೀತ ಕಲಾ ಮಂಡಳ ಇಲ್ಲಿನ ಸಂಗೀತಾಸಕ್ತರ ಮನತಣಿಸುವ ಜೊತೆಗೆ, ಕಲಾವಿದರಿಗೆ ಉತ್ತಮ ವೇದಿಕೆ ಸಹ ಒದಗಿಸುತ್ತಿದೆ ಎಂದು ಬಣ್ಣಿಸಿದರು. ಸ್ವತಃ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಮೂರ್ನಾಲ್ಕು ಹಾಡು ಹಾಡಿದ ಮಹತ್ ಅವರು ಎಲ್ಲರನ್ನು ರಂಜಿಸಿದರು. ತಮ್ಮ ಸುಶ್ರಾವ್ಯ ಕಂಠದಲ್ಲಿ ಎಸ್‌ಪಿಬಿ ಹಾಡುಗಳನ್ನು ಹಾಡಿ ಮೋಡಿ ಮಾಡಿದರು.

ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ.ಶೆಟಕಾರ್ ಮಾತನಾಡಿ, ಸಂಗೀತ ಕಲಾ ಮಂಡಳ ಮುಖಾಂತರ ರಾಜೇಂದ್ರಸಿಂಗ್ ಪವಾರ್ ಅವರು ಜಿಲ್ಲೆಯ ಸಂಗೀತ, ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸುತ್ತಿದ್ದಾರೆ ಎಂದರು.

ಪ್ರಮುಖರಾದ ಡಾ.ರಾಜಶೇಖರ ಪಾಟೀಲ್, ಡಾ.ವಿ.ವಿ.ನಾಗರಾಜ್, ಸದಾನಂದ ಜೋಶಿ, ಮಂಗಲಾ ಭಾಗವತ್, ಟಿ.ಎಸ್.ರಶ್ಮಿ, ವಿಜಯಕುಮಾರ ಸೋನಾರೆ, ರಾಜಕುಮಾರ ಹೆಬ್ಬಾಳೆ, ರಮೇಶ ಗೋಯಲ್, ಎಸ್.ಆರ್.ಸಂಗಮಕರ್ ಇತರರಿದ್ದರು. ಮಹ್ಮದ್ ಗೌಸ್ ನಿರೂಪಿಸಿದರು.

--

ಚಿತ್ರ 3ಬಿಡಿಆರ್58

ಬೀದರ್ ಸಂಗೀತ ಕಲಾ ಮಂಡಳದಿಂದ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಭಾರತರತ್ನ ಲತಾ ಮಂಗೇಶ್ಕರ್ ಅವರ ಜನ್ಮ ದಿನಾಚರಣೆ ನಿಮಿತ್ತ ಸಂಗೀತ ಕಾರ್ಯಕ್ರಮ ನಡೆಯಿತು.

--